ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಪೇ’ ಆರಂಭಿಸಿದ ಐಆರ್‌ಸಿಟಿಸಿ

ಪ್ರಯಾಣಿಕರಿಗೆ ಹಣ ಪಾವತಿಸುವ ವ್ಯವಸ್ಥೆ
Last Updated 28 ಫೆಬ್ರುವರಿ 2019, 19:05 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ) ಈಗ ತನ್ನದೇ ಆದ ಹಣ ಪಾವತಿ ವ್ಯವಸ್ಥೆ ಆರಂಭಿಸಿದೆ.

‘ಐಆರ್‌ಸಿಟಿಸಿ ಐಪೇ’ ಹೆಸರಿನಲ್ಲಿ ಪ್ರಯಾಣಿಕರಿಗಾಗಿ ಈ ಸೌಲಭ್ಯ ಕಲ್ಪಿಸಲಾಗಿದೆ. ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌, ಯುಪಿಐ ಹಾಗೂ ಅಂತರರಾಷ್ಟ್ರೀಯ ಕಾರ್ಡ್‌ಗಳ ಬಳಕೆಯ ಆಯ್ಕೆಯನ್ನು ನೀಡಲಾಗಿದೆ. ಬ್ಯಾಂಕ್‌ಗಳ ಜತೆ ನೇರ ಸಂಪರ್ಕ ಜಾಲ ಹೊಂದಿರುವುದರಿಂದ ಹಣ ಪಾವತಿಸುವ ವ್ಯವಸ್ಥೆಯಲ್ಲಿ ಐಆರ್‌ಸಿಟಿಸಿ ಸಂಪೂರ್ಣ ನಿಯಂತ್ರಣ ಹೊಂದಿದೆ. ಇದರಿಂದ, ಯಾವುದೇ ಕಾರಣಕ್ಕೂ ಹಣ ಪಾವತಿಸುವುದು ವಿಳಂಬವಾಗುವುದಿಲ್ಲ ಅಥವಾ ವಿಫಲವಾಗುವುದಿಲ್ಲ. ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT