ರಾಜ್ಯಸಭಾ ಉಪಸಭಾಧ್ಯಕ್ಷ ಸ್ಥಾನಕ್ಕೆ ಚುನಾವಣೆ; ಎನ್‌ಡಿಎ ಅಭ್ಯರ್ಥಿ ಹರಿವಂಶ್‌?

7
ರಾಜ್ಯಸಭಾ ಉಪಸಭಾಧ್ಯಕ್ಷ ಸ್ಥಾನಕ್ಕೆ ಆಗಸ್ಟ್ 9ರಂದು ಚುನಾವಣೆ

ರಾಜ್ಯಸಭಾ ಉಪಸಭಾಧ್ಯಕ್ಷ ಸ್ಥಾನಕ್ಕೆ ಚುನಾವಣೆ; ಎನ್‌ಡಿಎ ಅಭ್ಯರ್ಥಿ ಹರಿವಂಶ್‌?

Published:
Updated:
Deccan Herald

ನವದೆಹಲಿ: ರಾಜ್ಯಸಭಾ ಉಪಸಭಾಧ್ಯಕ್ಷ ಸ್ಥಾನಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿ(ಯು) ರಾಜ್ಯಸಭಾ ಸದಸ್ಯ ಹರಿವಂಶ್‌ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

‘ಉಪಸಭಾಧ್ಯಕ್ಷ ಸ್ಥಾನಕ್ಕೆ ಆಗಸ್ಟ್‌ 9ರ ಬೆಳಿಗ್ಗೆ 11ಗಂಟೆಗೆ ಚುನಾವಣೆ ನಡೆಯಲಿದೆ’ ಎಂದು ಸಭಾಧ್ಯಕ್ಷ ಎಂ.ವೆಂಕಯ್ಯನಾಯ್ಡು ಅವರು ಸೋಮವಾರ ಘೋಷಿಸಿದರು.

ಉಪಸಭಾಧ್ಯಕ್ಷ ಅಭ್ಯರ್ಥಿಯನ್ನು ಪರಸ್ಪರ ಸಮ್ಮತಿಯಿಂದ ಆಯ್ಕೆ ಮಾಡುವಂತೆ ನಾಯ್ಡು ಅವರು ಈ ಹಿಂದೆ ಸಲಹೆ ನೀಡಿದ್ದರು. ಇದರ ಹೊರತಾಗಿಯೂ, ವಿರೋಧ ಪಕ್ಷಗಳು ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದ್ದು, ಚುನಾವಣೆ ನಡೆಯುವುದು ಬಹುತೇಕ ಖಾತ್ರಿಯಾಗಿದೆ.

ಆಗಸ್ಟ್‌ 8ರ ಮಧ್ಯಾಹ್ನದ ಒಳಗಾಗಿ ನಾಮಪತ್ರ ಸಲ್ಲಿಸಬೇಕು.

ರಾಜ್ಯಸಭಾ ಉಪಸಭಾಧ್ಯಕ್ಷರಾಗಿದ್ದ ಪಿ.ಜೆ.ಕುರಿಯನ್‌ ಅವರು ಕಳೆದ ಜುಲೈನಲ್ಲಿ ನಿವೃತ್ತಿಯಾಗಿದ್ದರು. ಇದಾದ ಬಳಿಕ ಈ ಸ್ಥಾನ ಖಾಲಿ ಉಳಿದಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !