ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯಕ್ಕೆ ಹಾಜರಾಗಲ್ಲ,ರಾಜೀನಾಮೆ ನಿರ್ಧಾರ ಅಚಲ : ಐಎಎಸ್ ಕಣ್ಣನ್ ಗೋಪಿನಾಥನ್

Last Updated 30 ಆಗಸ್ಟ್ 2019, 12:16 IST
ಅಕ್ಷರ ಗಾತ್ರ

ಸೂರತ್: ಕಾಶ್ಮೀರದಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ನಿರಾಕರಿಸಲಾಗುತ್ತಿದೆ ಎಂದು ಎಂದು ಹೇಳಿ ರಾಜೀನಾಮೆ ನೀಡಿದ್ದ ಐಎಎಸ್‌ ಅಧಿಕಾರಿ ಕಣ್ಣನ್ ಗೋಪಿನಾಥನ್ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದಿದ್ದಾರೆ.

ದಾಮನ್ ಮತ್ತು ದಿಯು, ದಾದ್ರ ಮತ್ತು ನಾಗರಹವೇಲಿ (ಡಿಡಿಡಿಎನ್‌ಎಚ್) ಐಎಎಸ್‌ ಅಧಿಕಾರಿ ಕಣ್ಣನ್ ಗೋಪಿನಾಥನ್ ರಾಜೀನಾಮೆ ನೀಡಿದ್ದರೂ ಅದನ್ನು ಅಲ್ಲಿನ ಆಡಳಿತಾಧಿಕಾರಿಗಳು ಸ್ವೀಕರಿಸಿರಲಿಲ್ಲ. ಕರ್ತವ್ಯಕ್ಕೆ ಹಾಜರಾಗುವಂತೆ ಅಲ್ಲಿನ ಅಲ್ಲಿನ ಆಡಳಿತಾಧಿಕಾರಿಗಳು ನೋಟಿಸ್ ಕಳುಹಿಸಿದ್ದು, ಕಣ್ಣನ್ ತಾನು ಹಾಜರಾಗಲ್ಲ ಎಂದು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಬುಧವಾರ ನಾನು ಸಿಲ್ವಸ್ಸಾದಲ್ಲಿರುವ ಮನೆಗೆ ವಾಪಸ್ ಬಂದೆ. ಅಲ್ಲಿ ಮನೆ ಬಾಗಿಲಿಗೆ ನೋಟಿಸ್ ಅಂಟಿಸಲಾಗಿತ್ತು. ರಾಜೀನಾಮೆ ಸ್ವೀಕರಿಸುವ ಅವಧಿವರೆಗೆ ನಾನು ಕರ್ತವ್ಯಕ್ಕೆ ಹಾಜರಾಗಬಹುದಾಗಿದೆ. ನಾನು ರಾಜೀನಾಮೆ ನೀಡುವಿ ವಿಚಾರವನ್ನು ಸಾರ್ವಜನಿಕವಾಗಿಯೇ ತಿಳಿಸಿದ್ದೆ. ಆ ನಿರ್ಧಾರವನ್ನು ನಾನು ಬದಲಾಯಿಸುವುದಿಲ್ಲ. ರಾಜೀನಾಮೆ ಸ್ವೀಕರಿಸುವ ವರೆಗಿನ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವುದು ನನಗೆ ಸರಿ ಅನಿಸುತ್ತಿಲ್ಲ.

ನಾನು ಮುಂದಿನ ಜೀವನದ ಬಗ್ಗೆ ಯೋಚಿಸಿಲ್ಲ.ಸಾರ್ವಜನಿಕ ಸೇವೆ ಮಾಡುತ್ತಿರುವ ಖಾಸಗಿ ಸಂಸ್ಥೆಗಳೊಂದಿಗಿನ ಕೆಲಸ ಕಾರ್ಯ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ಕಳೆದ ಒಂದು ವಾರ ತುಂಬಾ ಬ್ಯುಸಿಯಾಗಿದ್ದ ಕಾರಣ ಈ ಬಗ್ಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗಿಲ್ಲ ಎಂದುಕಣ್ಣನ್ ಹೇಳಿದ್ದಾರೆ.
ಜನರು ಮತ್ತು ಜನರ ಸೇವೆಗೆಂದು ನಿಯೋಜಿತರಾದ ಅಧಿಕಾರಗಳ ಧ್ವನಿಯನ್ನು ಸರ್ಕಾರ ಅಡಗಿಸುತ್ತಿದೆ. ಇದರಿಂದ ಮನನೊಂದು ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕಣ್ಣನ್ ಹೇಳಿರುವುದಾಗಿ ಸುದ್ದಿಮೂಲಗಳು ವರದಿ ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT