ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಂಕಾರದ ಮಾತು

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಆವರಗೊಳ್ಳದ ಪಂಚಾಚಾರ್ಯ ರಂಭಾಪುರಿ ಸಂಸ್ಥಾನ ಶಾಖಾ ಮಠದ ಓಂಕಾರೇಶ್ವರ ಸ್ವಾಮೀಜಿ 'ಪ್ರಜಾವಾಣಿ'ಗೆ ನೀಡಿದ ಸಂದರ್ಶನದಲ್ಲಿ (ಏ. 25) ಎಂದಿನಂತೆ ತಮ್ಮ ಅಹಂಕಾರವನ್ನು ಪ್ರದರ್ಶಿಸಿದ್ದಾರೆ! ಕಲ್ಯಾಣ ಕ್ರಾಂತಿಗೆ ಜಾತಿವಾದಿಗಳೇ ಕಾರಣ ಎಂದು ಇತಿಹಾಸ ಹೇಳುತ್ತಿರುವಾಗ '...ಶರಣರೇ ಬಸವಣ್ಣನವರ ಜೀವಕ್ಕೆ ಕುತ್ತು ತಂದರು' ಎಂಬ ಇವರ ಮಾತನ್ನು ಒಪ್ಪಲಾಗದು.

'ಗುರುವು ಗುರುವೇ ಮತ್ತು ಜಂಗಮ ಜಂಗಮನೇ' ಎನ್ನುವ ಮೂಲಕ 'ವಿರಕ್ತ'ರು 'ಗುರು'ಗಳಿಗೆ ಸಮರಲ್ಲ ಎಂಬುದನ್ನು ಪರೋಕ್ಷವಾಗಿ ಪ್ರತಿಪಾದಿಸಿದ್ದಾರೆ! 'ಬಸವಣ್ಣನವರನ್ನು ನಾವೂ ಗೌರವಿಸುತ್ತೇವೆ' ಎಂಬ ಇವರ ಮಾತನ್ನು ಬಸವಣ್ಣನವರಿಗೆ ಪಂಚಾಚಾರ್ಯರಿಂದ ಆದ ಅಪಮಾನ ನೋಡುತ್ತಾ ಬಂದ ಯಾರೂ ಒಪ್ಪುವುದಿಲ್ಲ. ಇನ್ನು 'ಈ ಧರ್ಮ ಐದು ಸಾವಿರ ವರ್ಷಗಳಷ್ಟು ಹಳೆಯದು' ಎಂಬುದನ್ನು ಸಂಶೋಧಕ ದಿಗ್ಗಜರಾದ ಡಾ.ಎಂ.ಎಂ.ಕಲಬುರ್ಗಿ ಅವರಾಗಲೀ, ಡಾ.ಎಂ.ಚಿದಾನಂದ ಮೂರ್ತಿ ಅವರಾಗಲೀ ಒಪ್ಪಿಲ್ಲ. ‘ಎಂ.ಬಿ.ಪಾಟೀಲ ಮತ್ತು ವಿನಯ ಕುಲಕರ್ಣಿಯವರ ಪರಿಸ್ಥಿತಿ ಗಂಭೀರವಾಗಿದೆ. ಅವರ ಸೋಲಿಗೆ ಅವರೇ ಕಾರಣ' ಎಂಬ ಭವಿಷ್ಯ ಹುಸಿಯಾದರೆ ಆಗ ಸ್ವಾಮಿಗಳು ಏನು ಮಾಡುತ್ತಾರೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT