ವಿದೇಶಿ ಉಪಗ್ರಹ ಉಡಾವಣೆಗೆ ಇಸ್ರೊ ಕ್ಷಣಗಣನೆ

7

ವಿದೇಶಿ ಉಪಗ್ರಹ ಉಡಾವಣೆಗೆ ಇಸ್ರೊ ಕ್ಷಣಗಣನೆ

Published:
Updated:
ಉಪಗ್ರಹ ಉಡಾವಣೆಯ ಸಾಂದರ್ಭಿಕ ಚಿತ್ರ

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಭಾನುವಾರ ರಾತ್ರಿ 10.07 ಗಂಟೆಗೆ ಎರಡು ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಲಿದೆ.

800 ಕೆ. ಜಿ ತೂಕದ ನೋವಾಸರ್‌ ಮತ್ತು ಎಸ್‌1–4 ಎಂಬ ಎರಡು ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ಸಿ–42 ರಾಕೆಟ್‌ ಶ್ರೀಹರಿಕೋಟಾದಿಂದ ಬಾಹ್ಯಾಕಾಶಕ್ಕೆ ನೆಗೆಯಲಿದೆ. 583 ಕಿ.ಮೀ ಸಾಗಿದ ನಂತರ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ.

ಬ್ರಿಟನ್‌ನ ಸರ್ರೆ ಉಪಗ್ರಹ ತಂತ್ರಜ್ಞಾನ ಸಂಸ್ಥೆ ಅಭಿವೃದ್ಧಿಪಡಿಸಿರುವ ಉಪಗ್ರಹಗಳು ಅರಣ್ಯ ಸಮೀಕ್ಷೆ, ಪ್ರವಾಹ, ಭೂಕಂಪ, ಕಾಳ್ಗಿಚ್ಚಿನಂತಹ ಪ್ರಕೃತಿ ವಿಕೋಪ ನಿರ್ವಹಣೆಯಲ್ಲಿ ನೆರವಾಗಲಿವೆ.

 

 

Tags: 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !