ಜಮ್ಮು: ಪೊಲೀಸ್‌ ಕಾನ್‌ಸ್ಟೆಬಲ್ ಹತ್ಯೆ

7

ಜಮ್ಮು: ಪೊಲೀಸ್‌ ಕಾನ್‌ಸ್ಟೆಬಲ್ ಹತ್ಯೆ

Published:
Updated:

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರಿಂದ ಅಪಹರಣವಾಗಿದ್ದ ಪೊಲೀಸ್‌ ಕಾನ್‌ಸ್ಟೇಬಲ್‌ ಜಾವೇದ್ ಅಹ್ಮದ್ ದರ್ ಅವರ ಮೃತದೇಹ ಶುಕ್ರವಾರ ಪತ್ತೆಯಾಗಿದೆ. 

ಶೋಪಿಯಾನ್‌ನ ವೆಹಿಲ್‌ನಲ್ಲಿರುವ ನಿವಾಸದಿಂದ ಶನಿವಾರ ರಾತ್ರಿ ಅವರನ್ನು ಅಪಹರಿಸಲಾಗಿತ್ತು. 

‘ಪಕ್ಕದ ಕುಲ್ಗಾಂವ್ ಜಿಲ್ಲೆಯ ಸೆಹ್ಪೋರದ ರಸ್ತೆಬದಿಯಲ್ಲಿ ಮೃತದೇಹ ಪತ್ತೆಯಾಗಿದೆ. ತಲೆಗೆ ಗುಂಡಿಟ್ಟು ಅವರ ಹತ್ಯೆ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ಆಸಿಯಾ ಅಂದ್ರಾಬಿ ಎನ್‌ಐಎ ವಶಕ್ಕೆ

ನವದೆಹಲಿ: ನಿಷೇಧಿತ ದುಖ್ತರಾನ್ ಏ ಮಿಲ್ಲತ್ ಮುಖ್ಯಸ್ಥೆ ಆಸಿಯಾ ಅಂದ್ರಾಬಿ ಹಾಗೂ ಇನ್ನಿಬ್ಬರು ಪ್ರತ್ಯೇಕತಾವಾದಿಗಳನ್ನು ದೆಹಲಿ ನ್ಯಾಯಾಲಯ ಗುರುವಾರ 10 ದಿನಗಳ ಅವಧಿಗೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಶಕ್ಕೆ ನೀಡಿದೆ. 

ದೇಶದ ವಿರುದ್ಧ ಯುದ್ಧ ಸಾರಿದ್ದಕ್ಕಾಗಿ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ದ್ವೇಷ ಭಾಷಣ ಮಾಡಿದ್ದಕ್ಕಾಗಿ ಇವರ ವಿರುದ್ಧ ಏಪ್ರಿಲ್‌ನಲ್ಲಿ ಎನ್‌ಐಎ ಪ್ರಕರಣ ದಾಖಲಿಸಿತ್ತು.

ಕಳೆದ ತಿಂಗಳು ಜಾಮೀನು ಅರ್ಜಿ ರದ್ದಾದ ನಂತರ ಅಂದ್ರಾಬಿ ಹಾಗೂ ಅವರ ಜತೆಗಾರರಾದ ಸೋಫಿ ಫಹಮೀದಾ ಹಾಗೂ ನಾಹಿದಾ ನಸ್ರೀನ್ ಶ್ರೀನಗರ ಜೈಲಿನಲ್ಲಿದ್ದಾರೆ. 

ದಾಳಿಯಿಂದ ಮೂವರ ರಕ್ಷಣೆ

ಹಫ್ಲಾಂಗ್ : ಮಕ್ಕಳ ಕಳ್ಳರು ಎನ್ನುವ ಶಂಕೆಯಿಂದಾಗಿ ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಮಹುರ್ ರೈಲು ನಿಲ್ದಾಣದಲ್ಲಿ ಹಲ್ಲೆಗೊಳಗಾಗುತ್ತಿದ್ದ ಮೂವರು ಸಾಧುಗಳನ್ನು ರಕ್ಷಿಸಲಾಗಿದೆ. 

ವದಂತಿಯಿಂದಾಗಿ ನೂರಾರು ಜನರ ಗುಂಪೊಂದು ಗುರುವಾರ ರೈಲು ನಿಲ್ದಾಣದಲ್ಲಿ ಈ ಸಾಧುಗಳ ಮೇಲೆ ಹಲ್ಲೆ ನಡೆಸಲು ಮುಂದಾಗಿತ್ತು. ನಿಲ್ದಾಣದ ಸಮೀಪವೇ ಇದ್ದ ಸೇನಾನೆಲೆಯ ಸಿಬ್ಬಂದಿ,  ಪೊಲೀಸರು ರಕ್ಷಿಸಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !