ಐ.ಎಸ್‌ ಸಂಪರ್ಕ ಶಂಕೆ: ಇಬ್ಬರ ಬಂಧನ

7

ಐ.ಎಸ್‌ ಸಂಪರ್ಕ ಶಂಕೆ: ಇಬ್ಬರ ಬಂಧನ

Published:
Updated:

ನವದೆಹಲಿ: ಐ.ಎಸ್‌ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿರುವ ಶಂಕೆ ಮೇಲೆ, ಹೈದರಾಬಾದ್‌ನ ಇಬ್ಬರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಭಾನುವಾರ ಬಂಧಿಸಿದೆ.

ಐ.ಎಸ್‌ ಪರವಾಗಿ ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಭಾರತೀಯ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡಲಾಗುತ್ತಿದೆ ಎನ್ನುವ ಶಂಕೆ ಇದೆ. ಈ ಸಂಬಂಧ ಎನ್‌ಐಎ 2016ರಿಂದಲೂ ಪ್ರಕರಣವೊಂದರ ತನಿಖೆ ನಡೆಸುತ್ತಿದೆ.

ಹೈದರಾಬಾದ್‌ನ ಮೊಹಮ್ಮದ್ ಅಬ್ದುಲ್ಲಾ ಬಸಿತ್ (24) ಹಾಗೂ ಮೊಹಮ್ಮದ್‌ ಅಬ್ದುಲ್‌ ಖದೀರ್ (19) ಎನ್ನುವವರನ್ನು ಬಂಧಿಸಲಾಗಿದೆ ಎಂದು ಎನ್‌ಐಎ ವಕ್ತಾರ ತಿಳಿಸಿದ್ದಾರೆ.

ಇದಕ್ಕೂ ಮೊದಲು ಇದೇ ಪ್ರಕರಣದಲ್ಲಿ ಬಂಧಿಸಲಾಗಿದ್ದ ಇಬ್ಬರು ತಪ್ಪಿತಸ್ಥರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಮತ್ತೊಬ್ಬ ಆರೋಪಿ ಅದ್ನಾನ್ ಹಸನ್ ವಿರುದ್ಧ ವಿಚಾರಣೆ ನಡೆಯುತ್ತಿದೆ.

ಹಸನ್‌, ಆತನ ಸಹಚರರ ಜತೆ ಬಸಿತ್ ಐ.ಎಸ್ ಪರ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದುದು ಈಚೆಗೆ ನಡೆದ ತನಿಖೆಯಿಂದ ತಿಳಿದುಬಂದಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !