ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮ್ರಾನ್ ಖಾನ್ ವಿರುದ್ಧ ತಿರುಗಿಬಿದ್ದ ಪಾಕ್‌ನ ‘ಜೈಷ್‌’ ಉಗ್ರಗಾಮಿ ಸಂಘಟನೆ

Last Updated 3 ಮಾರ್ಚ್ 2019, 11:17 IST
ಅಕ್ಷರ ಗಾತ್ರ

ನವದೆಹಲಿ: ‘ಐವತ್ತು ವರ್ಷಗಳ ಹಿಂದೆ ಒಬ್ಬ ನಿಯಾಜಿ ನಮ್ಮ ದೇಶದ ಅರ್ಧ ಭೂಭಾಗದೊಂದಿಗೆ90 ಸಾವಿರ ಯೋಧರನ್ನು ಭಾರತಕ್ಕೆ ಒಪ್ಪಿಸಿದ್ದ. ಈಗ ಮತ್ತೊಬ್ಬ ನಿಯಾಜಿ ಭಾರತದ ವಿರುದ್ಧ ನಾವು ಸಾಧಿಸಿದ್ದದಿಗ್ವಿಜಯವನ್ನು ಸೋಲಾಗಿ ಪರಿವರ್ತಿಸಿದ...’

– ಬಲಾಕೋಟ್ ದಾಳಿಯ ನಂತರ ತನ್ನ ಚಟುವಟಿಕೆಗಳನ್ನು ಚುರುಕುಗೊಳಿಸಲು ಹವಣಿಸುತ್ತಿರುವ ಪಾಕಿಸ್ತಾನದ ಉಗ್ರಗಾಮಿ ಸಂಘಟನೆ ಜೈಷ್–ಎ–ಮೊಹಮದ್‌ನ ನಾಯಕರು ಇದೀಗ ಪಾಕ್ ಪ್ರಧಾನಿ ಇಮ್ರಾನ ಖಾನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇಮ್ರಾನ್‌ ಖಾನ್‌ ಅವರು ಅಪರೂಪಕ್ಕೆ ಬಳಸುವ ಮನೆತನದ ಹೆಸರು ‘ನಿಯಾಜಿ’ಯನ್ನು ಮುನ್ನೆಲೆಗೆ ತಂದು ಮೇಲಿನಂತೆ ಛೇಡಿಸುತ್ತಿದ್ದಾರೆ.

ಬಾಂಗ್ಲಾದೇಶದ ಉದಯಕ್ಕೆ ಕಾರಣವಾದ1971ರ ಭಾರತ–ಪಾಕ್ ಯುದ್ಧದ ಸಂದರ್ಭ ಪಾಕ್ ಸೇನೆಯ ಜನರಲ್ ಆಗಿದ್ದ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ 90 ಸಾವಿರ ಪಾಕ್ ಸೈನಿಕರೊಡನೆ ಭಾರತಕ್ಕೆ ಶರಣಾಗಿದ್ದರು. ಈ ಘಟನೆಯನ್ನು ಈಚೆಗೆ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್ ಅವರ ಬಿಡುಗಡೆಗೆ ಜೈಷ್ ನಾಯಕರು ತಳಕು ಹಾಕಿ ಭಾರತದ ವಿರುದ್ಧ ಪಾಕಿಸ್ತಾನದಲ್ಲಿ ಜನಾಭಿಪ್ರಾಯ ಮೂಡಿಸಲು ಯತ್ನಿಸುತ್ತಿದ್ದಾರೆ.

ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ಬಲಾಕೋಟ್‌ನ ತನ್ನ ತರಬೇತಿ ಕೇಂದ್ರದ ಮೇಲೆ ನಡೆಸಿದ ದಾಳಿಯನ್ನುಜೈಷ್–ಎ–ಮೊಹಮದ್‌ನ ಭಯೋತ್ಪಾದಕರುಇದೇ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ.ಆದರೆ ದಾಳಿಯಿಂದ ಯಾರೂ ಸಾವನ್ನಪ್ಪಿಲ್ಲ ಎಂದು ಹೇಳಿಕೊಂಡಿದ್ದು, ಕಾಶ್ಮೀರದಲ್ಲಿ ನಡೆಯುತ್ತಿರುವ ಜಿಹಾದ್‌ನಲ್ಲಿ ಪಾಕ್ ಯುವಕರು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ಭಾರತೀಯ ವಾಯುಪಡೆಯ ಪೈಲಟ್ಅಭಿನಂದನ್ಅವರ ಹಸ್ತಾಂತರ ಪ್ರಕ್ರಿಯೆ ಶುಕ್ರವಾರಪೂರ್ಣಗೊಳ್ಳುವ ವೇಳೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜೈಷ್ ನಾಯಕರ ದನಿ ಇದೆ ಎನ್ನಲಾದ ಆಡಿಯೊ ರೆಕಾರ್ಡಿಂಗ್‌ ಕಾಣಿಸಿಕೊಂಡಿತ್ತು. ಆಡಿಯೊ ಕ್ಲಿಪ್‌ನಲ್ಲಿರುವ ದನಿ ಯಾರದ್ದು ಎನ್ನುವ ಬಗ್ಗೆ ಪಾಕ್ ಸರ್ಕಾರ ಏನನ್ನೂ ಹೇಳಿಲ್ಲ. ‘ಈಸಭೆಯ ಮುಖ್ಯ ಅತಿಥಿ ಮುಫ್ತಿ ಅಬ್ದುಲ್ ರವೂಫ್ ಅಸ್ಗರ್’ ಎನ್ನುವ ಉಲ್ಲೇಖದೊಂದಿಗೆಆಡಿಯೊ ಕ್ಲಿಪ್ ಶುರುವಾಗುತ್ತೆ. ಈತ ಜೈಷ್‌ ಉಗ್ರಗಾಮಿಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನ ಸೋದರ ಎಂಬುದು ಉಲ್ಲೇಖಾರ್ಹ ಸಂಗತಿ.

‘ದಿ ಪ್ರಿಂಟ್’ ಜಾಲತಾಣಆಡಿಯೊ ಕ್ಲಿಪ್‌ ಮತ್ತು ಅದರಲ್ಲಿರುವ ಪ್ರಮುಖ ಅಂಶಗಳನ್ನು ಭಾನುವಾರ ಪ್ರಕಟಿಸಿದೆ.ಪಾಕಿಸ್ತಾನದ ಪೇಷಾವರದಲ್ಲಿರುವ ‘ಮದ್ರಸಾ ಸನಾನ್ ಬಿನ್ ಸಲ್ಮಾ’ ಮಸೀದಿಯಲ್ಲಿ ನಡೆದ ಕಾರ್ಯಕ್ರಮವೊಂದರ ಭಾಷಣ ಇದು ಎಂದು ‘ದಿಪ್ರಿಂಟ್’ ಜಾಲತಾಣ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಜೈಷ್ ಉಗ್ರಗಾಮಿ ಸಂಘಟನೆಯಲ್ಲಿ ಸಕ್ರಿಯವಾಗಿರುವ ಮೌಲಾನಾ ಮುಜಾಹಿದ್ ಅಬ್ಬಾಸ್, ಮೌಲಾನಾ ಕುತುಬುದ್ದೀನ್, ಮೌಲಾನಾ ನಿಜಾಮುದ್ದೀನ್ ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕರಾಚಿಯಲ್ಲಿ ಕೊಲೆಯಾದ ಸುನ್ನಿ ನಾಯಕ ಮೌಲಾನಾ ಯೂಸೂಫ್ ಲೂಧಿಯಾನ್ವಿಗೆ ಶ್ರದ್ಧಾಂಜಲಿ ಸಲ್ಲಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಾಕಿಸ್ತಾನವು 2002ರಲ್ಲಿಜೈಷ್ ಎ ಮೊಹಮದ್ ಉಗ್ರಗಾಮಿ ಸಂಘಟನೆಯನ್ನು ನಿಷೇಧಿಸಿತು. ಆದರೆ ಇಂದಿಗೂ ಸಂಘಟನೆ ಅಲ್ಲಿ ಸಕ್ರಿಯವಾಗಿದೆ, ಬಹಿರಂಗವಾಗಿ ಕಾರ್ಯಕ್ರಮಗಳನ್ನೂ ಆಯೋಜಿಸುತ್ತಿದೆ.

ಇದೇ ಕಾರ್ಯಕ್ರಮದಲ್ಲಿ ಜೈಷ್ ನಾಯಕ ಮೊದಲ ಬಾರಿಗೆ ಜೈಷ್ ಎ ಮೊಹಮದ್ ಬಲಾಕೋಟ್‌ನಲ್ಲಿ ತರಬೇತಿ ಶಿಬಿರ ನಡೆಸುತ್ತಿರುವುದುನ್ನು ಮತ್ತು ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ತರಬೇತಿ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದನ್ನು ಒಪ್ಪಿಕೊಂಡಿದ್ದಾನೆ. ಆದರೆ, ದಾಳಿಯಲ್ಲಿ ಉಗ್ರಗಾಮಿಗಳು ಸತ್ತಿದ್ದಾರೆ ಎನ್ನುವ ಭಾರತ ಸರ್ಕಾರದ ವಾದವನ್ನು ಅವನು ನಿರಾಕರಿಸಿದ್ದಾನೆ. ಮೋದಿ ವಿರೋಧಿ ಮತ್ತು ಭಾರತ ವಿರೋಧಿ ಘೋಷಣೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಿದೆ.

‘ಭಾರತದ ಯುದ್ಧ ವಿಮಾನಗಳು ಪಾಕಿಸ್ತಾನದ ಗಡಿ ದಾಟಿ ಬಂದಿರುವ ಕಾರಣ ಪಾಕ್‌ನ ಎಲ್ಲ ಪ್ರಜೆಗಳು ನಮ್ಮ ದೇಶವನ್ನು ಉಳಿಸಿಕೊಳ್ಳಲು ಭಾರತದ ವಿರುದ್ಧ ಜಿಹಾದ್‌ನಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿದೆ’ ಎಂದು ಆತ ಕರೆ ನೀಡಿದ್ದಾನೆ.

ಜಿಹಾದ್ಉತ್ತೇಜನಕ್ಕೆ ಬಳಕೆ

ಪಾಕ್‌ನಲ್ಲಿರುವ ಉಗ್ರಗಾಮಿ ನೆಲೆಗಳ ಮೇಲೆ ಭಾರತ ನಡೆಸಿದದಾಳಿಯನ್ನು ಜೈಷ್‌ ಉಗ್ರಗಾಮಿ ಸಂಘಟನೆಜಿಹಾದ್‌ಗೆ ಪ್ರೇರಣೆ ನೀಡಲು ಮತ್ತು ಯುವಕರನ್ನು ಆಕರ್ಷಿಸಲುಬಳಸುತ್ತಿರುವ ಬಗ್ಗೆ ವಿಶ್ವದ ಮಿಲಿಟರಿ ಪಂಡಿತರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ಭಾರತದ ದಾಳಿಯನ್ನು ಜೈಷ್ತನ್ನ ಸ್ವಾರ್ಥ ಸಾಧನೆಗೆ, ಯುವಕರಲ್ಲಿ ಜಿಹಾದಿ ಮನೋಭಾವ ಬೆಳೆಸಲು ಬಳಸಿಕೊಳ್ಳುತ್ತಿದೆ’ ಎಂದು ದಕ್ಷಿಣ ಏಷ್ಯಾ ವಲಯಗಳ ಮಿಲಿಟರಿ ತಜ್ಞೆ ಆಯೆಷಾಸಿದ್ದಿಕಾ ಹೇಳಿದ್ದಾರೆ.

‘ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಜೈಷ್ ಮತ್ತು ಇತರ ಉಗ್ರಗಾಗಿ ಸಂಘಟನೆಗಳು ಇಂದಿಗೂಪಾಕ್ ನೆಲದಲ್ಲಿ ಮುಕ್ತವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಪಾಕಿಸ್ತಾನಮಿಲಿಟರಿಯ ಹಿತಾಸಕ್ತಿಗಳಿಗೆ ಅವು ಧಕ್ಕೆಯಲ್ಲ ಎನ್ನುವ ಕಾರಣಕ್ಕೆ ಅವುಗಳ ಚಟುವಟಿಕೆಗಳನ್ನು ಹತ್ತಿಕ್ಕಲು ಯಾರೂ ಗಮನಕೊಡುತ್ತಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT