ಭಾನುವಾರ, ಸೆಪ್ಟೆಂಬರ್ 22, 2019
27 °C

ಧೈರ್ಯದಿಂದ ಮುನ್ನುಗ್ಗೋಣ: ಇಸ್ರೊ ವಿಜ್ಞಾನಿಗಳಿಗೆ ವಿಶ್ವಾಸ ತುಂಬಿದ ಮೋದಿ

Published:
Updated:

ಭೆಂಗಳೂರು: ವಿಜ್ಞಾನ ಮತ್ತು ಮಾನವ ಜನಾಂಗದ ಅಭ್ಯುಧಯಕ್ಕೆ ನೀವು ಉತ್ತಮ ಸೇವೆ ಸಲ್ಲಿಸಿದ್ದೀರಿ, ನಾವು ಕಲಿಯುತ್ತಿದ್ದೇವೆ, ನಮ್ಮ ಪ್ರಯತ್ನವನ್ನು ಮುಂದುವರಿಸೋಣ. ಧೈರ್ಯದಿಂದ ಮುನ್ನುಗ್ಗೋಣ. ನಾವು ಸದಾ ನಿಮ್ಮ ಜತೆಗಿದ್ದೇನೆ. ಸಂಪರ್ಕ ಸದ್ಯ ಸಾಧ್ಯವಾಗಿಲ್ಲ, ಆದರೆ ಭರವಸೆಯಿಂದ ನಿರೀಕ್ಷಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 

ಪೀಣ್ಯದ ಇಸ್ರೊ ಕೇಂದ್ರದಲ್ಲಿ ಶನಿವಾರ ನಸುಕಿನಲ್ಲಿ ಚಂದ್ರಯಾನ-2 ವ್ಯೋಮ ನೌಕೆಯ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿಯಂತೆ ಇಳಿದರೂ, ಅದರಿಂದ ಸಂದೇಶ ಬಾರದ ಹಿನ್ನೆಲೆಯಲ್ಲಿ ಪ್ರಧಾನಿ ಅವರು ಈ ಸಾಂತ್ವನದ ಮಾತುಗಳನ್ನು ಹೇಳಿದರು. ಬಳಿಕ ಇಸ್ರೊ ಆಧ್ಯಕ್ಷರನ್ನು ಬೆನ್ನು ತಟ್ಟಿ ಸಮಾಧಾನಪಡಿಸಿದರು.

ಬಳಿಕ ವಿದ್ಯಾರ್ಥಿಗಳೊಂದಿಗೆ ಅವರು  ಒಂದಿಷ್ಟು ಮಾತನಾಡಿ ನಿರ್ಗಮಿಸಿದರು.

 

Post Comments (+)