ಮಾಯಾವತಿ ಮಾಜಿ ಕಾರ್ಯದರ್ಶಿ ಮನೆಯಲ್ಲಿ ಐಟಿ ಶೋಧ

ಮಂಗಳವಾರ, ಮಾರ್ಚ್ 19, 2019
33 °C

ಮಾಯಾವತಿ ಮಾಜಿ ಕಾರ್ಯದರ್ಶಿ ಮನೆಯಲ್ಲಿ ಐಟಿ ಶೋಧ

Published:
Updated:
Prajavani

ನವದೆಹಲಿ: ಬಿಎಸ್‌ಪಿ ನಾಯಕಿ ಮಾಯಾವತಿ ಅವರ ಆಡಳಿತದಲ್ಲಿ ಉನ್ನತ ಹುದ್ದೆಯಲ್ಲಿದ್ದ ನಿವೃತ್ತ ಐಎಎಸ್ ಅಧಿಕಾರಿ ನೆತರಾಮ್ ಅವರ ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ ಶೋಧ ನಡೆಸಿದರು. 

ನೆತರಾಮ್ ಅವರು 2002–03ರಲ್ಲಿ ಮಾಯಾವತಿ ಅವರ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. 

ಸುಮಾರು ₹90 ಕೋಟಿ ತೆರಿಗೆ ವಂಚನೆ ಆರೋಪದ ಮೇಲೆ ಅಧಿಕಾರಿಗೆ ಸೇರಿದ ದೆಹಲಿ ಮತ್ತು ಲಖನೌಗಳಲ್ಲಿರುವ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಯಿತು. ನೋಟು ರದ್ದತಿ ಬಳಿಕ ಹಣ ಠೇವಣಿ ಇಟ್ಟಿರುವ ಸಾಧ್ಯತೆ ಕುರಿತೂ ಪರಿಶೀಲನೆ ನಡೆಯುತ್ತಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !