ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎನ್‌ಎಕ್ಸ್ ಮೀಡಿಯಾ ಪ್ರಕರಣ: ಚಿದಂಬರಂ,ಪುತ್ರ ಕಾರ್ತಿ ವಿರುದ್ಧ ಸಿಬಿಐ ಆರೋಪಪಟ್ಟಿ

Last Updated 18 ಅಕ್ಟೋಬರ್ 2019, 10:48 IST
ಅಕ್ಷರ ಗಾತ್ರ

ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ(74) ಹಾಗೂ ಅವರ ಪುತ್ರನ ವಿರುದ್ಧ ಸಿಬಿಐ ಶುಕ್ರವಾರ ದೆಹಲಿ ಕೋರ್ಟ್‌ನಲ್ಲಿ ಚಾರ್ಜ್‌ ಶೀಟ್‌ ಸಲ್ಲಿಸಿದೆ.

ಸಿಬಿಐನಿಂದ ಆಗಸ್ಟ್‌ 21ರಂದು ಬಂಧನಕ್ಕೆ ಒಳಗಾದ ಚಿದಂಬರಂ, ಅವರ ಪುತ್ರ ಕಾರ್ತಿ ಚಿದಂಬರಂ ಹಾಗೂ ಐಎನ್‌ಎಕ್ಸ್‌ ಮೀಡಿಯಾದ ಮಾಜಿ ಪ್ರೊಮೋಟರ್‌ಗಳಾದ ಪೀಟರ್‌ ಮುಖರ್ಜಿ ಮತ್ತು ಇಂದ್ರಾಣಿ ಮುಖರ್ಜಿ ಒಳಗೊಂಡಂತೆ ಒಟ್ಟು 15 ಜನರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿದಂಬರಂ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ) ಅಕ್ಟೋಬರ್‌ 16ರಂದು ಬಂಧಿಸಿದೆ. ಐಎನ್‌ಎಕ್ಸ್‌ ಸಂಸ್ಥೆಗೆ ₹305 ಕೋಟಿ ವಿದೇಶಿ ನೇರ ಬಂಡವಾಳ ಸ್ವೀಕರಿಸಲು ಅನಧಿಕೃತವಾಗಿ ಅನುಮತಿ ನೀಡಿರುವ ಪ್ರಕರಣವನ್ನು ಚಿದಂಬರಂ ಎದುರಿಸುತ್ತಿದ್ದಾರೆ.ಅವ್ಯವಹಾರ ನಡೆದ ಸಮಯದಲ್ಲಿ ಪಿ.ಚಿದಂಬರಂ ಹಣಕಾಸು ಸಚಿವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT