ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೋದಿಂದ ಉಪಗ್ರಹ ಯಶಸ್ವಿ ಉಡಾವಣೆ

Last Updated 11 ಡಿಸೆಂಬರ್ 2019, 11:48 IST
ಅಕ್ಷರ ಗಾತ್ರ

ಶ್ರೀಹರಿಕೋಟ: ಇಸ್ರೋಪಿಎಸ್ಎಲ್ ವಿ - ಸಿ48 ರಾಕೆಟ್ ಮೂಲಕ ಆರ್ ಐ ಸ್ಯಾಟ್ 2ಬಿ ಆರ್ 1 ಉಪಗ್ರಹವನ್ನು ಬುಧವಾರ ಮಧ್ಯಾಹ್ನ 3.25ಕ್ಕೆ ಇಲ್ಲಿನ ಸತೀಶ್ ದವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಇದರ ಜೊತೆ 9 ವಿದೇಶಿ ಉಪಗ್ರಹಗಳನ್ನೂ ಒಯ್ದಿದೆ.ಆರ್ ಐ ಸ್ಯಾಟ್ 2ಬಿ ಆರ್ 1 ಕೃಷಿ, ಭಾರತೀಯ ಸೇನೆ, ಅರಣ್ಯ ಹಾಗೂ ನೈಸರ್ಗಿಕ ವಿಕೋಪಗಳ ನಿರ್ವಹಣೆಗೆ ಸಹಾಯಕವಾಗಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

ಆರ್ಐಸ್ಯಾಟ್2ಬಿಆರ್1 ಭೂವೀಕ್ಷಣೆಯ ಉಪಗ್ರಹವಾಗಿದ್ದು, ರಾಡಾರ್ ಮೂಲಕ ದೃಶ್ಯವನ್ನು ಸೆರೆಹಿಡಿಯಲಿದೆ.ಈ ಉಪಗ್ರಹವು628 ಕೆಜಿ ತೂಕವಿದ್ದು, ಪಿಎಸ್ ಎಲ್ ವಿ-ಸಿ48ರಾಕೆಟ್ 44.4 ಮೀಟರ್ ಎತ್ತರವಿದೆ. ಇದನ್ನುಶುಭ್ರ ಆಕಾಶದ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. ಇದು ಇಸ್ರೋದ ಪಿಎಸ್ ಎಲ್ ವಿಯ 50ನೇ ಉಪಗ್ರಹವಾಗಿದೆ. ಅಲ್ಲದೆ, ಶ್ರೀಹರಿಕೋಟದಿಂದ ಉಡಾವಣಾ ಮಾಡಲಾದ75ನೇ ಉಪಗ್ರಹವಾಗಿದೆ. 9 ಉಪಗ್ರಹಗಳಲ್ಲಿ6 ಅಮೆರಿಕಾ, ಒಂದು ಇಟಲಿ, ಒಂದು ಜಪಾನ್, ಒಂದು ಉಪಗ್ರಹ ಇಸ್ರೇಲ್ ರಾಷ್ಟ್ರಕ್ಕೆ ಸೇರಿದವು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT