ಗುರುವಾರ , ಮಾರ್ಚ್ 4, 2021
22 °C

ಅಮ್ಮ ಮಗನಿಗೆ ಮುತ್ತು ಕೊಟ್ಟರೆ ಅದನ್ನು ಸೆಕ್ಸ್ ಎಂದು ಹೇಳುತ್ತಾರಾ? :ಮಾಂಝಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವಾಡಾ(ಬಿಹಾರ್): ಲೋಕಸಭೆಯಲ್ಲಿ ಬಿಜೆಪಿ ಸಂಸದೆ ರಮಾದೇವಿ ಅವರ ವಿರುದ್ಧ ಆಕ್ಷೇಪಾರ್ಹ ಮತ್ತು ದ್ವಂದ್ವಾರ್ಥದ ಮಾತುಗಳಾಡಿದ್ದ ಸಮಾಜವಾದಿ ಪಕ್ಷದ ಸಂಸದ ಆಜಂ ಖಾನ್ ಪರವಾಗಿ ಹಿಂದೂಸ್ತಾನಿ ಆವಾಮ್ ಮೋರ್ಚಾ ನೇತಾರ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಹೇಳಿಕೆ ನೀಡಿ ವಿವಾದ ಹುಟ್ಟುಹಾಕಿದ್ದಾರೆ.

ಒಬ್ಬ ಸಹೋದರ, ಸಹೋದರಿಯನ್ನು ಭೇಟಿ ಮಾಡಿದಾಗ ಅವರು ಮುತ್ತು ಕೊಡುತ್ತಾರೆ. ಇದನ್ನು ಸೆಕ್ಸ್ ಅಂತಾರೆಯೇ? ಅಮ್ಮ ಮಗನಿಗೆ ಮುತ್ತು ಕೊಡುತ್ತಾಳೆ, ಮಗ ಅಮ್ಮನಿಗೆ ಮುತ್ತುಕೊಡುತ್ತಾನೆ. ಹಾಗಾದರೆ ಅದನ್ನು ಸೆಕ್ಸ್ ಎಂದು ಹೇಳಲಾಗುವುದೇ?. ಆಜಂ ಖಾನ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಹಾಗಾಗಿ ಅವರು ಕ್ಷಮೆಯಾಚಿಸಬೇಕೇ ಹೊರತು ರಾಜೀನಾಮೆ ನೀಡಬಾರದು ಎಂದು ಮಾಂಝಿ ಎಎನ್‌ಐ ಸುದ್ದಿಸಂಸ್ಥೆಗೆ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ

ಕಳೆದ ಗುರುವಾರ ‘ಮುಸ್ಲಿಂ ಮಹಿಳೆ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆ–2019’ರ ಮೇಲಿನ ಚರ್ಚೆಯ ವೇಳೆ ಆಜಂ ಖಾನ್ ಮತ್ತು ರಮಾದೇವಿ ನಡುವೆ ವಾಗ್ವಾದ ನಡೆದಿತ್ತು. ಆಗ ಆಜಂ ಅವರು ಆಕ್ಷೇಪಾರ್ಹವಾದ ಮಾತುಗಳನ್ನು ಆಡಿದ್ದರು. ಕಲಾಪದ ಕಡತದಿಂದ ಆ ಮಾತುಗಳನ್ನು ತೆಗೆದು ಹಾಕಲಾಗಿತ್ತು.

ಈ ಮಾತುಗಳಿಗೆ ಸಂಬಂಧಿಸಿದಂತೆ ಶುಕ್ರವಾರ ಲೋಕಸಭೆಯಲ್ಲಿ ಭಾರಿ ಚರ್ಚೆ ನಡೆಯಿತು. ಆಜಂ ಅವರ ಹೇಳಿಕೆಯಿಂದ ಮಹಿಳೆಯರಿಗೆ ಅವಮಾನವಾಗುತ್ತದೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮುಂದೆ ಯಾರೂ ಇಂತಹ ತಪ್ಪು ಮಾಡಬಾರದು ಎಂಬ ಸಂದೇಶ ರವಾನೆಯಾಗಬೇಕು ಎಂದು ಎಲ್ಲ ಪಕ್ಷಗಳ ಸದಸ್ಯರು ಒತ್ತಾಯಿಸಿದ್ದರು.

ಇದನ್ನೂ ಓದಿ:  ಆಜಂ ಖಾನ್ ಕ್ಷಮೆಗೆ ಹೆಚ್ಚಿದ ಒತ್ತಡ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು