ಶುಕ್ರವಾರ, ನವೆಂಬರ್ 22, 2019
23 °C

ನ್ಯಾಯಮೂರ್ತಿಗಳ ನಿಂದನೆ: ಬೊಬಡೆ ಆತಂಕ

Published:
Updated:
Prajavani

ನವದೆಹಲಿ: ‘ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಮೂರ್ತಿಗಳನ್ನು ನಿಂದೆಗೆ ಗುರಿಮಾಡುವುದನ್ನು ನೋಡಿದರೆ ಆತಂಕವಾಗುತ್ತದೆ. ತಮಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಭಾವನೆ ಇಂತಹ ನಿಂದೆಯಿಂದ ನ್ಯಾಯಮೂರ್ತಿಗಳಲ್ಲಿ ಮೂಡುತ್ತದೆ’ ಎಂದು ನ್ಯಾಯಮೂರ್ತಿ ಎಸ್‌.ಎ. ಬೊಬಡೆ ಹೇಳಿದರು.

ಬೊಬಡೆ ಅವರು ಇದೇ 18ರಂದು ಸುಪ್ರೀಂ ಕೋರ್ಟ್‌ನ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

‘ಅನಿಯಂತ್ರಿತ ಟೀಕೆಯು ನ್ಯಾಯಮೂರ್ತಿಗಳ ಮೇಲಿನ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುತ್ತದೆ. ಜೊತೆಗೆ ಅವರ ಆತ್ಮವಿಶ್ವಾಸವನ್ನು ಸಹ ಗಾಸಿಗೊಳಿಸುತ್ತದೆ. ಸಾಮಾಜಿಕ ಮಾಧ್ಯಮವೂ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಯಾವುದೇ ತೀರ್ಪನ್ನು ವಿಮರ್ಶಿಸುವ ಬದಲು ಅದನ್ನು ನೀಡಿದ ನ್ಯಾಯಮೂರ್ತಿಗಳನ್ನು ವಿಮರ್ಶೆಗೆ ಒಳಪಡಿಸುವುದು ಮಾನನಷ್ಟಕ್ಕೆ ಸಮನಾದ ಅಪರಾಧ’ ಎಂದು ಸುದ್ದಿಸಂಸ್ಥೆಗೆ ಭಾನುವಾರ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.

ಪ್ರತಿಕ್ರಿಯಿಸಿ (+)