‘ಪಾಕಿಸ್ತಾನದತ್ತ ಹರಿಯುವ ನೀರನ್ನು ತಡೆಯಲಾಗದು’

ಬುಧವಾರ, ಮಾರ್ಚ್ 27, 2019
26 °C

‘ಪಾಕಿಸ್ತಾನದತ್ತ ಹರಿಯುವ ನೀರನ್ನು ತಡೆಯಲಾಗದು’

Published:
Updated:

ಇಸ್ಲಾಮಾಬಾದ್‌: ‘ಪಾಕಿಸ್ತಾನದತ್ತ ಹರಿಯುವ ನೀರನ್ನು ಭಾರತ ತಡೆಯಲಾಗದು. ಒಂದು ವೇಳೆ, ಭಾರತ ಈ ಕ್ರಮ ಕೈಗೊಂಡರೆ ಅದು ಸಿಂಧೂ ನದಿ ನೀರು ಒಪ್ಪಂದದ ಉಲ್ಲಂಘನೆಯಾಗಲಿದೆ’ ಎಂದು ಪಾಕಿಸ್ತಾನದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ರಾವಿ, ಸಟ್ಲೇಜ್‌ ಮತ್ತು ಬಿಯಾಸ್‌ ನದಿ ನೀರನ್ನು ಪಾಕಿಸ್ತಾನದತ್ತ ಹರಿಯದಂತೆ ಭಾರತ ತಡೆದರೆ ಪಾಕಿಸ್ತಾನ ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಲಿದೆ ಎಂದೂ ತಿಳಿಸಿದ್ದಾರೆ.

‘ಭಾರತ ನೀರಿನ ವಿಷಯದಲ್ಲಿ ಕಲಹಕ್ಕಿಳಿಯುವ ಅಥವಾ ಪ್ರಚೋದಿಸುವ ಕೆಲಸ ಮಾಡುತ್ತಿದೆ’ ಎಂದೂ ಸಿಂಧೂ ನದಿ ಶಾಶ್ವತ ಆಯೋಗದ ಅಧಿಕಾರಿಯೊಬ್ಬರು ದೂರಿದ್ದಾರೆ.

ಪುಲ್ವಾಮಾ ದಾಳಿ ನಂತರ ಮಾತನಾಡಿದ್ದ ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಪಾಕಿಸ್ತಾನಕ್ಕೆ ಸೇರಬೇಕಾದ ನೀರಿನ ಪಾಲನ್ನು ತಡೆಯವುದಾಗಿ ಹೇಳಿದ್ದರು.

‘ಪಾಕಿಸ್ತಾನದತ್ತ ಹರಿಯುವ ನೀರಿನ ದಿಕ್ಕನ್ನು ಬದಲಾಯಿಸಲು ಭಾರತಕ್ಕೆ ಹಲವು ವರ್ಷಗಳೇ ಬೇಕಾಗುತ್ತವೆ’ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

1960ರಲ್ಲಿ ಉಭಯ ದೇಶಗಳು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ಇದರನ್ವಯ, ಸಿಂಧೂ, ಝೀಲಂ ಮತ್ತು ಚೇನಾಬ್‌ ನದಿ ನೀರು ಹಂಚಿಕೆಯ ಅಧಿಕಾರವನ್ನು ಪಾಕಿಸ್ತಾನಕ್ಕೆ, ರಾವಿ, ಬಿಯಾಸ್‌ ಮತ್ತು ಸಟ್ಲೇಜ್‌ ನದಿಗಳ ಹಂಚಿಕೆಯ ಅಧಿಕಾರವನ್ನು ಭಾರತಕ್ಕೆ ನೀಡಲಾಯಿತು.

ಆಯಾ ನದಿಗಳ ಬಳಕೆ ಮತ್ತು ಹರಿಯುವಿಕೆಯ ನಿಯಂತ್ರಣದ ಜವಾಬ್ದಾರಿ ಆಯಾ ದೇಶಕ್ಕೆ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !