ಶುಕ್ರವಾರ, ಆಗಸ್ಟ್ 6, 2021
25 °C

ಮಾಸ್ಕ್‌ ಧರಿಸದೇ ದಂಡ ತೆತ್ತ ಐಜಿಪಿ!

ಪಿಟಿಐ Updated:

ಅಕ್ಷರ ಗಾತ್ರ : | |

ಕಾನ್ಪುರ : ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸಿರಲಿಲ್ಲ ಎಂಬ ಕಾರಣಕ್ಕಾಗಿ ಕಾನ್ಪುರ ವಲಯದ ಐಜಿಪಿ ಮೋಹಿತ್ ಅಗರವಾಲ್ ಅವರು ದಂಡ ತೆತ್ತಿದ್ದಾರೆ.

ಮಾಸ್ಕ್ ಧರಿಸದೇ ಮನೆಯಿಂದ ಹೊರಗೆ ಬಂದಿದ್ದಕ್ಕಾಗಿ ತಮಗೆ ದಂಡ ವಿಧಿಸುವಂತೆ ಬರ್ರಾ ಪೊಲೀಸ್ ಠಾಣೆಯ ಅಧಿಕಾರಿಗೆ ಸೂಚಿಸುವ ಮೂಲಕ ಸ್ವತಃ ಮಾದರಿಯಾಗಿದ್ದಾರೆ.

₹ 100 ದಂಡ ವಿಧಿಸಿ ರಸೀದಿ ನೀಡಿದ್ದು, ಐಜಿಪಿ ಸ್ಥಳದಲ್ಲಿಯೇ ದಂಡ ಪಾವತಿಸಿದ್ದಾರೆ. ‘ಬರ್ರಾಗೆ ಪರಿಶೀಲನೆಗಾಗಿ ಬೆಳಿಗ್ಗೆ ತೆರಳಿದ್ದೆ. ಮಾಸ್ಕ್ ಧರಿಸದೇ ವಾಹನದಿಂದ ಕೆಳಗಿಳಿದಿದ್ದೆ’ ಎಂದು ಐಜಿಪಿ ಹೇಳಿದರು.

‘ಕೆಳಹಂತದ ಅಧಿಕಾರಿಗಳ ಜೊತೆಗೆ ನಾನು ಚರ್ಚೆ ಮಾಡಿದೆ. ಬಳಿಕ ನಾನೇ ಮಾಸ್ಕ್ ಧರಿಸಿಲ್ಲದೇ ತಪ್ಪು ಎಸಗಿದ್ದೇನೆ ಎಂಬುದು ಗಮನಕ್ಕೆ ಬಂದಿತು. ತಕ್ಷಣವೇ ಮಾಸ್ಕ್ ಹಾಕಿಕೊಂಡೆ. ಇಲ್ಲಿ ನೈತಿಕತೆಯ ಪ್ರಶ್ನೆಯೂ ಇದ್ದುದರಿಂದ ದಂಡ ವಿಧಿಸುವಂತೆ ಠಾಣಾಧಿಕಾರಿಗೆ ತಿಳಿಸಿದೆ’ ಎಂದು ಐಜಿಪಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು