ಮತಯಂತ್ರ ಭದ್ರತೆ ಕೇಂದ್ರಕ್ಕೆ ವಹಿಸಿ: ಜಗನ್‌ ಮೋಹನ್‌ ರೆಡ್ಡಿ

ಮಂಗಳವಾರ, ಏಪ್ರಿಲ್ 23, 2019
29 °C

ಮತಯಂತ್ರ ಭದ್ರತೆ ಕೇಂದ್ರಕ್ಕೆ ವಹಿಸಿ: ಜಗನ್‌ ಮೋಹನ್‌ ರೆಡ್ಡಿ

Published:
Updated:
Prajavani

ಹೈದರಾಬಾದ್‌: ಮತಯಂತ್ರಗಳ ಭದ್ರತೆಯ ಹೊಣೆಯನ್ನು ಕೇಂದ್ರೀಯ ಪಡೆಗಳಿಗೆ ವಹಿಸಬೇಕು ಎಂದು ವೈಎಸ್‌ಆರ್‌ಪಿ ಮುಖ್ಯಸ್ಥ ಜಗನ್‌ ಮೋಹನ್‌ ರೆಡ್ಡಿ ಅವರು ಆಂಧ್ರ ಪ್ರದೇಶ ರಾಜ್ಯಪಾಲರನ್ನು ಕೋರಿದ್ದಾರೆ.

‘ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣದಲ್ಲಿ ಮತಯಂತ್ರಗಳನ್ನು ಇರಿಸಿದ್ದ ‘ಸ್ಟ್ರಾಂಗ್‌ ರೂಂ’ಗಳನ್ನು ತೆರೆದು ಮತಯಂತ್ರಗಳನ್ನು ಹೇಗೆ ಹೊರಗೆ ಸಾಗಿಸಲಾಯಿತು ಎಂಬುದನ್ನು ನೋಡಿದ್ದೇವೆ. ಹಾಗಾಗಿ ಮತಯಂತ್ರಗಳ ಭದ್ರತೆಯನ್ನು ಚುನಾವಣಾ ಆಯೋಗದ ನೇರಉಸ್ತುವಾರಿಗೆ ವಹಿಸಬೇಕು ಎಂದು ರಾಜ್ಯಪಾಲರನ್ನು ಕೋರಿದ್ದೇನೆ’ ಎಂದು ಜಗನ್‌ ಹೇಳಿದ್ದಾರೆ. 

ಮತಯಂತ್ರ ಇರಿಸಿರುವ ಕೊಠಡಿಗಳಿಗೆ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಗಳನ್ನು ನೋಡುವ ಅವಕಾಶ ಇರುವುದು ಜಿಲ್ಲಾಧಿಕಾರಿಗಳಿಗೆ ಮಾತ್ರ. ಈ ಎಲ್ಲ ಜಿಲ್ಲಾಧಿಕಾರಿಗಳು ಚಂದ್ರಬಾಬು ನಾಯ್ಡು ಜತೆ ಶಾಮೀಲಾಗಿದ್ದಾರೆ ಎಂದು ಜಗನ್‌ ಆರೋಪಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !