ಜಮ್ಮು: ಎಲ್‌ಇಟಿ ಉಗ್ರ ಹತ್ಯೆ

7

ಜಮ್ಮು: ಎಲ್‌ಇಟಿ ಉಗ್ರ ಹತ್ಯೆ

Published:
Updated:

ಶ್ರೀನಗರ : ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ಪೊಲೀಸರು ಹಾಗೂ ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಲಷ್ಕರ್‌– ಎ– ತಯಬಾ (ಎಲ್‌ಇಟಿ) ಸಂಘಟನೆಯ ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಒಬ್ಬ ಪೊಲೀಸ್‌ಗೆ ಗಾಯವಾಗಿದೆ. 

‘ಜಿಲ್ಲೆಯ ಅಚಬಾಲ್ ಎನ್ನುವಲ್ಲಿ ಶುಕ್ರವಾರ ರಾತ್ರಿ ಪೊಲೀಸರ ನೆಲೆ ಮೇಲೆ ಉಗ್ರರು ದಾಳಿ ಮಾಡಿದರು. ಪ್ರತಿದಾಳಿ ನಡೆಸಿ ಅವರನ್ನು ಹಿಮ್ಮೆಟ್ಟಿಸಲಾಯಿತು. ಹತ್ಯೆಗೀಡಾದ ಉಗ್ರನನ್ನು ಬಿಲಾಲ್ ಅಹ್ಮದ್‌ ಎಂದು ಗುರುತಿಸಲಾಗಿದ್ದು, ಈತ ಮೂರು ತಿಂಗಳ ಹಿಂದೆ ಲಷ್ಕರ್ ಉಗ್ರ ಸಂಘಟನೆ ಸೇರಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ. 

‘ಸ್ಥಳದಿಂದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !