ಗುರುವಾರ , ಜನವರಿ 23, 2020
27 °C

ಜೆಪಿ ಸ್ಪೋರ್ಟ್ಸ್‌ ಲಿಮಿಟೆಡ್‌: 1 ಸಾವಿರ ಹೆಕ್ಟೇರ್ ಜಮೀನು ವಾಪಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ನೊಯಿಡಾ: ಜೆಪಿ ಸಮೂಹಕ್ಕೆ ನೀಡಲಾಗಿದ್ದ 1,000 ಹೆಕ್ಟೇರ್‌ ಭೂಮಿಯನ್ನು ಯುಮುನಾ ಎಕ್ಸ್‌ಪ್ರೆಸ್‌ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ಶನಿವಾರ ರದ್ದುಪಡಿಸಿದೆ.

ಬಾಕಿ ಹಣವನ್ನು ಪಾವತಿಸದ ಕಾರಣ ಪ್ರಾಧಿಕಾರ ಈ ಕ್ರಮ ಕೈಗೊಂಡಿದೆ. ಈ ಹೆದ್ದಾರಿಯಲ್ಲಿ  ಫಾರ್ಮುಲಾ ಒನ್‌ ಮೋಟಾರ್‌ ರೇಸಿಂಗ್‌ ಸರ್ಕ್ಯೂಟ್‌ ನಿರ್ಮಿಸಲಾಗುತ್ತಿದೆ.

‘ಜೆಪಿ ಸಮೂಹದ ಜೆಪಿ ಸ್ಪೋರ್ಟ್ಸ್‌ ಲಿಮಿಟೆಡ್‌ಗೆ ಅಪಾರ ಜಮೀನು ನೀಡಲಾಗಿತ್ತು. ಆದರೆ, ಯೋಜನೆಯನ್ನು ಸಕಾಲಕ್ಕೆ ಮುಗಿಸಿಲ್ಲ ಮತ್ತು ಹಣವನ್ನು ಪಾವತಿಸಿಲ್ಲ’ ಎಂದು ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಣ್‌ವೀರ್‌ ಸಿಂಗ್‌ ತಿಳಿಸಿದ್ದಾರೆ.

‘ಜೆಪಿ ಸಮೂಹ ಸುಮಾರು ₹500 ಕೋಟಿ ಬಾಕಿ ಪಾವತಿಸಬೇಕಾಗಿದೆ. ಜೆಪಿ ಸಮೂಹ ನಿವೇಶನಗಳನ್ನು 11 ಬಿಲ್ಡರ್‌ಗಳಿಗೆ ಉಪ ಗುತ್ತಿಗೆ ನೀಡಿತ್ತು.  ಜತೆಗೆ ಪ್ರತ್ಯೇಕವಾಗಿ 10 ಯೋಜನೆಗಳಲ್ಲಿ ಮನೆ ಖರೀದಿದಾರರಿಂದ ಸುಮಾರು ₹2000 ಕೋಟಿ ಪಡೆದಿದೆ. ಹೀಗಾಗಿ, ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕ್ರಮಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು