9 ಪೊಲೀಸರ ವಿರುದ್ಧ ಕ್ರಮ

7
ಗುಜರಾತ್‌ ಪೊಲೀಸರಿಂದ ಮೂರು ನಕಲಿ ಎನ್‌ಕೌಂಟರ್‌: ತನಿಖೆಯಿಂದ ಸಾಬೀತು

9 ಪೊಲೀಸರ ವಿರುದ್ಧ ಕ್ರಮ

Published:
Updated:

ನವದೆಹಲಿ: ಗುಜರಾತ್‌ನಲ್ಲಿ 2002ರಿಂದ 2006ರ ನಡುವೆ ನಡೆದ ಹಲವು ನಕಲಿ ಎನ್‌ಕೌಂಟರ್‌ ಪ್ರಕರಣಗಳ ತನಿಖೆ ನಡೆಸಿರುವ ನ್ಯಾಯಮೂರ್ತಿ ಎಚ್‌.ಎಸ್‌.ಬೇಡಿ ನೇತೃತ್ವದ ಸಮಿತಿಯು 17 ಪ್ರಕರಣಗಳ ಪೈಕಿ ಮೂರು ಪ್ರಕರಣಗಳು ನಕಲಿಯಾಗಿದ್ದು, ಈ ಸಂಬಂಧ 9 ಪೊಲೀಸರನ್ನು ವಿಚಾರಣೆಗೆ ಒಳಪಡಿಸಲು ಶಿಫಾರಸು ಮಾಡಿದೆ. 

ಬೇಡಿ ಅವರು ಸುಪ್ರೀಂ ಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಿದ್ದು, ಸಮೀರ್‌ ಖಾನ್‌, ಕಸಮ್‌ ಜಾಫರ್‌ ಹಾಗೂ ಹಾಜಿ ಹಾಜಿ ಇಸ್ಮಾಯಿಲ್‌ ಎಂಬ ಮೂವರನ್ನು ಗುಜರಾತ್‌ ಪೊಲೀಸರು ನಕಲಿ ಎನ್‌ಕೌಂಟರ್‌ಗಳಲ್ಲಿ ಹತ್ಯೆ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಿದ್ದಾರೆ.

ಮೂವರು ಇನ್‌ಸ್ಪೆಕ್ಟರ್‌ಗಳು ಸೇರಿ ಒಂಬತ್ತು ಪೊಲೀಸರ ವಿರುದ್ಧ ಕಾನೂನು ಕ್ರಮಕ್ಕೆ ಸಮಿತಿ ಶಿಫಾರಸು ಮಾಡಿದೆ.

ಆದರೆ, ಯಾವುದೇ ಐಪಿಎಸ್‌ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಶಿಫಾರಸು ಮಾಡಿಲ್ಲ ಎಂದು ತಿಳಿದು ಬಂದಿದೆ.

**

‘ಪೊಲೀಸ್‌ ಅಧಿಕಾರಿಗಳು ಸಮೀರ್‌ ಖಾನ್‌ ಸಮೀಪವೇ ಇದ್ದರು. ಬಹುಶಃ ಆತ ನೆಲದ ಮೇಲೆ ಕುಳಿತು, ಪ್ರಾಣ ಭಯದಿಂದ ಕಣ್ಣೀರಿಡುತ್ತಿದ್ದ’
–ನ್ಯಾಯಮೂರ್ತಿ ಎಚ್‌.ಎಸ್‌.ಬೇಡಿ ಸಮಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !