ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗವಿಲ್ಲದೆ ‘ಕರ್ಮಭೂಮಿ’ ಬಾಂಬೆಯ ಫುಟ್‌ಪಾತ್‌ಗಳಲ್ಲಿ ಮಲಗಿದ್ದರು ಫರ್ನಾಂಡಿಸ್‌

Last Updated 29 ಜನವರಿ 2019, 10:16 IST
ಅಕ್ಷರ ಗಾತ್ರ

ನವದೆಹಲಿ:ಲಕ್ಷಾಂತರ ಜನರ ಭರವಸೆಯಾಗಿದ್ದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್‌ ತಮ್ಮ 19ನೇ ವಯಸ್ಸಿನಲ್ಲಿ ಉದ್ಯೋಗ ಅರಸಿ ಅಂದಿನ ಬಾಂಬೆಗೆ(ಇಂದಿನ ಮುಂಬೈ) ಬಂದಿದ್ದರು. ಅವರು ಬೀದಿಗಳಲ್ಲೇ ಹಲವು ರಾತ್ರಿಗಳನ್ನು ಕಳೆಯುತ್ತಾ ಜಿರಲೆ, ಇಲಿಗಳೊಟ್ಟಿಗೂ ಹೋರಾಡುತ್ತಾರೆ. ಆದರೆ, ಎಂದಿಗೂ ಈ ಬಗ್ಗೆ ದೂರುತ್ತಿರಲಿಲ್ಲ ಎಂದು ಅಂದಿನ ಕಾಲದವರು ಸ್ಮರಿಸುತ್ತಾರೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಜ್ ಫರ್ನಾಂಡಿಸ್‌(88) ಮಂಗಳವಾರ ನಿಧನರಾಗಿದ್ದಾರೆ. ಈ ಸಂದರ್ಭದಲ್ಲಿ ಅವರ ಬದುಕಿನ ಹಾದಿಗಳನ್ನು ಅವರ ಆಪ್ತರು, ಒಡನಾಡಿಗಳು ಮೆಲುಕು ಹಾಕಿದ್ದಾರೆ.

ಅವರು ಎಂದಿಗೂ ‘ಹೆಚ್ಚು ಕೇಳಲಿಲ್ಲ‘. ಆದರೆ, ತಮ್ಮದೇ ಆದ ಕೌಶಲ, ಪ್ರತಿಭೆ ಮತ್ತು ನಾಯಕತ್ವ ಗುಣಲಕ್ಷಣಗೊಂದಿಗೆ ಕಠಿಣ ಮಾರ್ಗಳ ಮೂಲಕ ಗಳಿಸಲಾರಂಭಿಸಿದರು. ಎಲ್ಲಾ ಮಾರ್ಗಗಳ ಮೂಲಕ ಕಲಿತರು. ಮೇಲಾಗಿ 10 ಭಾಷೆಗಳನ್ನೂ!

ಮುಂದೆ 1967ರಲ್ಲಿ ಸಂಯುಕ್ತ ಸಮಾಜವಾದಿ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿ ಕಾಂಗ್ರೆಸ್‌ನ ಎಸ್.ಕೆ.ಪಾಟೀಲ್‌ ಅವರನ್ನು ಸೋಲಿಸುವ ಮೂಲಕ ‘ಜೈಂಟ್‌ ಕಿಲ್ಲರ್‌’(ದೈತ್ಯ ಸಂಹಾರಕ) ಎಂದು ಪ್ರಸಿದ್ಧಿಯನ್ನೂ ಪಡೆದರು. 1969ರಲ್ಲಿ ಸಂಯುಕ್ತ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ­ಯೂ ಆದರು.

ಅಂತಹ ವಿನಮ್ರವಾದ ಆರಂಭವನ್ನು ಕಂಡ ಅವರು, ವೃತ್ತ ಪತ್ರಿಕೆಯಲ್ಲಿ ‘ಪ್ರೂಫ್‌ ರೀಡರ್‌’ ಆಗಿ ವೃತ್ತಿ ಆರಂಭಿಸಿದರು. ಅನುಭವಿ ನಾಯಕ ಪ್ಲಾಸಿಡ್‌ ಡಿ ಮೆಲ್ಲೊ ಮತ್ತು ನಂತರ ರಾಮ್‌ ಮನೋಹರ ಲೋಹಿಯಾ ಅವರಂತಹ ವ್ಯಕ್ತಿಗಳ ಪ್ರಭಾವದಿಂದ ಸಂಘಟನೆ ಪ್ರಾರಂಭಿಸಿದರು. ಕಾರ್ಮಿಕರ ಹಕ್ಕುಗಳು, ಟ್ಯಾಕ್ಸಿ ಚಾಲಕರು, ಸರ್ಕಾರಿ ಉದ್ಯಗೋಗಿಗಳಿಗಾಗಿ ಹೋರಾಡಿದರು. ಮುಂದೆ ಶಿವಸೇನೆಯು ಸ್ಥಳೀಯರನ್ನು ‘ಮಣ್ಣಿನ ಮಕ್ಕಳು’ ಎಂಬ ಆದೋಲನಕ್ಕೆ ಪ್ರೇರೇಪಿಸಲು ಕಾರಣವಾಯಿತು.

ಹಲವು ದಶಕಗಳ ಕಾಲನಿರಂತರ ಕಾರ್ಮಿಕರನ್ನು ರಕ್ಷಿಸಿದ ಬಳಿಕ, ಫರ್ನಾಂಡಿಸ್‌ ದೇಶವನ್ನು ರಕ್ಷಿಸುವ ರಕ್ಷಣಾ ಸಚಿವರಾದರು. ಕಾರ್ಗಿಲ್‌ ಅಕ್ರಮಣಗಳನ್ನು ತಡೆಯುವಲ್ಲಿ ಮತ್ತು ಪೋಖ್ರಾನ್‌ ಅಣ್ವಸ್ತ್ರ ಪರೀಕ್ಷೆಗಳೊಂದಿಗೆ ರಕ್ಷಣಾಪಡೆಗೆ ಶಕ್ತಿ ತುಂಬಿದರು.

ಮಂಗಳೂರಿನಲ್ಲಿ 1930ರಲ್ಲಿ ರೋಮನ್‌ ಕ್ಯಾಥೋ­ಲಿಕ್‌ ಕುಟುಂಬದಲ್ಲಿ ಜನಿಸಿದ ಜಾರ್ಜ್ ಫರ್ನಾಂಡಿಸ್ ಪಾದ್ರಿಯಾಗಬೇಕು ಎಂದು ಅವರ ಕುಟುಂಬ ಬಯಸಿತ್ತು. ಅದಕ್ಕಾಗಿ 16ನೇ ವಯಸ್ಸಿನಲ್ಲಿ ಅಗತ್ಯವಿದ್ದ ತರಬೇತಿ ಹಾಗೂ ಕಲಿಕೆಗಾಗಿ ಕಳುಹಿಸಲಾಗಿತ್ತು. ಆದರೆ, ಫರ್ನಾಂಡಿಸ್ ಅವರು ಸಮಾಜಮುಖಿಯಾದ ಬೇರೆಯದೇ ಚಿಂತನೆಗಳನ್ನು ಹೊಂದಿ ಬಾಂಬೆಗೆ ಬಂದರು. ಸಮಾಜವಾದಿ ಚಳವಳಿ, ‘ಟ್ರೇಡ್‌ ಯೂನಿಯನ್‌’ ಸಿದ್ಧಾಂತಗಳ ಮೂಲಕ ಮುಂಚೂಣಿಯಲ್ಲಿದ್ದು, ಕಾರ್ಮಿಕ ಸಂಘನೆಯ ಹೋರಾಟಗಳಲ್ಲಿ ಭಾಗಿಯಾದರು. ಇದಾದ ಕೆಲ ವರ್ಷಗಳ ಬಳಿಕ ದೇಶ ಸ್ವಾತಂತ್ರ್ಯ ಪಡೆಯಿತು.

ಮುಂದಿನ ಎರಡು ದಶಕದಲ್ಲಿ ಅವರು 1974ರಲ್ಲಿ ಪ್ರಸಿದ್ಧ 20 ದಿನಗಳ ಭಾರತ ರೈಲ್ವೆ ಮುಷ್ಕರ ನಡೆಸಿದರು. ಸರಣಿ ಮುಷ್ಕರ ನಡೆಸಿದ್ದರಿಂದಾಗಿ ‘ಸ್ರ್ಟೈಕಿಂಗ್‌ ಜಾರ್ಜ್‌‘ ಎಂಬ ಹೆಸರನ್ನೂ ಪಡೆದರು. ‘ಆಲ್‌ ಇಂಡಿಯಾ ಲೈಲ್ವೇಮನ್ಸ್‌ ಫೆಡರೇಷನ್‌‘ನ ಅಧ್ಯಕ್ಷರಾಗಿದ್ದ ಅವರಿಗೆ ಇತರ ಅನೇಕ ಒಕ್ಕೂಟಗಳು, ಸಂಘಟನೆಗಳು ಅವರನ್ನು ಬೆಂಬಲಿಸಿದವು.

ಸರ್ಕಾರವನ್ನು ಅಲ್ಲಾಡಿಸಿದ ಐತಿಹಾಸಿಕ ಘಟನೆಯಾಗಿ ಜಾಗತಿಕ ಖ್ಯಾತಿಯನ್ನು ತಂದುಕೊಟ್ಟಿತು ಮತ್ತು ರಾಜಕಾರಣವನ್ನು ಮಂಡಿಯೂರಿಸುವಂತೆ ಮಾಡಿತು. ಜತೆಗೆ, ತುರ್ತು ಪರಿಸ್ಥಿತಿಗೆ ಕಾರಣವಾದ ಪ್ರಮುಖ ಅಂಶಗಳಲ್ಲಿ ಒಂದಾಗಿತ್ತು. ನಂತರದ ವರ್ಷಗಳಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದರು.

ತೀವ್ರ ಸ್ವತಂತ್ರ ಮನಸ್ಸಿನ ಫರ್ನಾಂಡಿಸ್‌ ತುರ್ತು ಪರಿಸ್ಥಿತಿ ವೇಳೆಯ ಹೋರಾಟ ಮಾಡಿದ್ದಕ್ಕಾಗಿ ಬಂಧನ ವಾರಂಟ್‌ ಜಾರಿಗೊಳಿಸಿದ ಬಳಿಕ ‘ಕಣ್ಮರೆಯಾದರು’. ಅಲ್ಲಿಂದ ಬರೋಡಾಗೆ(ಈಗ ವಡೋದರಾ) ಬರುತ್ತಾರೆ. ಬಳಿಕ, ಸಮಾನ ಮನಸ್ಕರು ಮತ್ತು ಇತರ ಸ್ಥಳೀಯರನ್ನು ಭೇಟಿ ಮಾಡಿ ಇಂದಿರಾ ಗಾಂಧಿ ಅವರ ನಿರಂಕುಶಾಧಿಕಾರವನ್ನು ಮಣಿಸಲು ತಂತ್ರಗಳನ್ನು ಹೆಣೆಯುತ್ತಾರೆ. 1976ರ ಪ್ರಸಿದ್ಧ ಬರೋಡಾ ಡೈನಮೈಟ್‌ ಪ್ರಕರಣವೂ ಇದರ ಒಂದು ಭಾಗವಾಗಿತ್ತು.

ಒಕ್ಕೂಟ ವ್ಯವಸ್ಥೆಯ ಆರಂಭದ ದಿನಗಳಲ್ಲಿ ಫರ್ನಾಂಡಿಸ್‌ ಹಲವಾರು ದಿನಗಳನ್ನು ಜೈಲಿನಲ್ಲಿಯೇ ಕಳೆದರು ಮತ್ತು ಬಾಂಬೆ ಮುನ್ಸಿಪಲ್‌ ಕಾರ್ಪೋರೇಷನ್‌ಗೆ(ಬಿಎಂಸಿ) ಎರಡು ಬಾರಿ ಕಾರ್ಪೋರೇಟರ್‌ ಆಗಿ ಆಯ್ಕೆಯಾದರು. ಇದು ಮುಂದೆ 1967ರಲ್ಲಿ ಪಾಟೀಲ್‌ ವಿರುದ್ಧದ ಸವಾಲನ್ನು ಸ್ವೀಕರಿಸಲು ಪ್ರೇರೇಪಿಸಿತು. ಪಾಟೀಲ್ ಅವರನ್ನು ಚುನಾವಣೆಯಲ್ಲಿ ಮಣಿಸಿ, ಸದ್ದಡಗಿಸುತ್ತಾ ತಮ್ಮ ರಾಜಕೀಯ ವೃತ್ತಿ ಜೀವನ ಆರಂಭಿಸಿದರು.

ಮುಂದೆ 1970ರ ದಶಕದ ಆರಂಭದಲ್ಲಿ ಫರ್ನಾಂಡಿಸ್‌ ಅವರು ಸಂಯುಕ್ತ ಸಮಾಜವಾದಿ ಪಾರ್ಟಿಯ ಮೂಲಕ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿ, ಜನತಾ ಪಕ್ಷ, ಸಮತಾ ಪಕ್ಷ ಮತ್ತು ನ್ಯಾಷನಲ್‌ ಡೆಮಾಕ್ರಟಿಕ್‌ ಅಲಯನ್ಸ್‌ ಮೊದಲಾದ ಪಕ್ಷಗಳ ಮೂಲಕ 1967ರಿಂದ 2004ರ ವರೆಗೆ 9 ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆದು, ದೆಹಲಿ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದರು.

ಖಾಸಗಿ ವಲಯದಲ್ಲಿ ದೊಡ್ಡ ಉದ್ಯೋಗ ಸೃಷ್ಟಿಯೊಂದಿಗೆ ಮುಂಬೈ ಜಾಗತಿಕ ಆರ್ಥಿಕ ಕೇಂದ್ರವಾಗಿ ಪರಿವರ್ತನೆಯಾಯಿತು. ಫರ್ನಾಂಡಿಸ್‌ ರಚಿಸಿದ ತೀವ್ರ ಸ್ವರೂಪದ ಒಕ್ಕೂಟಗಳು ಟ್ರೇಡ್‌ ಯೂನಿಯನ್‌ಗಳಾದವು. 1982ರಲ್ಲಿ ಸುದೀರ್ಘ ‘ಟೆಕ್ಸ್ಟೈಲ್ಸ್‌’ ಮುಷ್ಕರದ ಬಳಿಕ ಉದ್ಯಮ ಆಧಾರಿತ ಕಾರ್ಯಗಳೊಂದಿಗೆ ಮರೆಯಾಯಿತು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT