ಜಯಲಲಿತಾ ಕಂಚಿನ ಪ್ರತಿಮೆ ಅನಾವರಣ

7

ಜಯಲಲಿತಾ ಕಂಚಿನ ಪ್ರತಿಮೆ ಅನಾವರಣ

Published:
Updated:
Deccan Herald

ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಮೆಯನ್ನು ಪಕ್ಷದ ಪ್ರಧಾನ ಕಚೇರಿಯಲ್ಲಿ ಬುಧವಾರ ಅನಾವರಣಗೊಳಿಸಲಾಯಿತು.

ಎಐಎಡಿಎಂಕೆ ಸಂಯೋಜಕರೂ ಆದ ಮುಖ್ಯಮಂತ್ರಿ ಒ.ಪನ್ನೀರ್‌ ಸೆಲ್ವಂ ಹಾಗೂ ಜಂಟಿ ಸಂಯೋಜಕ, ಉಪಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಸಚಿವರ ಉಪಸ್ಥಿತಿಯಲ್ಲಿ ಪ್ರತಿಮೆ ಅನಾವರಣಗೊಳಿಸಲಾಯಿತು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ಜಯಲಲಿತಾ ಅವರ 70ನೇ ಜನ್ಮದಿನದ ಅಂಗವಾಗಿ ಫೆ. 24ರಂದು ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು. ಆದರೆ, ಅದು ಜಯಲಲಿತಾ ಅವರಿಗೆ ಹೋಲಿಕೆ ಆಗುವುದಿಲ್ಲ ಎಂದು ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಹೊಸ ‍ಪ್ರತಿಮೆ ಅನಾವರಣಗೊಳಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್‌ ಅವರ ಪ್ರತಿಮೆಯ ಪಕ್ಕದಲ್ಲಿಯೇ ಜಯಲಲಿತಾ ಪ್ರತಿಮೆ ಸ್ಥಾಪಿಸಲಾಗಿದೆ.

ಕಂಚಿನ ಪ್ರತಿಮೆ 800 ಕೆ.ಜಿ ಇದ್ದು, ಮೊದಲು ಸ್ಥಾಪಿಸಿದ್ದಕ್ಕಿಂತ ಸಣ್ಣದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !