ಪಾಕಿಸ್ತಾನ ಮಾಡಬೇಕಿದ್ದ ಕೆಲಸವನ್ನು ನಾವು ಮಾಡಿದ್ದೇವೆ: ನಿರ್ಮಲಾ ಸೀತಾರಾಮನ್

ಮಂಗಳವಾರ, ಮಾರ್ಚ್ 26, 2019
31 °C
ನಮ್ಮದು ಆಕ್ರಮಣಶೀಲತೆ ಅಲ್ಲ: ಸಚಿವೆ

ಪಾಕಿಸ್ತಾನ ಮಾಡಬೇಕಿದ್ದ ಕೆಲಸವನ್ನು ನಾವು ಮಾಡಿದ್ದೇವೆ: ನಿರ್ಮಲಾ ಸೀತಾರಾಮನ್

Published:
Updated:

ಚೆನ್ನೈ: ಬಾಲಾಕೋಟ್‌ ಬಳಿ ಜೈಷ್‌ ಎ ಮೊಹಮ್ಮದ್ ಉಗ್ರರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸುವ ಮೂಲಕ ಪಾಕಿಸ್ತಾನ ಮಾಡಬೇಕಿದ್ದ ಕೆಲಸವನ್ನು ನಾವು ಮಾಡಿದ್ದೇವಷ್ಟೆ. ನಮ್ಮದು ಆಕ್ರಮಣಶೀಲತೆ ಅಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.

ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ನಿಜವಾಗಿಯೂ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸವನ್ನು ಪಾಕಿಸ್ತಾನದವರು ಮಾಡಬೇಕಿತ್ತು. ಆದರೆ, ಆ ದೇಶ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸ್ಪಷ್ಟ. ಅದು ಭಯೋತ್ಪಾದಕರಿಗೆ ತರಬೇತಿ, ಹಣಕಾಸು ನೆರವು, ಸೇನಾ ಬೆಂಬಲ ನೀಡುವ ದೇಶವಾಗಿ ಮುಂದುವರಿಯುತ್ತಿದೆ’ ಎಂದು ಹೇಳಿದರು.

ಭಯೋತ್ಪಾದನೆಗೆ ಹಣಕಾಸು ನೆರವು, ಶಕ್ತಿ, ತರಬೇತಿ ನೀಡುವ ಮುಖ್ಯ ಕೇಂದ್ರವನ್ನೇ ಹೊಡೆಯಲು ನಾವು ನಿರ್ಧರಿಸಿದ್ದೆವು. ನಮ್ಮ ಬಳಿ ಸಾಕಷ್ಟು ಗುಪ್ತಚರ ಮಾಹಿತಿ ಇದ್ದವು ಎಂದೂ ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 19

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !