ಶನಿವಾರ, ಡಿಸೆಂಬರ್ 14, 2019
25 °C

ಇಬ್ಬರು ಹೆಣ್ಣುಮಕ್ಕಳನ್ನು ಕೊಂದು 8ನೇ ಮಹಡಿಯಿಂದ ಜಿಗಿದ ದಂಪತಿ ಮತ್ತು ಮಹಿಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೊಯಿಡಾ: ನಿದ್ದೆಯಲ್ಲಿದ್ದ ಇಬ್ಬರು ಪುತ್ರಿಯರನ್ನು ಕೊಲೆ ಮಾಡಿದ ದಂಪತಿ 8ನೇ ಮಹಡಿಯಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಮುಂಜಾನೆ ಇಂದಿರಾಪುರಂನಲ್ಲಿ ನಡೆದಿದೆ.

ಗಾಜಿಯಾಬಾದ್‌ನ ಅಪಾರ್ಟ್‌ಮೆಂಟ್‌ವೊಂದರ ಕಾಂಪ್ಲೆಕ್ಸ್‌ನ 8ನೇ ಮಹಡಿಯಿಂದ ವ್ಯಕ್ತಿಯ ಎರಡನೇ ಹೆಂಡತಿ ಎಂದು ನಂಬಲಾದ ಮತ್ತೋರ್ವ ಮಹಿಳೆ ಕೂಡ ದಂಪತಿಯೊಂದಿಗೆ ಜಿಗಿದಿದ್ದಾಳೆ. ಗಂಭೀರ ಸ್ಥಿತಿಯಲ್ಲಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದಂಪತಿ ಜಿಗಿಯುವ ಮುನ್ನ ನಿದ್ದೆಯಲ್ಲಿದ್ದ ಮಕ್ಕಳನ್ನು ಕೊಂದಿದ್ದಾರೆ. ಕೌಟುಂಬಿಕ ಮತ್ತು ಹಣಕಾಸಿನ ಮುಗ್ಗಟ್ಟಿನಿಂದಾಗಿ ಸಾಮೂಹಿಕ ಆತ್ಮಹತ್ಯೆ ಮತ್ತು ಕೊಲೆ ನಡೆದಿದೆ. ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಮುಂಜಾನೆ 5ಗಂಟೆ ಸುಮಾರಿಗೆ ಮೂವರು ಕಟ್ಟಡದ ಮೇಲಿಂದ ಜಿಗಿದಿದ್ದಾರೆ. ಓರ್ವ ಪುತ್ರಿಯ ಕೊಠಡಿಯಲ್ಲಿ ಆತ್ಮಹತ್ಯೆ ಪತ್ರ ಲಭ್ಯವಾಗಿದೆ ಎಂದು ನ್ಯೂಸ್ ನೇಷನ್ ವರದಿ ಮಾಡಿದ್ದು, 5ಗಂಟೆ ಸುಮಾರಿನಲ್ಲಿ ಜೋರಾಗಿ ಬಿದ್ದ ಶಬ್ದ ಕೇಳಿಸಿತು. ಸ್ಥಳಕ್ಕೆ ಹೋಗಿ ನೋಡಿದಾಗ ದೇಹಗಳು ಕಂಡುಬಂದವು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ಸೆಕ್ಯುರಿಟಿ ಗಾರ್ಡ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು