ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲವೇ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿನ ನಿರ್ಬಂಧ ತೆರವು 

Last Updated 16 ಆಗಸ್ಟ್ 2019, 12:18 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಹೇರಿದ್ದ ನಿರ್ಬಂಧವನ್ನು ಕೆಲವೇ ದಿನಗಳಲ್ಲಿ ತೆರವು ಮಾಡಲಾಗುವುದು ಎಂದು ರಾಜ್ಯದ ಉನ್ನತ ಆಡಳಿತಾಧಿಕಾರಿಶುಕ್ರವಾರ ಹೇಳಿದ್ದಾರೆ.

ಇಂದು ಮಧ್ಯರಾತ್ರಿಯಿಂದ ಶ್ರೀನಗರದಲ್ಲಿ ದೂರವಾಣಿ ಸಂಪರ್ಕ ಪುನಃಸ್ಥಾಪಿಸಲಾಗುವುದು. ಸೋಮವಾರದಿಂದ ಹಂತ ಹಂತವಾಗಿ ಶಾಲೆಗಳು ಆರಂಭವಾಗಲಿವೆ. ಮೊದಲು ಶ್ರೀನಗರದಲ್ಲಿ ಶಾಲೆಗಳು ಆರಂಭವಾಗಲಿದ್ದು, ನಂತರ ಇನ್ನುಳಿದ ಪ್ರದೇಶಗಳಲ್ಲಿ ಆರಂಭವಾಗಲಿವೆ.

ಹಂತ ಹಂತವಾಗಿ ನಿರ್ಬಂಧ ತೆರವು ಮಾಡಲಾಗುವುದು ಎಂದು ಪ್ರಧಾನಕಾರ್ಯದರ್ಶಿ ಬಿವಿಆರ್ ಸುಬ್ರಮಣ್ಯ ಅವರು ಘೋಷಿಸಿದ್ದಾರೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ದಾಳಿ ಅಥವಾ ಸಮಸ್ಯೆ ಸೃಷ್ಟಿಸುವುದನ್ನು ತಡೆಯುವುದಕ್ಕಾಗಿ ಕಾಶ್ಮೀರದಲ್ಲಿ ನಿರ್ಬಂಧ ಹೇರಲಾಗಿತ್ತು

ಪ್ರಾಣಕ್ಕೆ ಹಾನಿಯಾಗದಂತೆ ಭರವಸೆ ನೀಡುವುದು ನಮ್ಮ ಮೊದಲ ಜವಾಬ್ದಾರಿ. ಕಾಶ್ಮೀರ ಪರಿಸ್ಥಿತಿಯನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಪಾಕಿಸ್ತಾನ ಮಾಡಿದ್ದರೂ ಒಂದೇ ಒಂದು ಪ್ರಾಣ ಹಾನಿ ಅಥವಾ ಗಂಭೀರ ಗಾಯ ಪ್ರಕರಣ ವರದಿಯಾಗಿಲ್ಲ. ಇದು ಸಾಧ್ಯವಾಗಿದ್ದು ಭದ್ರತಾ ಸಿಬ್ಬಂದಿಗಳಿಂದ ಮತ್ತು ಜನರ ಸಹಕಾರದಿಂದ ಎಂದು ಅಧಿಕಾರಿ ಹೇಳಿದ್ದಾರೆ.

ಕಳೆದ 12 ದಿನಗಳಿಂದ ಕಾಶ್ಮೀರದಲ್ಲಿ ನಿರ್ಬಂಧವಿದ್ದು, ಈಗ ಅದನ್ನು ಸಡಿಲಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT