ಶುಕ್ರವಾರ, ಜೂನ್ 25, 2021
20 °C

ಅಜಿತ್‌ ನಡೆ ಶರದ್‌ಗೆ ತಿಳಿದಿತ್ತೇ: ದೇವೇಂದ್ರ ಫಡಣವೀಸ್‌ ಪ್ರಶ್ನೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವುದಕ್ಕಾಗಿ ಎನ್‌ಸಿಪಿ ಮುಖಂಡ ಅಜಿತ್‌ ಪವಾರ್‌ ಅವರೇ ತಮ್ಮನ್ನು ಸಂಪರ್ಕಿಸಿದ್ದರು ಎಂದು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ಹೇಳಿದ್ದಾರೆ. 

‘ಬಿಜೆಪಿಯ ಜತೆ ಕೈಜೋಡಿಸಲು ಬಯಸಿದ್ದ ಶಾಸಕರ ಜತೆಗೆ ನನ್ನನ್ನು ಅವರು ಮಾತನಾಡಿಸಿದ್ದರು. ಬಿಜೆಪಿಯನ್ನು ಬೆಂಬಲಿಸುವ ವಿಚಾರವನ್ನು ಶರದ್‌ ಪವಾರ್‌ (ಎನ್‌ಸಿಪಿ ಮುಖ್ಯಸ್ಥ) ಜತೆಗೆ ಚರ್ಚಿಸಿದ್ದಾಗಿ ಅಜಿತ್‌ ನನಗೆ ಹೇಳಿದ್ದರು’ ಎಂದೂ ತಿಳಿಸಿದ್ದಾರೆ.

‘ಕಾಂಗ್ರೆಸ್‌ ಜತೆಗೆ ಹೋಗಿ ಸರ್ಕಾರ ರಚಿಸುವುದನ್ನು ಎನ್‌ಸಿಪಿ ಬಯಸುವುದಿಲ್ಲ. ಮೂರು ಪಕ್ಷಗಳ ಸರ್ಕಾರ ಸ್ಥಿರವಾಗಿರುವುದು ಸಾಧ್ಯವಿಲ್ಲ. ಸ್ಥಿರ ಸರ್ಕಾರಕ್ಕಾಗಿ ಬಿಜೆಪಿ ಜತೆ ಸೇರಲು ಸಿದ್ಧ ಎಂದು ಅಜಿತ್‌ ಹೇಳಿದ್ದರು’ ಎಂದು ಫಡಣವೀಸ್‌ ಹೇಳಿದ್ದಾರೆ.

ಶಿವಸೇನಾ ನೇತೃತ್ವದಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಬೆಂಬಲಿತ ಸರ್ಕಾರ ರಚಿಸುವ ಮಾತುಕತೆ ಅಂತಿಮ ಹಂತದಲ್ಲಿದ್ದಾಗಲೇ ನ. 23ರಂದು ಫಡಣವೀಸ್‌ ಮುಖ್ಯಮಂತ್ರಿಯಾಗಿ ಮತ್ತು ಅಜಿತ್‌ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಸರ್ಕಾರ 80 ತಾಸು ಅಸ್ತಿತ್ವದಲ್ಲಿತ್ತು. ಈ ಪ್ರಯತ್ನವು ತಿರುಗುಬಾಣವಾಯಿತು ಎಂದು ಅವರು ಒಪ್ಪಿಕೊಂಡಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು