ಜನೌಷಧ ಯೋಜನೆಯಿಂದ ಜನಸಾಮಾನ್ಯರ ₹1000 ಕೋಟಿ ಉಳಿತಾಯ: ಪ್ರಧಾನಿ

ಬುಧವಾರ, ಮಾರ್ಚ್ 20, 2019
23 °C

ಜನೌಷಧ ಯೋಜನೆಯಿಂದ ಜನಸಾಮಾನ್ಯರ ₹1000 ಕೋಟಿ ಉಳಿತಾಯ: ಪ್ರಧಾನಿ

Published:
Updated:
Prajavani

ನವದೆಹಲಿ: ಜನೌಷಧ ಯೋಜನೆಯ ಮೂಲಕ ಸರ್ಕಾರ, ಗುಣಮಟ್ಟದ ಹಾಗೂ ಕೈಗೆಟಕುವ ದರದಲ್ಲಿ ಔಷಧಗಳನ್ನು ಪೂರೈಸುತ್ತಿದ್ದು, ಜನಸಾಮಾನ್ಯರ ₹1000 ಕೋಟಿ ಹಣ ಉಳಿತಾಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ಪ್ರಧಾನ ಮಂತ್ರಿ ಭಾರತೀಯ ಜನೌಷಧ ಪರಿಯೋಜನ (ಪಿಎಂಬಿಜೆಪಿ) ಫಲಾನುಭವಿಗಳ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಪ್ರಧಾನಿ, ‘ಜನೌಷಧ ಕೇಂದ್ರಗಳು ಶೇ50 ರಿಂದ ಶೇ90ರಷ್ಟು ಅಗ್ಗದಲ್ಲಿ ಜೆನರಿಕ್‌ ಔಷಧಗಳನ್ನು ಮಾರಾಟ ಮಾಡುತ್ತಿವೆ’ ಎಂದಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ದೇಶದಾದ್ಯಂತ 5 ಸಾವಿರ ಜನೌಷಧ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದೂ ಹೇಳಿದ್ದಾರೆ.

ಸಾಮಾನ್ಯ ಬಳಕೆಯ 850 ಔಷಧಗಳ ದರ ಹಾಗೂ ಹೃದಯ ಮತ್ತು ಮೊಣಕಾಲು ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಸಾಧನಗಳ ದರವನ್ನೂ ನಾವು ಕಡಿತಗೊಳಿಸಿದ್ದೇವೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಡಿಸೆಂಬರ್‌ 7 ಅನ್ನು ಜನೌಷಧ ದಿನವಾಗಿ ಆಚರಿಸಲಾಗುವುದು ಎಂದೂ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !