ರಚನಾತ್ಮಕ ಮಾತುಕತೆಯಿಂದ ಶಾಂತಿ ಸ್ಥಾಪನೆ

ಶುಕ್ರವಾರ, ಏಪ್ರಿಲ್ 26, 2019
24 °C
ನಿರ್ಗಮಿಸುತ್ತಿರುವ ಪಾಕ್‌ ಹೈಕಮಿಷನರ್‌ ಮಹಮೂದ್‌ ವಿಶ್ವಾಸ

ರಚನಾತ್ಮಕ ಮಾತುಕತೆಯಿಂದ ಶಾಂತಿ ಸ್ಥಾಪನೆ

Published:
Updated:

ನವದೆಹಲಿ: ‘ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ನಂತರ ಉಭಯ ದೇಶಗಳು ರಚನಾತ್ಮಕ ಮಾತುಕತೆಯಲ್ಲಿ ತೊಡಗಬೇಕು. ಎರಡೂ ದೇಶಗಳ ನಡುವಿನ ವ್ಯಾಜ್ಯಗಳನ್ನು ಪರಿಹರಿಸುವ ಯತ್ನ ಮಾಡಿದಲ್ಲಿ ಶಾಂತಿ ಸ್ಥಾಪನೆ ಸಾಧ್ಯ’ ಎಂದು ನಿರ್ಗಮಿಸುತ್ತಿರುವ, ಭಾರತದಲ್ಲಿನ ಪಾಕಿಸ್ತಾನದ ಹೈಕಮಿಷನರ್ ಸೊಹೇಲ್‌ ಮಹಮೂದ್‌ ಹೇಳಿದ್ದಾರೆ.

ಪಿಟಿಐಗೆ ಸಂದರ್ಶನ ನೀಡಿರುವ ಅವರು, ‘ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ರಾಜತಾಂತ್ರಿಕ ಪ್ರಯತ್ನ ಮತ್ತು ಮಾತುಕತೆ ಅಗತ್ಯ’ ಎಂದು ಪ್ರತಿಪಾದಿಸಿದರು. 

‘ಪಾಕಿಸ್ತಾನದ ಬಗ್ಗೆ ಭಾರತದಲ್ಲಿರುವ ಅಭಿಪ್ರಾಯ, ಇಲ್ಲಿನ ಜನತೆಗೆ ನೀಡುತ್ತಿರುವ ಚಿತ್ರಣದ ಮರುಪರಿಶೀಲನೆಯೂ ಅಗತ್ಯ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !