ಕನ್ವಾರ್ ಯಾತ್ರಿಗಳ ಸಿಟ್ಟಿಗೆ ಕಾರು ಧ್ವಂಸ

7

ಕನ್ವಾರ್ ಯಾತ್ರಿಗಳ ಸಿಟ್ಟಿಗೆ ಕಾರು ಧ್ವಂಸ

Published:
Updated:
Deccan Herald

ನವದೆಹಲಿ: ಕನ್ವಾರ್ ಯಾತ್ರಿಗಳು ಕಾರೊಂದನ್ನು ಧ್ವಂಸಗೊಳಿಸಿದ ಘಟನೆ ಮೋತಿನಗರ ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದಿದೆ. ಸಂಜೆ 5.30ರ ವೇಳೆ ರಸ್ತೆ ಬದಿ ಹೋಗುತ್ತಿದ್ದ ಯಾತ್ರಾರ್ಥಿಗಳಿಗೆ ಕಾರು ತಾಗಿತು ಎಂಬ ಕಾರಣಕ್ಕೆ ಮಾತಿನ ಚಕಮಕಿ ನಡೆಯಿತು. ಸಿಟ್ಟಿಗೆದ್ದ ಗುಂಪು ಕಾರನ್ನು ಬುಡಮೇಲು ಮಾಡಿತು ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿದ್ದ ಮಹಿಳೆ ಹಾಗೂ ಅವರ ಗೆಳೆಯನಿಗೆ ಯಾವುದೇ ಗಾಯವಾಗಿಲ್ಲ. 

‘ಕಾರಿನಲ್ಲಿದ್ದ ವ್ಯಕ್ತಿ ಯಾತ್ರಿಯೊಬ್ಬರ ಕಪಾಳಕ್ಕೆ ಹೊಡೆದರು. ಘಟನೆ ನಡೆದ 10 ನಿಮಿಷಕ್ಕೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಪ್ರಕರಣ ದಾಖಲಾಗಿದೆ’ ಎಂದು ಪಶ್ಚಿಮ ದೆಹಲಿ ಡಿಸಿಪಿ ವಿಜಯ್ ಕುಮಾರ್ ಹೇಳಿದ್ದಾರೆ. 

ಹರಿದ್ವಾರ, ಗೋಮುಖ್, ಗಂಗೋತ್ರಿ ಮತ್ತು ಸುಲ್ತಾನ್‌ಗಂಜ್‌ಗೆ ಯಾತ್ರೆಗೆ ತೆರಳುವವರನ್ನು ಕನ್ವಾರ್ ಯಾತ್ರಾರ್ಥಿಗಳು ಎಂದು ಕರೆಯುತ್ತಾರೆ.  

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !