ರೈಲ್ವೆ ನಿಲ್ದಾಣ ಸ್ವಚ್ಛತಾ ಸಮೀಕ್ಷೆ : ಜೋಧ್‌ಪುರಕ್ಕೆ ಪ್ರಥಮ ಸ್ಥಾನ

7

ರೈಲ್ವೆ ನಿಲ್ದಾಣ ಸ್ವಚ್ಛತಾ ಸಮೀಕ್ಷೆ : ಜೋಧ್‌ಪುರಕ್ಕೆ ಪ್ರಥಮ ಸ್ಥಾನ

Published:
Updated:

ದೆಹಲಿ: ಭಾರತೀಯ ಗುಣಮಟ್ಟ ಮಂಡಳಿಯು ರೈಲ್ವೆ ನಿಲ್ದಾಣಗಳ ಸ್ವಚ್ಛತೆ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ರಾಜಸ್ತಾನದ ಜೋಧ್‌ಪುರ, ಜೈಪುರ,  ಆಂಧ್ರಪ್ರದೇಶದ ತಿರುಪತಿ ರೈಲ್ವೆ ನಿಲ್ದಾಣ ಅನುಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಮತ್ತು  ಮೂರನೇ ಸ್ಥಾನದಲ್ಲಿದೆ. ಈ ಮೂರು ರೈಲ್ವೆನಿಲ್ದಾಣಗಳು ‘ಎ1’ ದರ್ಜೆಗೇರಿವೆ. ಜೊತೆಗೆ ರಾಜಸ್ತಾನದ ಮಾರ್ವಾರ್, ಪುಲೆರ ಮತ್ತು ತೆಲಂಗಾಣದ ವಾರಂಗಲ್‌ ‘ಎ‘ ಸ್ಥಾನದಲ್ಲಿವೆ.

ರೈಲ್ವೆ ಸಚಿವ ಪಿಯೂಷ್‌ ಗೋಯೆಲ್‌ ವರದಿಯನ್ನು ಬಿಡುಗಡೆಮಾಡಿದ್ದು. ರೈಲ್ವೆ ನಿಲ್ದಾಣದಲ್ಲಿ ಶುಚಿತ್ವ ಮತ್ತು ನೈರ್ಮಲ್ಯವನ್ನು ಕಾಪಾಡಲು ಅನೇಕ ಹಂತದ ಮಾನದಂಡಗಳನ್ನು ಮಾಡಿದ್ದೇವೆ ಎಂದು ಹೇಳಿದರು.

 ಕಳೆದ ನಾಲ್ಕು ವರ್ಷಗಳಲ್ಲಿ ಶೇ. 38ರಷ್ಟಿದ್ದ ನೈರ್ಮಲ್ಯದ ವ್ಯಾಪ್ತಿ 2018 ರ ವೇಳೆಗೆ ಶೇ.83 ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.  ದೇಶದಲ್ಲಿ ಏಳು ಕೋಟಿ ಶೌಚಾಲಯಗಳನ್ನು ನಿರ್ಮಿಸಿರುವುದೇ ದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು. 

ಭಾರತೀಯ ರೈಲ್ವೆ ಸ್ವಚ್ಛತೆಯ ಬಗ್ಗೆ ಇದು ಮೂರನೇ ಸಮೀಕ್ಷೆಯಾಗಿದ್ದು. ಎಲ್ಲಾ ಸಮೀಕ್ಷೆಗಳಲ್ಲಿ ಅಲ್ಲಿರುವ ಮಾಲಿನ್ಯ ಗುರುತಿಸಿ ಶುಚಿತ್ವ ಮತ್ತು ನೈರ್ಮಲ್ಯವನ್ನು ಕಾಪಾಡಲು ಉತ್ತಮ ಸ್ಪರ್ಧೆಯನ್ನು ನೀಡುವಂತಾಗಿದೆ ಎಂದರು.

ಕಳೆದ ವರ್ಷದ ಸಮೀಕ್ಷೆಗೆ ಹೋಲಿಸಿದರೆ 100 ನಿಲ್ದಾಣಗಳಲ್ಲಿ ಶೇ. 9ರಷ್ಟು ಅಭಿವೃದ್ಧಿಯಾಗಿದೆ. ಇನ್ನೂ 100 ನಿಲ್ದಾಣಗಳಲ್ಲಿ ಶೇ. 14 ರಷ್ಟು ಅಭಿವೃದ್ಧಿಯಾಗಿದೆ. 200 ರಿಂದ 300 ನಿಲ್ದಾಣಗಳಲ್ಲಿ  ಶೇ.20ರಷ್ಟು ಅಭಿವೃದ್ಧಿಯಾಗಿದೆ ಮತ್ತು 300 – 400 ನಿಲ್ದಾಣಗಳಲ್ಲಿ ಶೇ. 31 ರಷ್ಟು ಅಭಿವೃದ್ಧಿಯಾಗಿದೆ ಎಂದು ತಿಳಿಸಿದರು. 

ಈ ವರ್ಷದ ಸಮೀಕ್ಷೆಯ ಪ್ರಕಾರ ನೈರುತ್ಯ ರೈಲ್ವೆ, ದಕ್ಷಿಣ ಕೇಂದ್ರೀಯ ರೈಲ್ವೆ, ಪೂರ್ವ ಕರಾವಳಿ ರೈಲ್ವೆ ವಲಯಗಳು ಸ್ವಚ್ಛತೆ ಕಾಪಾಡುವಲ್ಲಿ ಅಗ್ರಗಣ್ಯ ಸ್ಥಾನದಲ್ಲಿವೆ. ಅನೇಕ ವಲಯಗಳು 10 ರಿಂದ 20 ರಷ್ಟು ಅಭಿವೃದ್ಧಿಯಾಗಿವೆ. 4 ವಲಯಗಳು ಶೇ. 20 ರಷ್ಟು ಸುಧಾರಿವೆ. 2 ವಲಯಗಳು ಶೇ. 10 ರಷ್ಟು ಶುಚಿತ್ವವನ್ನು ಕಾ‍ಪಾಡಿಕೊಂಡಿದೆ.  

ಈ ಶುಚಿತ್ವ ಮತ್ತು ನೈರ್ಮಲ್ಯವನ್ನು ರೈಲ್ವೆ ನಿಲ್ದಾಣದಲ್ಲಿರುವ ಪಾರ್ಕಿಂಗ್‌, ಮುಖ್ಯದ್ವಾರ, ವಿಶ್ರಾಂತಿ ಕೊಠಡಿ ಈ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಉತ್ತಮ ರೈಲ್ವೆ ನಿಲ್ದಾಣಗಳು ಎಂದು ಗುರುತಿಸಿದ್ದಾರೆ. ಇಲ್ಲಿನ ಸ್ವಚ್ಛತೆಗೆ ಶೇ. 33.33 ರಷ್ಟು ಹಣವನ್ನು ಮಾತ್ರ ನೀಡಲಾಗಿದೆ ಎಂದು ಮೌಲ್ಯಮಾಪಕರು ತಿಳಿಸಿದ್ದಾರೆ. ಇನ್ನು ಶೇ. 33.33 ರಷ್ಟು ವೇತನವನ್ನು ನೀಡಿಲ್ಲವೆಂದು ಪ್ರಯಾಣಿಕರು ಹೇಳುತ್ತಾರೆ. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !