ಶನಿವಾರ, ಡಿಸೆಂಬರ್ 7, 2019
16 °C

ಮುಂಬೈ ದಾಳಿ: ಬದುಕುಳಿದ ಬಾಲಕನಿಗೆ ಮೋದಿ ಶುಭಾಶಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜರುಸಲೇಂ: ಮುಂಬೈ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಬದುಕುಳಿದ ಇಸ್ರೇಲ್‌ ಬಾಲಕ ಮೋಶೆ ಹೋಲ್ಟ್ಜ್‌ ಬರ್ಗ್‌ 13 ವರ್ಷಕ್ಕೆ ಕಾಲಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ. ತಂದೆ– ತಾಯಿಯನ್ನು ಕಳೆದುಕೊಂಡರೂ ಈತ ಬದುಕುಳಿದ ಕಥೆ ‘ಪವಾಡ’ ದಂತಿದೆ. ಈತನ ಧೈರ್ಯ ಇತರರಿಗೂ ಸ್ಫೂರ್ತಿ ಆಗಲಿ ಎಂದು ಪ್ರಧಾನಿ ಹೇಳಿದ್ದಾರೆ.

ದಾಳಿ ನಡೆದ ಸಂದರ್ಭದಲ್ಲಿ ಮೋಶೆ ಎರಡು ವರ್ಷದ ಬಾಲಕನಾಗಿದ್ದ. ‘ಜೀವನ ಪಯಣದ ಮಹತ್ವದ ಪರಿವರ್ತನೆಯತ್ತ ಸಾಗುತ್ತಿರುವ ನಿನಗೆ ಶುಭಾಶಯ. ನಿನ್ನನ್ನು ಬದುಕಿಸಿದ ನಾನಿ ಸಾಂಡ್ರಳ ಧೈರ್ಯ ಮೆಚ್ಚುವಂತದ್ದು. ಆರೋಗ್ಯ ಪೂರ್ಣ ಬದುಕು ನಿನ್ನದಾಗಲಿ’ ಎಂದು ಮೋಶೆಗೆ ಮೋದಿ ಹಾರೈಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು