ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಸಚಿವಾಲಯಕ್ಕೆ ಮೀಸಲಾದ ಉಪಗ್ರಹ ಉಡ್ಡಯನಕ್ಕೆ ಸಿದ್ಧತೆ

ಪಾಕ್‌, ಬಾಂಗ್ಲಾದೇಶ ಗಡಿ ಮೇಲೆ ನಿಗಾ ಉದ್ದೇಶ
Last Updated 17 ಜನವರಿ 2019, 16:52 IST
ಅಕ್ಷರ ಗಾತ್ರ

ನವದೆಹಲಿ: ಗೃಹ ಸಚಿವಾಲಯಕ್ಕೆಂದೇ ಮೀಸಲಾದ ಉಪಗ್ರಹವೊಂದನ್ನು ಉಡ್ಡಯನ ಮಾಡಲು ಇಸ್ರೊ ಸಿದ್ಧತೆ ನಡೆಸಿದೆ.

ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ, ನೇಪಾಳ, ಭೂತಾನ್‌ ಹಾಗೂ ಮ್ಯಾನ್ಮಾರ್‌ಗೆ ಹೊಂದಿಕೊಂಡಿರುವ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲು ಹಾಗೂ ಗಡಿಯಾಚೆಗಿನ ಚಟುವಟಿಕೆಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಇಸ್ರೊ ಈ ಕ್ರಮಕ್ಕೆ ಮುಂದಾಗಿದೆ. ಗಡಿ ನಿರ್ವಹಣೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕುರಿತಂತೆ ಕಾರ್ಯಪಡೆ ಮಾಡಿದ್ದ ಶಿಫಾರಸನ್ನು ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಅನುಮೋದಿಸಿದ್ದರಿಂದ ಇಸ್ರೊ ಈ ಕಾರ್ಯವನ್ನು ಕೈಗೆತ್ತಿಕೊಂಡಿದೆ. ‘ಇಸ್ರೊ ಮತ್ತು ರಕ್ಷಣಾ ಸಚಿವಾಲಯ ನಡುವೆ ಸಮನ್ವಯದಲ್ಲಿ ಮೂರು ಹಂತಗಳು ಒಳಗೊಂಡಂತೆ ಒಟ್ಟು ಐದು ವರ್ಷಗಳ ಅವಧಿಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು’ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT