ಸೌದಿಯಿಂದ ತೈಲ;ರಷ್ಯಾದಿಂದ ಕ್ಷಿಪಣಿ ಖರೀದಿಸುವ ಭಾರತದ ಯೋಜನೆ ನಿಷ್ಪ್ರಯೋಜಕ: ಯುಎಸ್

7

ಸೌದಿಯಿಂದ ತೈಲ;ರಷ್ಯಾದಿಂದ ಕ್ಷಿಪಣಿ ಖರೀದಿಸುವ ಭಾರತದ ಯೋಜನೆ ನಿಷ್ಪ್ರಯೋಜಕ: ಯುಎಸ್

Published:
Updated:

ವಾಷಿಂಗ್ಟನ್‌: ಇರಾನ್‌ನಿಂದ ತೈಲ ಹಾಗೂ ರಷ್ಯಾದಿಂದ ಎಸ್‌–400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ ಖರೀದಿಸಲು ಭಾರತ ನಿರ್ಧರಿಸಿರುವುದು ‘ನಿಷ್ಪ್ರಯೋಜಕ’ ಮತ್ತು ಇದನ್ನು ಅಮೆರಿಕ ಅತ್ಯಂತ ಗಂಭೀರವಾಗಿ ಅವಲೋಕನ ನಡೆಸುತ್ತಿದೆ ಎಂದು ಅಮೆರಿಕ ರಾಜ್ಯ ಇಲಾಖೆ ತಿಳಿಸಿದೆ.

2015ರಲ್ಲಿ ಇರಾನ್‌ ಜತೆಗೆ ಮಾಡಿಕೊಂಡಿದ್ದ ನಾಗರಿಕ ಪರಮಾಣು ಒಪ್ಪಂದವನ್ನು ಮೇ ತಿಂಗಳಲ್ಲಿ ರದ್ದುಪಡಿಸಿರುವ ಅಮೆರಿಕ, ನವೆಂಬರ್‌ 4ರ ನಂತರ ಇರಾನ್‌ನ ತೈಲ ಕ್ಷೇತ್ರದ ಮೇಲೆ ಸಂಪೂರ್ಣ ನಿರ್ಬಂಧ ಹೇರಲು ನಿರ್ಧರಿಸಿದೆ.

ಸೌದಿಯಿಂದ ಕಚ್ಚಾ ತೈಲ ಪೂರೈಕೆ?

ನವೆಂಬರ್‌ 4ರ ನಂತರವೂ ಭಾರತ ಇರಾನ್‌ನಿಂದ ತೈಲ ಖರೀದಿ ಮುಂದುವರಿಸಲಿರುವ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಾರ್ವಜನಿಕ ಆಡಳಿತ ಇಲಾಖೆಯ ರಾಜ್ಯ ಖಾತೆ ವಕ್ತಾರೆ ಹೀಥರ್‌ ನೌರ್ಟ್‌, ಇದು ‘ಪ್ರಯೋಜನರಹಿತ’ ಎಂದಿದ್ದಾರೆ.

ಇರಾನ್ ಮೇಲೆ ಅಮೆರಿಕ ನಿರ್ಬಂಧ: ಭಾರತಕ್ಕೆ ಸೌದಿಯಿಂದ ಹೆಚ್ಚುವರಿ ಕಚ್ಚಾ ತೈಲ

‘ನವೆಂಬರ್‌ನಲ್ಲಿ ಇರಾನ್‌ನಿಂದ ತೈಲ ಖರೀದಿಸಲಾಗುವುದು. ಇದಕ್ಕಾಗಿ ಎರಡು ಕಂಪನಿಗಳು ಈಗಾಗಲೇ ಪ್ರಸ್ತಾವ ಸಲ್ಲಿಸಿವೆ’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಇತ್ತೀಚೆಗೆ ಹೇಳಿದ್ದರು.

ಇರಾನ್‌ನಿಂದ ತೈಲ: ಭಾರತಕ್ಕೆ ಅಮೆರಿಕ ಎಚ್ಚರಿಕೆ

ಆದರೆ ಇರಾನ್‌ನಿಂದ ಪೆಟ್ರೋಲ್‌ ಖರೀದಿಸುವ ಪಾಲುದಾರ ರಾಷ್ಟ್ರಗಳಿಗೆ ಗುರುವಾರವೂ ಎಚ್ಚರಿಕೆ ಸಂದೇಶ ರವಾನಿಸಿದ್ದ ನೌರ್ಟ್‌, ‘ನವೆಂಬರ್‌ 04ರ ಬಳಿಕವೂ ತೈಲ ಖರೀದಿ ಮುಂದುವರಿಸಿದರೆ ಪರಿಣಾಮ ಎದುರಿಸಬೇಕಾದೀತು. ಈಗಾಗಲೇ ಇರಾನ್‌ನಿಂದ ತೈಲ ಖರೀದಿಸುವ ಪಾಲುದಾರ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಲಾಗಿದೆ’ ಎಂದಿದ್ದರು.

ಅಮೆರಿಕ ಒತ್ತಡಕ್ಕೆ ಮಣಿಯದ ಭಾರತ: ಇರಾನ್‌ನಿಂದ ಕಚ್ಚಾತೈಲ ಆಮದು ಅಬಾಧಿತ

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !