ಸ್ವಿಸ್‌ ಬ್ಯಾಂಕ್‌ಗಳಲ್ಲಿ ಖಾತೆ| ಕನಿಷ್ಠ 50 ಭಾರತೀಯರ ಹೆಸರು ಶೀಘ್ರ ಬಹಿರಂಗ?

ಭಾನುವಾರ, ಜೂಲೈ 21, 2019
22 °C

ಸ್ವಿಸ್‌ ಬ್ಯಾಂಕ್‌ಗಳಲ್ಲಿ ಖಾತೆ| ಕನಿಷ್ಠ 50 ಭಾರತೀಯರ ಹೆಸರು ಶೀಘ್ರ ಬಹಿರಂಗ?

Published:
Updated:

ಬರ್ನ್‌/ನವದೆಹಲಿ: ಸ್ವಿಟ್ಜರ್ಲೆಂಡ್‌ನ ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಕನಿಷ್ಠ 50 ಭಾರತೀಯರ ವಿವರಗಳನ್ನು ಭಾರತದ ಜೊತೆ ಹಂಚಿಕೊಳ್ಳುವ ಪ್ರಕ್ರಿಯೆಗೆ ಸ್ವಿಸ್‌ ಸರ್ಕಾರ ಚಾಲನೆ ನೀಡಿದೆ. ಮಾಹಿತಿ ಹಂಚಿಕೆ ಪ್ರಕ್ರಿಯೆಗೆ ನೆರವಾಗುತ್ತಿರುವ ಭಾರತೀಯ ಅಧಿಕಾರಿಯೊಬ್ಬರು ಭಾನುವಾರ ಈ ಮಾಹಿತಿ ನೀಡಿದ್ದಾರೆ.

ರಿಯಲ್ ಎಸ್ಟೇಟ್‌, ಹಣಕಾಸು ಸೇವೆ, ತಂತ್ರಜ್ಞಾನ, ದೂರಸಂಪರ್ಕ, ಪೇಂಟ್ಸ್‌, ಜವಳಿ, ಎಂಜಿನಿಯರಿಂಗ್‌ ಉತ್ಪನ್ನಗಳು, ಆಭರಣ ಉದ್ದಿಮೆಗಳ ಸಹಭಾಗಿತ್ವ ಹೊಂದಿರುವ ಪ್ರತಿಷ್ಠಿತರು ಖಾತೆ ಹೊಂದಿದವರಲ್ಲಿ ಸೇರಿದ್ದಾರೆ.

2014ರಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ, ಸ್ವಿಸ್‌ಬ್ಯಾಂಕ್‌ನಲ್ಲಿ ಭಾರತೀಯರು ಇಟ್ಟಿರುವ ಹಣವನ್ನು ವಾಪಸ್‌ ತರುವುದಾಗಿ ಭರವಸೆ ನೀಡಿತ್ತು. ಅಂದಿನಿಂದಲೂ ಉಭಯ ರಾಷ್ಟ್ರಗಳು ಈ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿದ್ದು, ಜಾಗತಿಕವಾಗಿ ಸ್ವಪ್ರೇರಿತವಾಗಿ ಮಾಹಿತಿ ವಿನಿಮಯ ಒಪ್ಪಂದಕ್ಕೆ ಸಹಿಹಾಕಿವೆ. ಇದು, ನಕಲಿ ದಾಖಲೆ ಸಲ್ಲಿಸಿ ಖಾತೆ ತೆರೆದು ಅಕ್ರಮ ಆಸ್ತಿ ರಕ್ಷಿಸಿರುವವರ ಮಾಹಿತಿ ವಿನಿಮಯಕ್ಕೂ ಸಹಕಾರಿಯಾಗಿದೆ.

ಈ ಬೆಳವಣಿಗೆಗೆ ಸಂಬಂಧಿಸಿ ಸ್ವಿಸ್‌ ಸರ್ಕಾರ ಹೊರಡಿಸಿರುವ ಗೆಜೆಟ್‌ ಅಧಿಸೂಚನೆಯನ್ನು ಉಲ್ಲೇಖಿಸಿದ ಅಧಿಕಾರಿಗಳು, ‘ಕಳೆದ ಕೆಲ ತಿಂಗಳಲ್ಲಿ ಕನಿಷ್ಠ 50 ಭಾರತೀಯರಿಗೆ ನೋಟಿಸ್‌ ನೀಡಲಾಗಿದೆ. ಮೇಲ್ಮನವಿ ಸಲ್ಲಿಸಲು ಅವರಿಗೆ ಅಂತಿಮ ಅವಕಾಶ ನೀಡಲಾಗಿದೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !