ಬುಧವಾರ, ಜೂನ್ 3, 2020
27 °C

ಕೋವಿಡ್‌–19 ಸೃಷ್ಟಿಸಿರುವ ಬಿಕ್ಕಟ್ಟಿನಿಂದ ಉದ್ಯೋಗ ನಷ್ಟ: ಶೇ 86 ಜನರಲ್ಲಿ ಆತಂಕ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ‘ಕೋವಿಡ್‌–19’ ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಉದ್ಯೋಗ ಕಳೆದುಕೊಳ್ಳುವ ಮತ್ತು ಜೀವನ ನಿರ್ವಹಣೆಯ ಬಗ್ಗೆ ಭಾರತದಲ್ಲಿ ಶೇ 86 ಜನರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಬ್ರಿಟನ್‌ನ ಸಂಶೋಧನಾ ಸಂಸ್ಥೆ ಕ್ರಾಸ್‌ಬಿ ಟೆಕ್ಸ್ಟರ್‌ ಗ್ರೂಪ್‌ ಏಪ್ರಿಲ್‌ 23 ರಿಂದ 27ರವರೆಗೆ ಜನಾಭಿಪ್ರಾಯ ಸಂಗ್ರಹಿಸಿ ಈ ಮಾಹಿತಿ ನೀಡಿದೆ.

ಭಾರತದಲ್ಲಿ ಸೋಂಕು ನಿಯಂತ್ರಿಸಲು ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಶೇ 84ರಷ್ಟು ಮಂದಿ ಸಂತುಷ್ಟರಾಗಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ಇದು ಗರಿಷ್ಠ ಮಟ್ಟದಲ್ಲಿದೆ.

ಈ ಮಹಾಮಾರಿಯ ಹರಡುವಿಕೆ ಆರಂಭದ ಹಂತದಲ್ಲಿದ್ದು ಇನ್ನೂ ವೇಗವಾಗಿ ವ್ಯಾಪಿಸಲಿದೆ ಎಂದು ಶೇ 84ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಸೋಂಕಿನ ಪ್ರಭಾವ ಕಡಿಮೆಯಾಗುತ್ತಿದೆ ಎಂದು ಅಮೆರಿಕ, ಬ್ರಿಟನ್‌ ಮತ್ತು ಆಸ್ಟ್ರೇಲಿಯಾದ ಜನರು ಹೇಳಿದ್ದರೆ, ನಿಯಂತ್ರಣಕ್ಕೆ ಬಂದಿದೆ ಎಂದು ಹಾಂಗ್‌ಕಾಂಗ್‌ ಜನರು ಹೇಳಿದ್ದಾರೆ.

ಉದ್ಯೋಗ ನಷ್ಟದ ಆತಂಕ
ಭಾರತ: 86%
ಹಾಂಗ್‌ಕಾಂಗ್: 71%
ಆಸ್ಟ್ರೇಲಿಯಾ: 33
ಅಮೆರಿಕ: 41%
ಬ್ರಿಟನ್‌: 33% 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು