ಭಾನುವಾರ, ಆಗಸ್ಟ್ 18, 2019
26 °C

ಕಮಲನಾಥ್‌ ಸಂಬಂಧಿಯ ₹300 ಕೋಟಿ ಬಂಗಲೆ ಮುಟ್ಟುಗೋಲು

Published:
Updated:

ನವದೆಹಲಿ: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್‌ ಅವರ ಸೋದರಸಂಬಂಧಿ ರಾತುಲ್‌ ಪುರಿ ಅವರಿಗೆ ಸೇರಿದ, ₹ 300 ಕೋಟಿ ಬೆಲೆಬಾಳುವ ದೆಹಲಿಯ ಬಂಗಲೆಯನ್ನು ಆದಾಯತೆರಿಗೆ ಇಲಾಖೆಯು ಭಾನುವಾರ ಮುಟ್ಟುಗೋಲು ಹಾಕಿಕೊಂಡಿದೆ.

ದೆಹಲಿಯ ಎಪಿಜೆ ಅಬ್ದುಲ್‌ ಕಲಾಂ ರಸ್ತೆಯಲ್ಲಿರುವ ಐಷಾರಾಮಿ ಬಂಗಲೆಯು ರಾತುಲ್‌ ಅವರ ತಂದೆ, ದೀಪಕ್‌ ಪುರಿ ಮಾಲೀಕತ್ವದ ‘ಮೋಸರ್‌ ಬೇರ್‌’ ಸಮೂಹ ಸಂಸ್ಥೆಯ ಹೆಸರಿನಲ್ಲಿದೆ.

‘ಬೇನಾಮಿ ಆಸ್ತಿ ತಡೆ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದ್ದು, ರಾತುಲ್‌ ಹಾಗೂ ದೀಪಕ್‌ ಅವರಿಗೆ ಸೇರಿರುವ ವಿದೇಶಿ ನೇರ ಹೂಡಿಕೆಯೂ ಸೇರಿದಂತೆ ಒಟ್ಟು 4 ಕೋಟಿ ಡಾಲರ್‌ (ಸುಮಾರು ₹ 284 ಕೋಟಿ) ಮೌಲ್ಯದ ಸೊತ್ತನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post Comments (+)