ಮೂರನೇ ಬಾರಿ ಜೋರಾಮ್‌ಗೆ ಮಿಜೋರಾಂ ಚುಕ್ಕಾಣಿ

7

ಮೂರನೇ ಬಾರಿ ಜೋರಾಮ್‌ಗೆ ಮಿಜೋರಾಂ ಚುಕ್ಕಾಣಿ

Published:
Updated:
Deccan Herald

ಗುವಾಹಟಿ: ಮಿಜೋರಾಂ ನೂತನ ಮುಖ್ಯಮಂತ್ರಿಯಾಗಿ ಮಿಜೊ ನ್ಯಾಶನಲ್‌ ಫ್ರಂಟ್‌ (ಎಂಎನ್‌ಎಫ್‌) ಅಧ್ಯಕ್ಷ ಜೋರಾಮ್‌ಥಾಂಗಾ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜೋರಾಮ್‌ಥಾಂಗಾ ಮತ್ತು ಉಪ ಮುಖ್ಯಮಂತ್ರಿಯಾಗಿ ತಾವ್ನಲುಯಾ ಮಿಜೊ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಐವರು ಕ್ಯಾಬಿನೆಟ್‌ ದರ್ಜೆಯ ಸಚಿವರು ಮತ್ತು ಐವರು ರಾಜ್ಯ ಸಚಿವರು ಸೇರಿದಂತೆ 11 ಸಚಿವರು ಕೂಡ ಇದೇ ವೇಳೆ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಕೆ.ರಾಜಶೇಖರನ್‌ ಪ್ರತಿಜ್ಞಾ ವಿಧಿ ಬೋಧಿಸಿದರು. 

74 ವರ್ಷದ ಜೋರಾಮ್‌ಥಾಂಗ್‌ ಅವರು ಮುಖ್ಯಮಂತ್ರಿ ಹುದ್ದೆಗೆ ಏರುತ್ತಿರುವುದು ಇದು ಮೂರನೇ ಬಾರಿ. ಇದಕ್ಕೂ ಮೊದಲು 1998 ಮತ್ತು 2008ರಲ್ಲಿ ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಮಿಜೊ ಚಳವಳಿ ನೇತಾರ

ಎರಡು ದಶಕಗಳ ಮಿಜೊ ಚಳವಳಿಯಲ್ಲಿ ಎಂಎನ್‌ಎಫ್‌ ನಾಯಕ ಲಾಲ್ಡೆಂಗಾ ಜತೆ ಜೋರಾಮ್‌ ಕೂಡ ಪ್ರಮುಖ ಪಾತ್ರವಹಿಸಿದ್ದರು.

1966 ರಿಂದ 1986ರವರೆಗೆ ಮಿಜೋರಾಂ ಪ್ರತ್ಯೇಕತಾ ಚಳವಳಿ ನಡೆದಿತ್ತು. 1986ರಲ್ಲಿ ಕೇಂದ್ರದ ಜತೆ ಒಪ್ಪಂದಕ್ಕೆ ಸಹಿ ಹಾಕಿದ ಎಂಎನ್‌ಎಫ್‌ ಹಿಂಸಾತ್ಮಕ ಹೋರಾಟ ತ್ಯಜಿಸಿತ್ತು.

ಪಕ್ಷ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದು ಲಾಲ್ಡೆಂಗಾ ಮಖ್ಯಮಂತ್ರಿಯಾದರು. 1990ರಲ್ಲಿ ಅವರ ನಿಧನದ ನಂತರ ಜೋರಾಮ್‌ ಎಂಎನ್‌ಎಫ್‌ ಅಧ್ಯಕ್ಷ ಹುದ್ದೆ ವಹಿಸಿಕೊಂಡಿದ್ದರು.

***

ಮಧ್ಯ ನಿಷೇಧ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಣೆ ನನ್ನ ಆಡಳಿತದ ಮೊದಲ ಮೂರು ಆದ್ಯತೆಗಳಾಗಿವೆ

–ಜೋರಾಮ್‌ಥಾಂಗಾ, ಮಿಜೋರಾಂ ನೂತನ ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !