ಮಂಗಳವಾರ, ಜೂನ್ 22, 2021
28 °C

ಅಮರನಾಥ ಯಾತ್ರೆ: ಹೆಚ್ಚಿನ ಭದ್ರತೆಗೆ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಈ ಬಾರಿಯ ಅಮರನಾಥ ಯಾತ್ರೆ ಜುಲೈ 1ರಂದು ಆರಂಭವಾಗಲಿದ್ದು, ಭದ್ರತಾ ಕಾರ್ಯಗಳಿಗಾಗಿ ಹೆಚ್ಚುವರಿಯಾಗಿ 200 ಅರೆ ಸೇನಾಪಡೆಯ ತುಕಡಿಗಳನ್ನು ಒದಗಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.

ಈಗಾಗಲೇ ಸುಮಾರು 300 ತುಕಡಿಗಳು ಇಲ್ಲಿ ಬೀಡುಬಿಟ್ಟಿವೆ. ಈಗ ಹೆಚ್ಚುವರಿಯಾಗಿ 200 ತುಕಡಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಚುನಾವಣೆ ಭದ್ರತೆಗೆ ನಿಯೋಜಿಸಿದ್ದ 300 ತುಕಡಿಗಳನ್ನು ಅಲ್ಲಿಯೇ ಉಳಿಸಿಕೊಳ್ಳಲು ಗೃಹಸಚಿವಾಲಯ ಕಳೆದ ತಿಂಗಳು ಸಮ್ಮತಿಸಿತ್ತು.  ‘ಕೇಂದ್ರ ಗೃಹ ಸಚಿವಾಲಯ ಜೂನ್‌ 15ರಿಂದ ಪಡೆಗಳನ್ನು ನಿಯೋಜಿಸುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು