ಸ್ಥಳೀಯ ಭಾಷೆಗಳಲ್ಲಿ ವೆಬ್‌ಸೈಟ್

7
9 ಭಾಷೆಗಳಲ್ಲಿ ಈಗಾಗಲೇ ಕೆಲಸ ಆರಂಭ

ಸ್ಥಳೀಯ ಭಾಷೆಗಳಲ್ಲಿ ವೆಬ್‌ಸೈಟ್

Published:
Updated:

ಕೋಲ್ಕತ್ತ: ವೆಬ್‌ಸೈಟ್‌ಗಳ ಹೆಸರು ಇಂಗ್ಲಿಷ್‌ನಲ್ಲಿಯೇ ಇರಬೇಕು ಎನ್ನುವ ಕಾಲ ಮುಗಿದುಹೋಗಲಿದೆ. ಇನ್ನುಮುಂದೆ ಸ್ಥಳೀಯ ಭಾಷೆಗಳಲ್ಲಿಯೇ ವೆಬ್‌ಸೈಟ್‌ಗಳ ಹೆಸರು ಲಭ್ಯವಾಗಲಿದೆ. 

ಕನ್ನಡ ಸೇರಿದಂತೆ ಭಾರತದ 22 ಅಧಿಕೃತ ಭಾಷೆಗಳಲ್ಲಿ ವೆಬ್‌ಸೈಟ್‌ಗಳ ಹೆಸರುಗಳು ದೊರಕಲಿವೆ. ಈ ನಿಟ್ಟಿನಲ್ಲಿ, ಜಾಗತಿಕ ಮಟ್ಟದಲ್ಲಿ ವೆಬ್‌ಸೈಟ್‌ಗಳ ಹೆಸರಿನ ವ್ಯವಸ್ಥೆ (ಡಿಎನ್‌ಎಸ್) ನಿರ್ವಹಣೆ ಹೊಣೆ ಹೊಂದಿರುವ ಸ್ವಯಂ ಸೇವಾ ಸಂಸ್ಥೆಯಾದ ‘ನಿಗದಿತ ಹೆಸರು ಮತ್ತು ಸಂಖ್ಯೆಗಳ ಅಂತರ್ಜಾಲ ಕಾರ್ಪೊರೇಷನ್’ (ಐಸಿಎಎನ್ಎನ್‌) ಕಾರ್ಯ ನಿರ್ವಹಿಸುತ್ತಿದೆ.

‘ಕನ್ನಡ, ದೇವನಾಗರಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ 9 ಭಾಷೆಗಳಲ್ಲಿ ಈಗಾಗಲೇ ಕೆಲಸ ಸಾಗುತ್ತಿದೆ’ ಎಂದು ಐಸಿಎಎನ್ಎನ್‌ ಭಾರತ ವಿಭಾಗದ ಮುಖ್ಯಸ್ಥ ಸಮೀರನ್ ಗುಪ್ತಾ ಹೇಳಿದ್ದಾರೆ. 

ಕನ್ನಡ, ದೇವನಾಗರಿ, ಗುಜರಾತಿ, ಒರಿಯಾ, ತೆಲುಗು ಹಾಗೂ ಗುರ್ಮುಖಿ ಭಾಷೆಗಳಲ್ಲಿ ವೆಬ್‌ಸೈಟ್‌ಗಳ ಹೆಸರು ರೂಪಿಸುವ ಪ್ರಸ್ತಾವವನ್ನು ಐಸಿಎಎನ್ಎನ್‌ ತನ್ನ ವೆಬ್‌ಸೈಟ್ www.icann.org/idn ನಲ್ಲಿ ಪ್ರಕಟಿಸಿದೆ. ಸಾರ್ವಜನಿಕರು ಇಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದಾಗಿದೆ ಎಂದು ಗುಪ್ತಾ ತಿಳಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !