ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಜೆಟ್‌ ಟ್ರೈಲರ್ ಮಾತ್ರ: ಪ್ರಧಾನಿ ನರೇಂದ್ರ ಮೋದಿ

Last Updated 1 ಫೆಬ್ರುವರಿ 2019, 14:01 IST
ಅಕ್ಷರ ಗಾತ್ರ

ನವದೆಹಲಿ: ಇಂದು ಮಂಡಿಸಿರುವ ಬಜೆಟ್‌ಟ್ರೈಲರ್ ಮಾತ್ರ, ಚುನಾವಣೆ ಬಳಿಕದೇಶವನ್ನು ಅಭಿವೃದ್ಧಿಪತದತ್ತ ಕೊಂಡೊಯ್ಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಕೊನೆಯ ಮತ್ತು ಮಧ್ಯಂತರ ಬಜೆಟ್ ಅನ್ನು ಹಂಗಾಮಿ ಹಣಕಾಸು ಸಚಿವ ಪೀಯೂಷ್ ಗೋಯಲ್ ಶುಕ್ರವಾರ ಮಂಡಿಸಿದರು.

ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಧ್ಯಮ ವರ್ಗ, ಮಹಿಳೆಯರು, ರೈತರು ಮತ್ತು ನೌಕರರಿಗೆ ವೈಯಕ್ತಿಕ ತೆರಿಗೆ ವಿನಾಯಿತಿಸೇರಿದಂತೆ ಹಲವು ಕೊಡುಗೆಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ.

12 ಕೋಟಿ ರೈತರು, 3 ಕೋಟಿ ಮಧ್ಯಮವರ್ಗದ ಜನ, ಅಸಂಘಟಿತ ವಲಯದ ಸುಮಾರು 40 ಕೋಟಿ ಕಾರ್ಮಿಕರು ಬಜೆಟ್‌ನಿಂದ ಲಾಭ ಪಡೆಯಲಿದ್ದಾರೆ. ಸರ್ಕಾರದ ಕ್ರಮಗಳಿಂದ ಬಡತನದ ಪ್ರಮಾಣ ದಾಖಲೆ ಮಟ್ಟದಲ್ಲಿ ಇಳಿಕೆಯಾಗಲಿದೆ ಎಂಬ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದ್ದಾರೆ.

ವಾರ್ಷಿಕ ಆದಾಯ ತೆರಿಗೆ ಮಿತಿಯನ್ನು ₹2.5 ಲಕ್ಷದಿಂದ ₹5 ಲಕ್ಷದವರೆಗೆ ಏರಿಸಲಾಗಿದ್ದು, ₹5ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಪ್ರತಿ ವರ್ಷ ಬಜೆಟ್‌ ಮಂಡಿಸುವಮುನ್ನ ಆದಾಯ ತೆರಿಗೆ ಮಿತಿಯನ್ನು ಹೆಚ್ಚಳ ಮಾಡುವಂತೆ ಪ್ರಸ್ತಾವನೆಗಳು ಬರುತ್ತಿದ್ದವು ನಮ್ಮ ಸರ್ಕಾರ ಇದನ್ನು ಜನರ ಬೇಡಿಕೆಯನ್ನು ಪೂರೈಸಿದೆ ಎಂದು ಮೋದಿ ತಿಳಿಸಿದ್ದಾರೆ.

ಈ ಬಜೆಟ್‌ ಬಡವರಿಗೆ ಆಶ್ರಯ, ರೈತರಿಗೆ ಶಕ್ತಿ, ಕಾರ್ಮಿಕರಿಗೆ ಗೌರವವನ್ನು ತಂದುಕೊಡಲಿದೆ, ಮಧ್ಯಮವರ್ಗದ ಜನರ ಕನಸುಗಳು ನನಸಾಗಲಿವೆ. ಬಜೆಟ್‌ ನೆರವಿನಿಂದಾಗಿ ದೇಶದ 130 ಕೋಟಿ ಜನರ ಕನಸುಗಳುನನಸಾಗಲಿವೆ ಎಂದು ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT