ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ವರ್ಷಗಳ ಏಕಾಂಗಿ ಪಯಣ ಪೂರ್ಣ!

35 ದೇಶಗಳನ್ನು ಸುತ್ತಿ ಬಂದ ಮುಂಬೈ ಪತ್ರಕರ್ತ
Last Updated 22 ಮಾರ್ಚ್ 2019, 20:25 IST
ಅಕ್ಷರ ಗಾತ್ರ

ಮುಂಬೈ: ಏಕಾಂಗಿಯಾಗಿ ಪ್ರಪಂಚ ಪರ್ಯಟನೆ ಆರಂಭಿಸಿದ ಪತ್ರಕರ್ತವಿಷ್ಣುದಾಸ್ ಚಾಪ್ಕೆ (36), ಮೂರು ವರ್ಷಗಳ ಬಳಿಕ ತಾಯ್ನಾಡಿಗೆ ಮರಳಿದ್ದಾರೆ.

ಠಾಣೆ ರೈಲು ನಿಲ್ದಾಣದಿಂದಮಾರ್ಚ್‌ 19 ರಂದು ಇವರ ಪಯಣ ಆರಂಭವಾಗಿತ್ತು.ಗುರುವಾರ ಸಂಜೆ ಹೋಳಿ ಹಬ್ಬದ ಸಂಭ್ರಮದಂದು ಠಾಣೆ ನಿಲ್ದಾಣದಲ್ಲಿ ಇಳಿಯುವ ಮೂಲಕ ಮೂರು ವರ್ಷಗಳ ‘ಸರ್ಕಮ್‌ನ್ಯಾವಿಗೇಷನ್’ ಪೂರ್ಣಗೊಳಿಸಿದ್ದಾರೆ.

ಏಷ್ಯಾ, ಯೂರೋಪ್‌, ದಕ್ಷಿಣ ಅಮೆರಿಕ ಮತ್ತು ಯುರೋಪ್‌ ಖಂಡಗಳ 35 ದೇಶಗಳನ್ನು ಅತಿ ಕಡಿಮೆ ಖರ್ಚಿನಲ್ಲಿ ಕಣ್ತುಂಬಿಕೊಂಡಿದ್ದಾರೆ.

ಈ ಪಯಣದ ಉದ್ದಕ್ಕೂಪರಿಸರ ರಕ್ಷಣೆ, ಯೋಗಾ ಮತ್ತುಸಮಗ್ರ ಅಭಿವೃದ್ಧಿಯ ಕುರಿತು ಜಾಗೃತಿ ಮೂಡಿಸಿರುವ ಹೆಗ್ಗಳಿಕೆ ಇವರದು.

ಇವರ ತಂದೆಪರ್ಭಾನಿ ಜಿಲ್ಲೆಯಮರಾಠವಾಡದಲ್ಲಿ ಕೃಷಿಕರು.ಇವರ ಈ ಪಯಣಕ್ಕೆ ಸಂಘ ಸಂಸ್ಥೆಗಳು ಮತ್ತುಜನರು ನೆರವು ನೀಡಿದ್ದಾರೆ. ‘ಎಷ್ಟು ದೂರ ಕ್ರಮಿಸಿರಬಹುದು ಎಂಬುದನ್ನು ಇನ್ನು ಲೆಕ್ಕ ಹಾಕಬೇಕಿದೆ.ಸುಮಾರು 40,000 ಕಿ.ಮೀ. ಪಯಣ ಬೆಳೆಸಿರಬಹುದು. ಇದೊಂದು ಅದ್ಭುತವಾದ ಪಯಣ... ನಾನು ವಾಪಸ್ಸಾಗಿದ್ದೇನೆ. ಈ ಪಯಣ ನನಗೆ ಸಾಕಷ್ಟು ಕಲಿಸಿದೆ. ನಾನು ಸ್ವಂತ ದೇಶದಲ್ಲಿದ್ದೇನೆ. ಇದು ನನ್ನ ಭೂಮಿ. ಪಾಸ್‌ಪೋರ್ಟ್‌, ವೀಸಾ ತೋರಿಸುವ ಅಗತ್ಯವೇ ಇಲ್ಲ’ ಎಂದುವಿಷ್ಣುದಾಸ್ ಖುಷಿ ಹಂಚಿಕೊಳ್ಳುತ್ತಾರೆ.

ಇವರ ಈ ಸಾಹಸಕ್ಕೆಸರ್ಕಮ್‌ನ್ಯಾವಿಗೇಷನ್ ಮಾಡಿದ ಭಾರತದ ಮೊದಲ ಸಾಹಸಿ ಕ್ಯಾಪ್ಟನ್‌ ದಿಲೀಪ್‌ಡೋಂಡೆ ಪ್ರೇರಣೆಯಂತೆ.ಪವರ್ ವಿಮಾನ, ಹಾಯಿದೋಣಿ ಮೂಲಕ ಜನರು ಸರ್ಕಮ್‌ನ್ಯಾವಿಗೇಷನ್ ಮಾಡುತ್ತಾರೆ. ಆದರೆ ನಾನು ರಸ್ತೆ ಬಳಸಿಈ ಸಾಧನೆ ಮಾಡಿದ್ದೇನೆ ಎಂದು ಬೀಗುತ್ತಾರೆ ವಿಷ್ಣುದಾಸ್.

ರೈಲು, ಟ್ರಕ್‌, ಬಸ್‌, ಕಾರ್‌, ಆಂಬುಲೆನ್ಸ್‌ ಮತ್ತು ಪೊಲೀಸ್‌ ವ್ಯಾನ್‌ ಬಳಸಿ ಇವರು ಪಯಣ ಪೂರ್ಣಗೊಳಿಸಿದ್ದಾರೆ. ಹೋಮ್‌ ಸ್ಟೇ, ಬಸ್‌ ಮತ್ತು ರೈಲು ನಿಲ್ದಾಣವೇ ಇವರಿಗೆ ತಂಗುದಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT