ಬುಧವಾರ, ನವೆಂಬರ್ 20, 2019
20 °C

ಶ್ರೀನಗರದಲ್ಲಿ ಪ್ರತಿಭಟನೆ: ಫಾರೂಕ್ ಅಬ್ದುಲ್ಲಾ ಅವರ ಸಹೋದರಿ, ಮಗಳ ಬಂಧನ

Published:
Updated:
Protest

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿನ ವಿಶೇಷ ಸ್ಥಾನಮಾನ ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ  ಸಹೋದರಿ, ಮಗಳು ಸೇರಿದಂತೆ ಹಲವಾರು ಮಹಿಳಾ ಪ್ರತಿಭಟನೆಕಾರರನ್ನು ಮಂಗಳವಾರ ಬಂಧಿಸಲಾಗಿದೆ.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಡಾ. ಅಬ್ದುಲ್ಲಾ ಅವರ ಸಹೋದರಿ ಸುರೈಯಾ ಅಬ್ದುಲ್ಲಾ,  ಮಗಳು ಸಫಿಯಾ ಅಬ್ದುಲ್ಲ ಖಾನ್ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯ ನ್ಯಾಯಾಧೀಶ ಬಶೀರ್ ಅಹ್ಮದ್ ಖಾನ್ ಅವರ ಪತ್ನಿ ಹವ್ವಾ ಬಷೀರ್ ಅಹ್ಮದ್ ಖಾನ್ ಅವರು ಬಂಧನಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ಜಮ್ಮು–ಕಾಶ್ಮೀರದಲ್ಲಿ ಪೋಸ್ಟ್‌ ‍ಪೇಯ್ಡ್ ಮೊಬೈಲ್ ಸೇವೆ ಸೋಮವಾರದಿಂದ ಪುನರಾರಂಭ

 ಆಗಸ್ಟ್5 ರಂದು ನಮ್ಮನ್ನು  ಗೃಹಬಂಧನಕ್ಕೊಳಪಡಿಸಿ ಸಂವಿಧಾನದ 370ನೇ ವಿಧಿ ರದ್ದು ಮಾಡಲಾಗಿತ್ತು. ಇದು ಬಲವಂತವಾದ ಮದುವೆ, ಇದು ಸಾಧ್ಯವಿಲ್ಲ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಸುರೈಯಾ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ.

ಶ್ರೀನಗರದ ಲಾಲ್ ಚೌಕ್‌  ಬಳಿಯ ಪ್ರತಾಪ್ ಪಾರ್ಕ್‌ನಲ್ಲಿ ಪ್ಲೆಕಾರ್ಡ್ ಹಿಡಿದು ಮಹಿಳೆಯರು ಶಾಂತಿಯುತವಾಗಿ ಪ್ರತಿಭಟನೆ  ನಡೆಸಿದ್ದರು. ತಕ್ಷಣವೇ ಪ್ರತಿಭಟನೆ ನಿರತರನ್ನು ಬಂಧಿಸಿ ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು.

ಇದನ್ನೂ ಓದಿ:  ಜನರ ಜೀವ ಉಳಿಸಲು ಫೋನ್ ಸಂಪರ್ಕ ಸ್ಥಗಿತಗೊಳಿಸಿದ್ದೆವು: ಸತ್ಯಪಾಲ್ ಮಲಿಕ್

ಪ್ರತಿಕ್ರಿಯಿಸಿ (+)