ಮೈತ್ರಿಕೂಟಕ್ಕೆ ಮರಳಲು ನಿತೀಶ್‌ಗೆ ಆಹ್ವಾನ

7

ಮೈತ್ರಿಕೂಟಕ್ಕೆ ಮರಳಲು ನಿತೀಶ್‌ಗೆ ಆಹ್ವಾನ

Published:
Updated:

ಪಟ್ನಾ: ಆದಷ್ಟೂ ಬೇಗ ಮೈತ್ರಿಕೂಟಕ್ಕೆ ಮರಳುವಂತೆ ಜೆಡಿಯು ನಾಯಕ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಬಿಹಾರ ಕಾಂಗ್ರೆಸ್‌ ಮಂಗಳವಾರ ಆಹ್ವಾನ ನೀಡಿದೆ.

ಆರ್‌ಜೆಡಿ ನಾಯಕತ್ವಕ್ಕಾಗಿ ಲಾಲು ಪ್ರಸಾದ್‌ ಕುಟುಂಬದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಬೇಸತ್ತಿರುವ ಬಿಹಾರದ ಕಾಂಗ್ರೆಸ್‌ ನಾಯಕರು, ನಿತೀಶ್‌ ಅವರನ್ನು ಮರಳಿ ಮೈತ್ರಿಕೂಟಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಆರ್‌ಜೆಡಿ ನಾಯಕ ಮತ್ತು ಲಾಲು ಪ್ರಸಾದ್‌ ಅವರ ಪುತ್ರ ತೇಜಸ್ವಿ ಯಾದವ್‌ ಇನ್ನೂ ಎಳಸು. ಹಾಗಾಗಿ ಮೈತ್ರಿಕೂಟಕ್ಕೆ ನಿತೀಶ್‌ ಕುಮಾರ್‌ ಅವರನ್ನು ಕರೆ ತರುವ ಅನಿವಾರ್ಯತೆ ಇದೆ ಎಂದು ಕಾಂಗ್ರೆಸ್‌ ಶಾಸಕ ಮುನ್ನಾ ತಿವಾರಿ ಹೇಳಿದ್ದಾರೆ.

ಈ ರೀತಿ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ನಾಲ್ಕನೇ ಶಾಸಕ ಇವರಾಗಿದ್ದಾರೆ.

ಬಿಹಾರ ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷ ಕೌಕಾಬ್‌ ಖಾದ್ರಿ ಕೂಡ ನಿತೀಶ್‌ ಅವರನ್ನು ಹಾಡು ಹೊಗಳಿದ್ದಾರೆ. ನಿತೀಶ್‌ ಅವರೊಬ್ಬ ಒಳ್ಳೆಯ ನಾಯಕ. ಆದರೆ, ಅವರ ಆಯ್ಕೆ (ಎನ್‌ಡಿಎ) ಚೆನ್ನಾಗಿಲ್ಲ ಎಂದು ಅವರು ಹೇಳಿದ್ದಾರೆ.

 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !