ಭಾನುವಾರ, ಸೆಪ್ಟೆಂಬರ್ 15, 2019
27 °C

‘ದನದ ಮಾಂಸ ನಿಷೇಧ: ಜನರ ಭಾವನೆ ಆಧರಿಸಿ ನಿರ್ಧಾರ’

Published:
Updated:

ಪಣಜಿ: ಕರ್ನಾಟಕದಲ್ಲಿ ದನದ ಹತ್ಯೆಯನ್ನು ನಿಷೇಧಿಸಬೇಕೇ ಎಂಬ ನಿರ್ಧಾರವನ್ನು ಜನರ ಭಾವನೆಗಳ ಆಧಾರದಲ್ಲಿ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಹೇಳಿದ್ದಾರೆ. 

‘ದನದ ಹತ್ಯೆ ನಿಷೇಧ ಕಾನೂನು ಹಲವು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಆದರೆ, ಕರ್ನಾಟಕದಲ್ಲಿ ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ’ ಎಂದು ಜೋಷಿ ಹೇಳಿದ್ದಾರೆ. 

ಬಿಜೆಪಿ ನೇತೃತ್ವದ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದನದ ಮಾಂಸ ಮಾರಾಟ ಹಾಗೂ ಬಳಕೆಗೆ ನಿಷೇಧ ಹೇರುವ ಕಾಯ್ದೆ ಜಾರಿಗೆ ಗಂಭೀರವಾಗಿ ಚಿಂತನೆ ನಡೆಸುತ್ತಿರುವಾಗಲೇ ಜೋಷಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. 

ರಾಜ್ಯದ ಬೆಳಗಾವಿ ಜಿಲ್ಲೆಯಿಂದ ದನದ ಮಾಂಸ ಗೋವಾಕ್ಕೆ  ದೊಡ್ಡ ‌ ಪ್ರಮಾಣದಲ್ಲಿ ರವಾನೆಯಾಗುತ್ತದೆ. ಆದರೆ ಕರ್ನಾಟಕದಲ್ಲಿ ದನದ ಮಾಂಸದ ಮೇಲೆ ನಿಷೇಧ ಹೇರಿದರೆ ಪಕ್ಕದ ಗೋವಾದಲ್ಲಿ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಗೋವಾ ರಾಜ್ಯದಲ್ಲಿ ನಿತ್ಯ 20 ಟನ್ ದನದ ಮಾಂಸ ಬಳಸಲಾಗುತ್ತದೆ. ಪ್ರತಿ ವರ್ಷ 80 ಲಕ್ಷ ಪ್ರವಾಸಿಗರು ಭೇಟಿ ನೀಡುವ ಗೋವಾದಲ್ಲಿ ಹೋಟೆಲುಗಳಲ್ಲಿ ದನದ ಮಾಂಸ ನಿತ್ಯದ ಆಹಾರವಾಗಿದೆ. 

Post Comments (+)