ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಪರಿವೀಕ್ಷಣೆಗೆ ‘ಹೈಸಿಸ್’ ಕಣ್ಣು

ತಿಂಗಳಲ್ಲೇ ಮತ್ತೊಂದು ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಇಸ್ರೊ
Last Updated 29 ನವೆಂಬರ್ 2018, 19:59 IST
ಅಕ್ಷರ ಗಾತ್ರ

ಕೃಷಿ, ಮಾಲಿನ್ಯ ಪತ್ತೆ, ಕರಾವಳಿ ಕಣ್ಗಾವಲು ಸೇರಿ ಭೂ ಪರಿವೀಕ್ಷಣೆಯ ಹಲವು ಮಜಲುಗಳಲ್ಲಿ ನೆರವಾಗುವ ಸೂಕ್ಷ್ಮ ಚಿತ್ರೀಕರಣ ಉಪಗ್ರಹವನ್ನು (ಹೈಪರ್‌ ಸ್ಪೆಕ್ಟ್ರಲ್ ಇಮೇಜಿಂಗ್ ಸ್ಯಾಟಲೈಟ್‌–ಹೈಸಿಸ್) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಗುರುವಾರ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಹೈಸಿಸ್‌ ಜತೆಗೆ ವಿದೇಶಗಳ 30 ಸಣ್ಣ ಉಪಗ್ರಹಗಳನ್ನೂ ಕಕ್ಷೆಗೆ ಸೇರಿಸಲಾಗಿದೆ.

* ಪಿಎಸ್‌ಎಲ್‌ವಿ –ಸಿ43 ರಾಕೆಟ್‌ನ ಮೂಲಕ ಉಪಗ್ರಹಗಳ ಉಡಾವಣೆ
* ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ
* ಹೈಸಿಸ್ ಎಂಬುದು ಅತಿ ಸೂಕ್ಷ್ಮ ವಿವರಗಳು ಇರುವ ಚಿತ್ರಗಳನ್ನು ರೂಪಿಸುವ ಚಿಪ್‌
* ಈ ಚಿಪ್‌ ಅನ್ನು ಚಂಡೀಗಡದಲ್ಲಿರುವ ಇಸ್ರೊ ಕೇಂದ್ರದಲ್ಲಿ ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ

ಉಪಗ್ರಹದ ದತ್ತಾಂಶಗಳ ಬಳಕೆ
ಕೃಷಿ
ಅರಣ್ಯ ನಿರ್ವಹಣೆ
ಮಣ್ಣು ಸಮೀಕ್ಷೆ/ಅಧ್ಯಯನ
ಕರಾವಳಿ ತೀರಗಳ ಅಧ್ಯಯನ
ಒಳನಾಡು ಜಲ ಅಧ್ಯಯನ
ಕೈಗಾರಿಕೆಗಳಿಂದಾಗುವ ಮಾಲಿನ್ಯ ಪತ್ತೆ

ಏರಿಳಿಯುವ ಕಾರ್ಯಾಚರಣೆ
ಪಿಎಸ್‌ಎಲ್‌ವಿ–ಸಿ43 ಒಟ್ಟು 31 ಉಪಗ್ರಹಗಳನ್ನು ಹೊತ್ತಿತ್ತು. ಅವುಗಳಲ್ಲಿ ಹೈಸಿಸ್ ಅನ್ನು ಒಂದು ಕಕ್ಷೆಗೆ, ಉಳಿದ 30 ಉಪಗ್ರಹಗಳನ್ನು ಬೇರೆ ಕಕ್ಷೆಗಳಿಗೆ ಸೇರಿಸಬೇಕಿತ್ತು. ಈ ಕಾರ್ಯಾಚರಣೆಯ ವಿವಿಧ ಹಂತಗಳು ಈ ರೀತಿ ಇವೆ

1. ಭೂಮಿಯಿಂದ ಉಡಾವಣೆ
2. ನಂತರದ 17 ನಿಮಿಷ 26 ಸೆಕೆಂಡ್‌ಗಳಲ್ಲಿ ಹೈಸಿಸ್ ಅನ್ನು ಕಕ್ಷೆಗೆ ಬಿಡಲಾಯಿತು 636.3 ಕಿ.ಮೀ. ಎತ್ತರದ ಕಕ್ಷೆ
3. ರಾಕೆಟ್‌ನ ಎಂಜಿನ್ ಬಂದ್ ಮಾಡಲಾಯಿತು
4. ಎಂಜಿನ್‌ ಶಕ್ತಿ ಇಲ್ಲದ ಕಾರಣ ಕೆಳಗಿಳಿದ ರಾಕೆಟ್‌ 504 ಕಿ.ಮೀ. ಎತ್ತರದವರೆಗೆ ಇಳಿದ ನಂತರ ಎಂಜಿನ್‌ ಅನ್ನು ಚಾಲೂ ಮಾಡಲಾಯಿತು
5. ಉಳಿದ 30 ಉಪಗ್ರಹಗಳನ್ನು ಕಕ್ಷೆಗೆ ಬಿಡುಗಡೆ ಮಾಡಲಾಯಿತು

ಆಧಾರ: ಪಿಟಿಐ, ಇಸ್ರೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT