ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಂಗಳೂರ್‌ನಿಂದ ಕಾಶ್ಮೀರ್’ ಚಿತ್ರೀಕರಣ ಮುಕ್ತಾಯ

Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ಕೃಷ್ಣ ಗಾರ್ಮೆಂಟ್ಸ್’ ಮೊದಲ ಹಂತ

‘ಕೃಷ್ಣ ಗಾರ್ಮೆಂಟ್ಸ್` ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಸನದಲ್ಲಿ ಎಂಟು ದಿನ ಹಾಗೂ ಬೆಂಗಳೂರು ಸುತ್ತಮುತ್ತ ಹತ್ತು ದಿನಗಳ ಚಿತ್ರೀಕರಣ ನಡೆದಿದೆ. ಈ ಹಂತದ ಚಿತ್ರೀಕರಣದಲ್ಲಿ ರಾಜೇಶ್ ನಟರಂಗ, ಭಾಸ್ಕರ್ ನೀನಾಸಂ, ಚಂದು, ರಶ್ಮಿತಾ ಮುಂತಾದ ಕಲಾವಿದರು ಪಾಲ್ಗೊಂಡಿದ್ದಾರೆ. ಮೊದಲ ಹಂತದ ಚಿತ್ರೀಕರಣದಲ್ಲಿ ಮಾತಿನ ಭಾಗದ ಚಿತ್ರೀಕರಣದೊಂದಿಗೆ ಒಂದು ಹಾಡಿನ ಚಿತ್ರೀಕರಣ ಸಹ ನಡೆದಿದೆ.

ಪ್ರೀತಿ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಸಿದ್ದು ಪೂರ್ಣಚಂದ್ರ ನಿರ್ದೇಶಿಸುತ್ತಿದ್ದಾರೆ. ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿದ್ದಾರೆ. 

ಕಿರುತೆರೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಭಾಸ್ಕರ್ ನೀನಾಸಂ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ರಶ್ಮಿತಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.  ರಘು ಧನ್ವಂತ್ರಿ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಚಿದಾನಂದ್ ಅವರ ಛಾಯಾಗ್ರಹಣವಿದೆ. ಕೆ. ಶ್ರೀನಿವಾಸಮೂರ್ತಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
**
ಅಮ್ಮನಿಗೋಸ್ಕರ ಅನುರಾಧಾ ಭಟ್ ಹಾಡು

ಗಾಯಕಿ ಅನುರಾಧಾ ಭಟ್ ಕಂಠಸಿರಿಯಲ್ಲಿನ ‘ಚೌಕ’ ಚಿತ್ರದ ‘ಅಪ್ಪಾ ಐ ಲವ್ ಯೂ’ ಹಾಡು ಸೂಪರ್ ಹಿಟ್ ಆಗಿತ್ತು. ಇದೀಗ ಅದೇ ಗಾಯಕಿ ಅಮ್ಮನ ಬಗ್ಗೆ ಹಾಡಿರುವ ಹೊಸ ಹಾಡು ಬಿಡುಗಡೆಯಾಗಿದೆ. ಈ ಹಾಡು ‘ಅಸತೋಮ ಸದ್ಗಮಯ’ ಚಿತ್ರದ್ದು. ‘‘ನಾ ತೆರೆದೆ ತುಂಬಾ ಹಳೆಯ ಪುಟವ’ ಎಂದು ಆರಂಭವಾಗುವ ಈ ಹಾಡಿನ ಸಂಗೀತದ ಜೊತೆಗೆ ಸಾಹಿತ್ಯವೂ ಉತ್ತಮವಾಗಿದೆ. ಅಮ್ಮನ ಪ್ರೀತಿಗೋಸ್ಕರ ಹಪಹಪಿಸುತ್ತಿರುವರಿಗಾಗಿ ಈ ಹಾಡನ್ನು ಅರ್ಪಿಸಲಾಗಿದೆ. ಜೊತೆಗೆ ಅಮ್ಮನ ಪ್ರೀತಿ ಎಷ್ಟು ದೊಡ್ಡದು ಎಂಬುದನ್ನು ಈ ಹಾಡಿನಲ್ಲಿ ವರ್ಣಿಸಲಾಗಿದೆ’ ಎನ್ನುತ್ತಾರೆ ಸಂಗೀತ ನಿರ್ದೇಶಕ ವಹಾಬ್ ಸಲೀಂ. ಈ ಹಾಡಿಗೆ ಸಾಹಿತ್ಯವನ್ನೂ ಅವರೇ ಬರೆದಿದ್ದಾರೆ.

ರಾಧಿಕಾ ಚೇತನ್‍ ಮುಖ್ಯ ಭೂಮಿಕೆಯಲ್ಲಿರುವ ‘ಅಸತೋಮ ಸದ್ಗಮಯ’ ಚಿತ್ರವನ್ನು ರಾಜೇಶ್ ವೇಣೂರ್ ನಿರ್ದೇಶಿಸಿದ್ದಾರೆ. ಐಕೇರ್ ಮೂವೀಸ್ ಲಾಂಛನದಡಿಯಲ್ಲಿ ಅಶ್ವಿನ್ ಜೊಸ್ಸಿ ಪಿರೇರಾ ನಿರ್ಮಿಸಿದ್ದಾರೆ.
**
‘ಬೆಂಗಳೂರ್‌ನಿಂದ ಕಾಶ್ಮೀರ್’ ಚಿತ್ರೀಕರಣ ಮುಕ್ತಾಯ

ಮಾದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಓಂಪ್ರಕಾಶ್ ನಿರ್ಮಿಸುತ್ತಿರುವ ‘ಬೆಂಗಳೂರ್‌ನಿಂದ ಕಾಶ್ಮೀರ್’ ಚಿತ್ರದ ಕಡೆಯ ದೃಶ್ಯವನ್ನು ಇತ್ತೀಚೆಗೆ ಚಿತ್ರೀಕರಿಸಿಕೊಳ್ಳಲಾಯಿತು. ಪೊಲೀಸ್ ಸ್ಟೇಷನ್ ಒಂದರಲ್ಲಿ ಪ್ರೀತಿಸಿದ ಹುಡುಗಿ ಆಕಸ್ಮಿಕವಾಗಿ ಕೊಲೆಯಾಗಿರುತ್ತಾಳೆ. ಆ ಕೊಲೆಯ ಕೇಸು ನಾಯಕನ ಮೇಲೆ ಬರುತ್ತದೆ. ವಿಚಾರಣೆಗಾಗಿ ಪೊಲೀಸ್ ಸ್ಟೇಷನ್‍ಗೆ ನಾಯಕ ಹಾಗೂ ಸ್ನೇಹಿತನನ್ನು ಕರೆದುಕೊಂಡು ವಿಚಾರಣೆ ಮಾಡುವ ದೃಶ್ಯವನ್ನು ಕಳೆದ ವಾರ ಭೂಮಿಕಾ ಸ್ಟುಡಿಯೊದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಈ ದೃಶ್ಯದ ಮೂಲಕ ಚಿತ್ರದ ಚಿತ್ರೀಕರಣ ಮುಗಿದಿದೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

ಓಂ ಪ್ರಕಾಶ್ ನಾಯಕ್ ಕಥೆ, ಚಿತ್ರಕಥೆ, ಸಾಹಿತ್ಯ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಶಿವಪ್ರಕಾಶ್ ಛಾಯಾಗ್ರಹಣ, ಮಧುರ ಸಂಗೀತವಿದೆ. ಸ್ಮೈಲ್ ಶಿವು, ಉಮಾದೇವಿ, ಅಶ್ವಿನಿ, ಎಂ.ಡಿ. ಕೌಶಿಕ್, ಭಾಗೀರಥಿ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT