ರೈಲು ಹಳಿ ಮೇಲೆ ಬಿಹಾರ ಶಾಸಕಿ ಮಗನ ಶವ ಪತ್ತೆ: ಕೊಲೆ ಆರೋಪ

7

ರೈಲು ಹಳಿ ಮೇಲೆ ಬಿಹಾರ ಶಾಸಕಿ ಮಗನ ಶವ ಪತ್ತೆ: ಕೊಲೆ ಆರೋಪ

Published:
Updated:
ಸಾಂದರ್ಭಿಕ ಚಿತ್ರ

ಪಟ್ನಾ: ಜನತಾ ದಳ(ಯು) ಪಕ್ಷದ ಶಾಸಕಿ ಬಿಮಾ ಭಾರ್ತಿ ಅವರ ಪುತ್ರನ ಶವ ಇಲ್ಲಿನ ನಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಮೀಪದಲ್ಲಿರುವ ರೈಲು ಹಳಿ ಮೇಲೆ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಶವ ರೈಲು ಹಳಿಗಳ ಮೇಲೆ ಸ್ಥಳೀಯರಿಗೆ ಕಾಣಿಸಿಕೊಂಡಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದು ಆತ್ಮಹತ್ಯೆಯೇ, ಕೊಲೆಯೇ ಅಥವಾ ಅವಘಡವೇ ಎಂಬುದನ್ನು ಈಗಲೇ ಹೇಳಲಾಗದು’ ಎಂದು ಡಿಐಜಿ ಬಿ.ಎನ್‌. ಝಾ ಹೇಳಿದ್ದಾರೆ.

‘ಸಾವಿಗೆ ನಿಕರ ಕಾರಣ ಏನೆಂಬುದನ್ನು ಶವಪರೀಕ್ಷೆ ಬಳಿಕವಷ್ಟೇ ಹೇಳಲು ಸಾಧ್ಯ’ ಎಂದೂ ಅವರು ಹೇಳಿದ್ದಾರೆ.

ಭಾರ್ತಿ ಅವರು ಪುರ್ನಿಯಾ ಜಿಲ್ಲೆಯ ರುಪೌಲಿ ಕ್ಷೇತ್ರದ ಶಾಸಕಿಯಾಗಿದ್ದು, ಮಗನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

‘ಇದು ಆತ್ಮಹತ್ಯೆಯಲ್ಲ, ಕೊಲೆ. ನನ್ನ ಮಗ ಕೊಲೆಯಾಗಿದ್ದಾನೆ’ ಎಂದು ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 4

  Sad
 • 0

  Frustrated
 • 1

  Angry

Comments:

0 comments

Write the first review for this !