ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Live| ಅನರ್ಹರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Last Updated 25 ಸೆಪ್ಟೆಂಬರ್ 2019, 10:49 IST
ಅಕ್ಷರ ಗಾತ್ರ

ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ‌ಬುಧವಾರ ಬೆಳಿಗ್ಗೆ 11ಕ್ಕೆ ಆರಂಭವಾಗಿದೆ. ರಾಜ್ಯದಲ್ಲೀಗ ಉಪ ಚುನಾವಣೆಯೂ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲರ ಗಮನ ಸುಪ್ರೀಂಕೋರ್ಟ್‌ ನೀಡುವ ತೀರ್ಪಿನತ್ತಲೇ ಕೇಂದ್ರೀಕರಿಸಿದೆ. ರಾಜ್ಯ ರಾಜಕಾರಣದ ಮುಂದಿನ ನಡೆ ನಿರ್ಧರಿಸಲು ಈ ಮಹತ್ವ ಪ್ರಕರಣದ ಕ್ಷಣಕ್ಷಣದ ಅಪ್‌ಡೇಟ್‌ ಇಲ್ಲಿ ಲಭ್ಯ

04.00–ಕಾಂಗ್ರೆಸ್ ಪರ ವಕೀಲರಿಂದ ಗುರುವಾರ ವಾದ ಮಂಡನೆ

04.00–ಅನರ್ಹರ ಅರ್ಜಿ ವಿಚಾರಣೆ ಗುರುವಾರಕ್ಕೆ ಮುಂದೂಡಿಕೆ

ಆನಂದ್ ಸಿಂಗ್ ಪರ ವಕೀಲ‌‌ ಸಜ್ಜನ್ ಪೂವಯ್ಯ ವಾದ ಆರಂಭ.

04.00–ಪಕ್ಷ‌ ತ್ಯಜಿಸಲು ಹೊರಟವರಿಗೂ ಆನಂದ್ ಸಿಂಗ್‌ಗೂ ಸಂಬಂಧ ಇಲ್ಲ.ಜಿಂದಾಲ್‌ಗೆ ಭೂಮಿ‌ ಕೊಟ್ಟಿದ್ದ ಸರ್ಕಾರದ‌ ವಿರುದ್ಧ ಪ್ರತಿಭಟನಾರ್ಥವಾಗಿ ರಾಜೀನಾಮೆ‌ ನೀಡಿದ್ದರೂ ಅನರ್ಹಗೊಳಿಸಲಾಗಿದೆ ಎಂದು ಹೇಳಿದ‌‌ ಸಜ್ಜನ್.

ಜೆಡಿಎಸ್ ಶಾಸಕರಾದ ಎಚ್.ವಿಶ್ವನಾಥ, ನಾರಾಯಣಗೌಡ, ಗೋಪಾಲಯ್ಯ ಪರ‌ ವಕೀಲ‌ ವಿಶ್ವನಾಥನ್‌ ವಾದ ಆರಂಭ

04.00–ನಾವು ಸಂದರ್ಭಾನುಸಾರ ರಾಜೀನಾಮೆ‌‌ ಸಲ್ಲಿಸಿದ್ದೇವೆ.ಸ್ಪೀಕರ್‌ ಹೊರಡಿಸಿರುವ ಅನರ್ಹತೆಯ ಆದೇಶಕ್ಕೆ‌ ತಡೆ‌ ನೀಡಬೇಕು ಎಂದು ಕೋರಿ‌ ವಾದ ‌ಮುಗಿಸಿದ ವಿಶ್ವನಾಥನ್.

ಅನರ್ಹ ಶಾಸಕ ಶ್ರೀಮಂತ ಪಾಟೀಲ ಪರ ವಕೀಲ ವಿ. ಗಿರಿ ವಾದ ಮಂಡನೆ

03.48–ಶ್ರೀಮಂತ ಪಾಟೀಲ ಅವರು ಅನಾರೋಗ್ಯದ ಕಾರಣ ಕುಟುಂಬದ ವೈದ್ಯರ ಸಲಹೆಯ ಮೇರೆಗೆ ಮುಂಬೈಗೆ ತೆರಳಿ‌ ಚಿಕಿತ್ಸೆ ಪಡೆದಿದ್ದು, ಕಲಾಪಕ್ಕೆ‌ ಹಾಜರಾಗಲು‌ಆಗದು ಎಂದು ತಿಳಿಸಿ ಸ್ಪೀಕರ್‌ಗೆ ಪತ್ರ ಬರೆದಿದ್ದರು. ಆದರೂ ಅವರ‌ ಆರೋಗ್ಯ ‌ಸ್ಥಿತಿಯ ಬಗ್ಗೆ ನಂಬಿಕೆ ಇಲ್ಲದಂತೆ ವರ್ತಿಸಿ ಅನರ್ಹಗೊಳಿಸಲಾಗಿದೆ ಎಂದು ತಿಳಿಸಿ ವಾದ ಪೂರ್ಣಗೊಳಿಸಿದ ಗಿರಿ

03.40–ಸ್ಪೀಕರ್‌ ರಮೇಶಕುಮಾರ್ ಕೈಗೊಂಡ ನಿರ್ಧಾರವನ್ನು ಈಗಿನ ಸ್ಪೀಕರ್‌ ಕಾಗೇರಿ ಪರ ಹಾಜರಾದ ವಕೀಲರು ಸಮರ್ಥಿಸಿಲ್ಲ.‌ ಶಾಸಕ ತನ್ನ ವಿವೇಚನೆಗೆ ಒಳಪಟ್ಟು ರಾಜೀನಾಮೆ ಸಲ್ಲಿಸಲು ಸ್ವತಂತ್ರ ಎಂದು ಹೇಳಿರುವುದು ಗಮನಾರ್ಹ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟ ವಕೀಲಗಿರಿ

03.20–ಶಂಕರ್ ಮತ್ತು ಶ್ರೀಮಂತ ಪಾಟೀಲ ಸಲ್ಲಿಸಿರುವ‌ ಅನರ್ಹತೆ ಪ್ರಶ್ನಿಸಿದ ಅರ್ಜಿಗೆ ನೀವು ಸೂಚಿಸಿದರೂ ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನೀವು ದಯವಿಟ್ಟು ಅನರ್ಹತೆ ರದ್ದುಪಡಿಸಿ ಎಂದು ಕೋರಿದ ಗಿರಿ.

ಸ್ಪೀಕರ್ ಪರ ವಕೀಲರನ್ನು ಕರೆಸಿ ವಿಲೀನ ಪ್ರಕ್ರಿಯೆ‌ ಕುರಿತು ಕೇಳಿದ ನ್ಯಾಯಪೀಠ‌.... ವಿಲೀನ ಕುರಿತ ಆದೇಶ ಆಗಿಲ್ಲ ಎಂದು ತಿಳಿಸಿದ‌ ಸ್ಪೀಕರ್‌ ಪರ‌ ಕಿರಿಯ‌ ವಕೀಲರು

03.10– ವಿಲೀನಗೊಳಿಸಲು ಪಕ್ಷ ಒಪ್ಪಿರುವ ದಾಖಲೆ ನೀಡಿಸ್ಪೀಕರ್ ರಮೇಶಕುಮಾರ ಅವರು ಶಂಕರ್‌ ಅವರಿಗೆ ತಿಳಿಸಿದ್ದರು.ಶಂಕರ್ ಅದನ್ನು ಕೊಟ್ಟಿರಲಿಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷದ ವಿಪ್ ಅವರಿಗೆ ಅನ್ವಯ ಆಗುವುದಿಲ್ಲ. ಅವರು ಸ್ವತಂತ್ರವಾಗಿಯೇ ಮುಂದುವರಿದಿದ್ದಾರೆ.‌ ನಾಳೆ ಈ ಬಗ್ಗೆ ಲಿಖಿತ ವಾದ ಸಲ್ಲಿಸುವುದಾಗಿ ಹೇಳಿದ ಕಾಂಗ್ರೆಸ್ ಪರ‌ ವಕೀಲ ‌ದೇವದತ್ತ‌ ಕಾಮತ್.

03.05–ವಿಲೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಸ್ವತಃ ಸ್ಪೀಕರ್‌ ಹೇಳಿದ್ದರು. ಕೇವಲ ಒಬ್ಬ ಶಾಸಕ ವಿಲೀನಗೊಳ್ಳಲಾಗದು. ಇಡೀ ಪಕ್ಷ‌ ವಿಲೀನಗೊಳ್ಳಬೇಕು ಎಂದು ತಿಳಿಸಿದ್ದರಿಂದ‌ ಕೆಪಿಜಿಪಿ ವಿಲೀನ ಪ್ರಕ್ರಿಯೆ‌ ಅಪೂರ್ಣವಾಗಿದೆ. ಆದರೂ ನಾನು ಕಾಂಗ್ರೆಸ್ ಶಾಸಕ ಎಂದು ಅನರ್ಹಗೊಳಿಸಲಾಗಿದೆ.

03.00–ಶಂಕರ್ ಅವರ ಕೆಪಿಜೆಪಿಯು ಮೈತ್ರಿ ಸರ್ಕಾರದ ಭಾಗ ಆಗಿರಲಿಲ್ಲ.‌ ಪಕ್ಷವನ್ನು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಸ್ಪೀಕರ್ ಈ ಕುರಿತ ಪ್ರಕ್ರಿಯೆಗೆ ಪಕ್ಷದ ಒಪ್ಪಿಗೆ ಪತ್ರ ನೀಡಿರುವುದು ಸರಿಯಿಲ್ಲ ಎಂದು ಕಳೆದ ಜೂನ್ ತಿಂಗಳಲ್ಲಿ ಲಿಖಿತವಾಗಿ ತಿಳಿಸಿ‌‌‌‌ ವಿಲೀನ‌ ಪ್ರಕ್ರಿಯೆಗೆ ಒಪ್ಪಿಗೆ ನೀಡಿರಲಿಲ್ಲ. ಹಾಗಾಗಿ ವಿಲೀನ ಪ್ರಕ್ರಿಯೆ ಪೂರ್ಣ ಆಗಿರಲಿಲ್ಲ.

02.55–ರಾಜೀನಾಮೆ ನೀಡದೆ ಅನರ್ಹಗೊಂಡಿರುವ ಶಾಸಕರಾದ ಶ್ರೀಮಂತ ಪಾಟೀಲ ಅವರ‌ ಪರ ವಕೀಲ ವಿ.ಗಿರಿ ಅವರಿಂದವಾದ ಮಂಡನೆ. ರಾಜೀನಾಮೆ ನೀಡದಿದ್ದರೂ ಅನರ್ಹಗೊಳಿಸಲಾಗಿದೆ ಎಂದು ನ್ಯಾಯಪೀಠಕ್ಕೆ‌ ಹೇಳಿದ‌ ಗಿರಿ.

ಅನರ್ಹ ಶಾಸಕಸುಧಾಕರ್‌ ಪರ‌ ವಕೀಲ ಸುಂದರಂ‌ ಅವರಿಂದ ವಾದ

02.49–ಈ ಪ್ರಕರಣದ‌ ತೀರ್ಪು ಹೊರಬೀಳುವವರೆಗೆ ಉಪಚುನಾವಣೆ ಮುಂದೂಡಬೇಕು ಎಂದು ತಿಳಿಸಿ‌ ವಾದ‌ಪ ಪೂರ್ಣಗೊಳಿಸಿದ ಸುಂದರಂ

02.47–ರಮೇಶಕುಮಾರ್‌ ಅವರ‌ ಆದೇಶವನ್ನು ಈಗಿನ‌ ಸ್ಪೀಕರ್‌ ಬೆಂಬಲಿಸುವುದಿಲ್ಲ.‌ ಅವರು ಕೈಗೊಂಡ ಅನರ್ಹತೆ‌ ನಿರ್ಧಾರವನ್ನು ಎತ್ತಿ ಹಿಡಿಯಬಾರದು

02.45–ರಾಜೀನಾಮೆ ನೀಡಿದಾಗ ಅದನ್ನು ಸ್ವೀಕರಿಸದೆ ಪಕ್ಷಾಂತರ‌ ನಿಷೇಧ‌ ಕಾಯ್ದೆ ಅಡಿ ಹೊರಹಾಕಲಾಗಿದೆ.‌ ಸ್ಪೀಕರ್ ನಿರ್ಧಾರವನ್ನು ಸ್ವತಃ ತುಷಾರ್ ಮೆಹ್ತಾ ಅವರೇ ಬೆಂಬಲಿಸಲಿಲ್ಲ. ಶಾಸಕರ ಹಕ್ಕುಗಳನ್ನು ಸ್ಪೀಕರ್‌ ಕಸಿಯಲಾಗದು

02.35–ಸ್ಪೀಕರ್ ಯಾವಾಗಲೂ ಸದನದೊಳಗೆ ಶಾಸಕರ ನಡವಳಿಕೆ ಬಗ್ಗೆ ನಿಗಾ ವಹಿಸಬೇಕೇ ವಿನಾ ಸದನದ ಹೊರಗಿನ‌ ನಡವಳಿಕೆಯನ್ನಲ್ಲ. ಅವರು ರಾಜೀನಾಮೆ‌ ಸ್ವಯಂ ಪ್ರೇರಿತವೇ ಎಂಬುದನ್ನು ಅರಿಯಬೇಕು.

02.30–ತುಷಾರ್‌ ಮೆಹ್ತಾ ವಾದ‌ ಮುಕ್ತಾಯ. ‌ಸುಧಾಕರ್‌ ಪರ‌ ವಕೀಲ ಸುಂದರಂ‌ ವಾದ ಆರಂಭ

ಸ್ಪೀಕರ್‌ ಪರ ತುಷಾರ್‌ ಮೆಹ್ತಾ ವಾದ ಮಂಡನೆ

02.26–ಭೋಜನ ವಿರಾಮದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದಅನರ್ಹರ‌ ಅರ್ಜಿ ವಿಚಾರಣೆ ಪುನಾರಂಭಗೊಂಡಿದೆ. ಸ್ಪೀಕರ್‌ ಪರ‌ ವಕೀಲ ತುಷಾರ್ ಮೆಹ್ತಾ ವಾದ ಮಂಡನೆ ಆರಂಭಿಸಿದ್ದಾರೆ. ‘ಆದೇಶದಲ್ಲಿ ‌ಸ್ಪೀಕರ್‌ ನಿಲುವು ತಿಳಿಸಲಾಗಿದೆ. ಕ್ಷೇತದ‌ ಜನತೆಗೆ ನೆರವಾಗುವುದು ಶಾಸಕರ ‌ಕೆಲಸ. ಆದರೆ ಕರ್ತವ್ಯ ಮರೆತು ಮುಂಬೈಗೆ ಹೋಗಿ ಕುಳಿತಿದ್ದನ್ನು ಆಕ್ಷೇಪಿಸಲಾಗಿತ್ತು. ರಾಜೀನಾಮೆಗೆ ಇರುವ ಹಕ್ಕು ಕ್ಷೇತ್ರದ ಜನರ ಕಾಳಜಿಗಳನ್ನು ಮರೆಯುವಂತೆ ಹೇಳುವುದಿಲ್ಲ.‌ ಅನರ್ಹತೆಗೆ ಒಳಗಾದವರು ವೈಯಕ್ತಿಕ ಲಾಭ ಅರಸಿ‌ ಹೋಗುವುದು ಸೂಕ್ತವೇ? ಗೋವಾದಲ್ಲಿ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದವರು ಕೈಗೊಂಡ‌ ನಿರ್ಧಾರ ಅವರನ್ನು ಅನರ್ಹಗೊಳಿಸುವುದರಿಂದ‌ ತಡೆಯಿತು.‌ ಆದರೆ ಕರ್ನಾಟಕದಲ್ಲಿ ಶಾಸಕರ ರಾಜೀನಾಮೆಯು ಆ ಮಾದರಿಯಲ್ಲಿ ಇರಲಿಲ್ಲ ಎಂದು ಮೆಹ್ತಾ ವಾದಿಸಿದ್ದಾರೆ.

ಅನರ್ಹ ಶಾಸಕ ಸುಧಾಕರ್‌ಪರ‌ ವಕೀಲ ಸುಂದರಂ‌ ಅವರಿಂದ ವಾದ

12.53–ಭೋಜನ ವಿರಾಮ ನೀಡಿದ್ದು, ಮಧ್ಯಾಹ್ನ 2ರ ನಂತರ ವಿಚಾರಣೆ ಮುಂದುವರಿಯಲಿದೆ.

12.48–ರಾಜೀನಾಮೆ ನೀಡಿದ ಬಳಿಕ ನಾವು ಸ್ವತಂತ್ರರು. ನಾವು ಸ್ವತಂತ್ರವಾಗಿ ಅಥವಾ ಬೇರಾವುದೇ ಪಕ್ಷದ ಚಿಹ್ನೆಯ ಅಡಿ ಚುನಾವಣೆಗೆ ಸ್ಪರ್ಧೆ ಮಾಡಬಹುದು.–ಸುಂದರಂ

12.46–ಶಾಸಕ‌ ರಾಜೀನಾಮೆ‌ ನೀಡಿ ಬೇರೆ ಪಕ್ಷ‌ ಸೇರಬಹುದು.‌ ಸಂದರ್ಭಾನುಸಾರ‌ ತೀರ್ಮಾನ ಕೈಗೊಳ್ಳಬೇಕಾಗುತ್ತದೆ.‌ ಇತರರನ್ನು ಹಿಂಬಾಲಿಸಲು ನಾವು ಕುರಿಗಳಲ್ಲ. ನಾವು ರಾಜೀನಾಮೆ‌ ನೀಡಿದ್ದೇವೆ ಎಂದರೆ ಕಳಂಕಿತರು‌‌ ಎಂಬ ಅರ್ಥವಲ್ಲ–ಸುಂದರಂ

12.45–ರಾಜೀನಾಮೆ ಕೊಟ್ಟ ತಕ್ಷಣ ಪಕ್ಷ ತ್ಯಜಿಸಿದಂತಲ್ಲ. ಪಕ್ಷವನ್ನು ತ್ಯಜಿಸುವುದು ಯಾವುದೇ ಪಾಪ ಅಲ್ಲ. ಸರ್ಕಾರದ ಮೇಲೆ ವಿಶ್ವಾಸ ಇಲ್ಲದಿದ್ದರೆ ಹೊರ ಬರಬಹುದು. –ಸುಂದರಂ

12.40–ಸುಧಾಕರ್‌ ಪಕ್ಷವಿರೋಧಿ ಚಟುವಟಿಕೆ ಮಾಡಿಲ್ಲ, ಮೋಸ ಮಾಡಿಲ್ಲ–ಸುಂದರಂ

12.35–ಪಕ್ಷವನ್ನು ಬಿಟ್ಟರೆ ಅಥವಾ ಪಕ್ಷವಿರೋಧಿ ಚಟುವಟಿಕೆ ನಡೆಸಿದರೆ ಮಾತ್ರ ಪಕ್ಷಾಂತರ‌ ನಿಷೇಧ ಕಾಯ್ದೆ‌ ಅಡಿ ಕ್ರಮ‌ ಕೈಗೊಳ್ಳಬಹುದು.‌ ಆದರೆ, ಸ್ಪೀಕರ್‌ ಈ ಯಾವ ಚಟುವಟಿಕೆ ಇಲ್ಲದೆಯೇ ಅನರ್ಹಗೊಳಿಸಿದ್ದಾರೆ-ಸುಧಾಕರ್‌ ಪರ ವಕೀಲ ಸುಂದರಂ

12.30–ರಾಜೀನಾಮೆ ನೀಡಿದ್ದೇನೆ, ಆದರೆ ವಿಪ್‌ ಉಲ್ಲಂಘನೆ ಮಾಡಿಲ್ಲ ಎಂದು ಶಾಸಕ ಸುಧಾಕರ್‌ ತಿಳಿಸಿದ್ದಾರೆ. ಸರ್ಕಾರದ ಮೇಲೆ ನನಗೆ ವಿಶ್ವಾಸ ಇರಲಿಲ್ಲ. ಹಾಗಾಗಿ ರಾಜೀನಾಮೆ ನೀಡಿದ್ದೇನೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಹಾದಿಯಲ್ಲೇ ಹೋಗಿದ್ದೇನೆ. ನಾನು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಆದರು, ಅವರನ್ನು ಅನರ್ಹಗೊಳಿಸಲಾಗಿದೆ.

12.28–ಈಗ ಅನರ್ಹ ಶಾಸಕ‌‌ ಸುಧಾಕರ್‌ ಪರ ವಕೀಲ ಸುಂದರಂ ವಾದ ಆರಂಭ.

ಅನರ್ಹರ ಪರ‌ ‌ವಕೀಲ‌ ಮುಕುಲ್‌ ರೋಹಟಗಿ ವಾದ

12.25–ಕೇಂದ್ರ ಚುನಾವಣಾ ಆಯೋಗಅನರ್ಹರು ಸ್ಪರ್ಧೆ ಮಾಡಬಹುದು ಎಂದು ಹೇಳಿದೆ. ಆಯೋಗದ ವಕೀಲ ರಾಕೇಶ್ ದ್ವಿವೇದಿ ಸ್ಪರ್ಧೆ ಬಗ್ಗೆ ಹೇಳಿದ್ದಾರೆ.‌ ಆದರೆ, ಆಯೋಗದ‌ ರಾಜ್ಯ ಘಟಕ ಸ್ಪರ್ಧೆಗೆ ಅವಕಾಶ ಇಲ್ಲ ಎಂದಿದೆ ಎಂದು ಹೇಳಿ ವಾದ ಪೂರ್ಣಗೊಳಿಸಿದ ರೋಹಟಗಿ.

12.25–ಅನರ್ಹರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ಚುನಾವಣಾ ಆಯೋಗ ನೀಡಿದ್ದಹೇಳಿಕೆಯನ್ನು ಉಲ್ಲೇಖಿಸಿದ ಮುಕುಲ್‌ ರೋಹಟಗಿ

12.20–ಶಾಸಕರ ರಾಜೀನಾಮೆ ಬಾಕಿ ಉಳಿಸಿಕೊಂಡು, ಅನರ್ಹಗೊಳಿಸಿದ್ದಾರೆ. ಈ ಮೂಲಕ ಸ್ಪೀಕರ್‌ ತಾರತಮ್ಯ ಮಾಡಿದ್ದಾರೆ. ಇದು ಸರಿಯಲ್ಲ.–ಮುಕುಲ್ ರೋಹಟಗಿ.

12.12–ಶಾಕರಾಗಿದ್ದ ರಮೇಶ್ ಜಾರಕಿಹೋಳಿ, ಮಹೇಶ್ ಕುಮಠಳ್ಳಿ, ಬಿ. ನಾಗೇಂದ್ರ, ಉಮೇಶ್‌ ಜಾಧವ್, ಪ್ರತಾಪಗೌಡ ಪಾಟೀಲ್ ಅವರ ಮೇಲೆ ಒಂದೇ ರೀತಿಯ ಆರೋಪ ಇತ್ತು. ಸ್ಪೀಕರ್ ಮಾತ್ರ ಬೇರೆ ರೀತಿಯ ಆದೇಶ‌ ನೀಡಿದ್ದಾರೆ.–ಮುಕುಲ್ ರೋಹಟಗಿ.

12.09–ವಿಧಾನಸಭೆ ಕಲಾಪಗಳ‌ ಹಿತ‌ ಕಾಯಬೇಕಿರುವ ಸ್ಪೀಕರ್‌ ರಾಜಕೀಯ ಪಕ್ಷಗಳ ವಕಾಲತ್ತು ವಹಿಸಬಾರದು. ಸರ್ಕಾರ ಪತನಗೊಳ್ಳಲಿ ಬಿಡಲಿ ಅದು ಅವರಿಗೆ ಸಂಬಂಧಿಸಿದ್ದಲ್ಲ.‌‌ ಆದರೂ ಸ್ಪೀಕರ್ ಮುಖ್ಯಾಧ್ಯಾಪಕರಂತೆ‌ ವರ್ತಿಸಿ‌ ಶಾಸಕರನ್ನು ನಿಯಂತ್ರಿಸಲು ನೋಡಿದರು. ಸುಪ್ರೀಂ ಕೋರ್ಟ್ ಸೂಚಿಸಿದರೂ ಅವರು ಸಮರ್ಪಕವಾದ ರೀತಿಯಲ್ಲಿ ಶಾಸಕರನ್ನು ವಿಚಾರಣೆಗೆ ಒಳಪಡಿಸಲಿಲ್ಲ.–ಮುಕುಲ್ ರೋಹಟಗಿ.

12.07–ಉಮೇಶ್ ಜಾಧವ್‌ ಪ್ರಕರಣದಂತೆಯೂ ಈ ಪ್ರಕರಣದಲ್ಲೂ ಸ್ಪೀಕರ್‌ ನಿರ್ಧಾರ ಕೈಗೊಳ್ಳಬೇಕಿತ್ತು.–ಮುಕುಲ್ ರೋಹಟಗಿ.

12.05–ನಾವು ರಾಜೀನಾಮೆ‌ ಸಲ್ಲಿಸಿರುವ‌ ಬಗ್ಗೆ ರಾಜ್ಯಪಾಲರಿಗೂ ಮಾಹಿತಿ ನೀಡಿದ್ದೆವು. ಆದರೂ ನಮ್ಮನ್ನು ಅನರ್ಹಗೊಳಿಸಲಾಯಿತು.‌ ಉಮೇಶ್‌ ಜಾಧವ್ ಅವರು ಸಲ್ಲಿಸಲಾದ ರಾಜೀನಾಮೆಯನ್ನು ಸ್ವೀಕರಿಸಿರುವ ಇದೇ ಸ್ಪೀಕರ್‌ ಮಿಕ್ಕವರನ್ನು ಅನರ್ಹಗೊಳಿಸಿದ್ದೇಕೆ?–ಮುಕುಲ್ ರೋಹಟಗಿ.

12.03– ಅನರ್ಹತೆಯ ಹಣೆಪಟ್ಟಿ ಹೊತ್ತುಕೊಂಡು ಚುನಾವಣೆ ಎದುರಿಸಲು ನಮ್ಮ‌ ಕಕ್ಷಿದಾರರಿಗೆ ಮನಸ್ಸಿಲ್ಲ.‌ ಹಾಗಾಗಿ ಅನರ್ಹತೆಗೇ ತಡೆ ನೀಡಿ.–ಮುಕುಲ್ ರೋಹಟಗಿ.

12.02– ಸರ್ಕಾರ ಉಳಿಯುತ್ತೋ, ಉರುಳುತ್ತೋ ಅನ್ನೋದು ಸದನಕ್ಕೆ ಸಂಬಂಧಿಸಿದ ವಿಷಯ. ಸ್ಪೀಕರ್‌ಗೂ ಇದಕ್ಕೂ ಸಂಬಂಧವಿಲ್ಲ. ಎಲ್ಲವನ್ನೂ ಪ್ರಶ್ನಿಸಲು ಸ್ಪೀಕರ್‌ ಏನು ಹೆಡ್‌ ಮೇಷ್ಟ್ರೇ?–ಮುಕುಲ್ ರೋಹಟಗಿ.

11.57– ಶಾಸಕರು ಮುಂಬೈಗೆ ಹೋಗಿದ್ದನ್ನು ಪ್ರಶ್ನಿಸುವ ಹಕ್ಕು ಸ್ಪೀಕರ್‌ಗೆ ಇಲ್ಲ. ಶಾಸಕರಿಗೆ ಸ್ವಾತಂತ್ರ್ಯ ಇದೆ. –ಮುಕುಲ್ ರೋಹಟಗಿ.

11.52–ರಾಜೀನಾಮೆ ಹಿಂಪಡೆಯಲು ಶಾಸಕರ ಮೇಲೆ ಒತ್ತಡ ಹೇರಲಾಗಿದೆ. ಸ್ಪೀಕರ್‌ ದುರುದ್ದೇಶದಿಂದ ವರ್ತಿಸಿದ್ದಾರೆ.–ಮುಕುಲ್ ರೋಹಟಗಿ

11.49– ಸ್ಪೀಕರ್‌ಗೆ ರಾಜೀನಾಮೆ ನೀಡಿದ ಬಳಿಕ ಶಾಸಕರು ರಾಜ್ಯಪಾಲರ ಗಮನಕ್ಕೂ ತಂದಿದ್ದರು. ರಾಜೀನಾಮೆ ಪ್ರಕ್ರಿಯೆಯನ್ನು ಮುಚ್ಚಿಟ್ಟಿಲ್ಲ. –ಮುಕುಲ್ ರೋಹಟಗಿ

11.47–ರಾಜೀನಾಮೆ ಮತ್ತು ಅನರ್ಹತೆಯಿಂದ ಶಾಸಕ ಸ್ಥಾನ ತೆರವಾಗುತ್ತದೆ.‌ ರಾಜೀನಾಮೆ ಸ್ವೀಕರಿಸದೆ ಅನರ್ಹಗೊಳಿಸಿದ್ದನ್ನು ಕೋರ್ಟ್‌ನಲ್ಲಿಪ್ರಶ್ನಿಸಿರುವ‌ ಅರ್ಜಿ ವಿಚಾರಣೆ ಬಾಕಿ ಇದೆ.‌ ಚುನಾವಣೆ ಈಗಲೇ ಘೋಷಣೆ‌ ಆಗಿದೆ. ಸ್ಪರ್ಧೆಯಿಂದ ಅನರ್ಹರು ವಂಚಿತಗೊಳ್ಳಬಾರದು. ಹಾಗಾಗಿ ತಡೆ‌ ನೀಡಿ.–ಮುಕುಲ್ ರೋಹಟಗಿ

11.44– ನಾವು ಸ್ಪೀಕರ್‌ ಆದೇಶವನ್ನಷ್ಟೇ ಪ್ರಶ್ನೆ ಮಾಡ್ತಿದ್ದೇವೆ. 2023ರವರೆಗೂ ಕಕ್ಷಿದಾರರು ಸ್ಪರ್ಧಿಸುವಂತಿಲ್ಲ ಅಂತ ಸ್ಪೀಕರ್ ಆದೇಶ ತಿಳಿಸುತ್ತೆ. ನಾವು ಅದನ್ನು ಪ್ರಶ್ನಿಸುತ್ತಿದ್ದೇವೆ. ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ನಾವು ಪ್ರಶ್ನಿಸುತ್ತಿಲ್ಲ. –ಮುಕುಲ್ ರೋಹಟಗಿ

11.43–ಅನರ್ಹ ಶಾಸಕರು ಸಂವಿಧಾನದ ಸೆಕ್ಷನ್ 364'ಬಿ' ಪ್ರಕಾರ ಯಾವುದೇ‌ ಸರ್ಕಾರಿ ಹುದ್ದೆಗೆ ನೇಮಕಗೊಳ್ಳಲು ಅವಕಾಶವಿಲ್ಲ.ಆದರೆ ಅವರು ಮರು ಆಯ್ಕೆ ಆದರೆ ಅವರಿಗೆ ಈ ಹುದ್ದೆಗಳಿಗೆನೇಮಕ ಆಗಬಹುದು. ಶಾಕಸರ ರಾಜೀನಾಮೆಯನ್ನು ತಪ್ಪಾಗಿ ಅರ್ಥೈಸಿ ವಜಾ ಮಾಡಲಾಗಿದೆ‌. ರಾಜೀನಾಮೆ ನೈಜವಲ್ಲ,‌ ಸ್ವ ಇಚ್ಛೆಯಿಂದ ನೀಡಿದ್ದಲ್ಲ ಎಂದು ಹೇಳಿರುವ ಸ್ಪೀಕರ್ ಯಾವುದೇ ಸಾಕ್ಷ್ಯಾಧಾರ ನೀಡಿಲ್ಲ. ಆದರೂ ಅನರ್ಹಗೊಳಿಸಲಾಗಿದೆ.–ಮುಕುಲ್ ರೋಹಟಗಿ

11.40– ಚುನಾವಣಾ ಆಯೋಗವನ್ನೂ ಪ್ರತಿವಾದಿಯಾಗಿಸಿ –ಮುಕುಲ್ ರೋಹಟಗಿ ಮನವಿ.

11.39–ರಾಜೀನಾಮೆ ಸರಿಯಿದೆಯಾ ಇಲ್ವಾ ಮೊದಲು ನೋಡಬೇಕು. ಅವರು ಎಲ್ಲಿ ರಾಜೀನಾಮೆ ನೀಡಿದ್ದಾರೆ ಎನ್ನುವುದು ಮುಖ್ಯವಾಗುವುದಿಲ್ಲ. ಅನರ್ಹರಿಗೆ ಸ್ಪರ್ಧಿಸಲು ಅವಕಾಶ ಕೊಡಿ ಅಥವಾ ಚುನಾವಣೆಗೆ ತಡೆ ನೀಡಿ. –ಮುಕುಲ್ ರೋಹಟಗಿ ವಾದ

11:32 – ಚುನಾಯಿತರನ್ನು ಅನರ್ಹಗೊಳಿಸಲು ಅನೇಕ‌‌ ನಿಯಮಗಳೂ, ಕಾರಣಗಳೂ ಇವೆ. ಆದರೆ, ನಿಯಮವನ್ನೇ ಉಲ್ಲಂಘಿಸಿ ಅನರ್ಹಗೊಳಿಸಿದರೆ ಹೇಗೆ? ರಾಜೀನಾಮೆ‌ ನೀಡುವವರು ಪೂರ್ವಾಪರ ಆಲೋಚಿಸಿ‌ ನೀಡುತ್ತಾರೆ. ಆದರೂ ಬೇರೆ ಕಾರಣ‌ ನೀಡಿ‌‌ ರಾಜೀನಾಮೆ‌‌ ತಿರಸ್ಕರಿಸಿ ಅನರ್ಹಗೊಳಿಸಿರುವುದು ಸರಿಯಲ್ಲ. ರಾಜೀನಾಮೆ ತಿರಸ್ಕರಿಸಲೂ ಸಮರ್ಪಕ ಉತ್ತರ ನೀಡಲಾಗಿಲ್ಲ. ಚುನಾವಣೆಗೆ ಸ್ಪರ್ಧಿಸದಂತೆ ಸೂಚಿಸಿರುವುದೂ ಸರಿಯಲ್ಲ. ಕೂಡಲೇ ಚುನಾವಣೆ ಪ್ರಕ್ರಿಯೆಯನ್ನು ಎರಡರಿಂದ ಮೂರು ತಿಂಗಳು ಮುಂದೂಡಬೇಕು.ಇಲ್ಲವೇ ತಡೆ ನೀಡಬೇಕು. ಅಥವಾ ಸ್ಪರ್ಧೆಗೆ ಅವಕಾಶ‌ ನೀಡಬೇಕು.–ಮುಕುಲ್‌ ರೋಹಟಗಿ.

11:32 –ಚುನಾಯಿತರನ್ನು ಅನರ್ಹಗೊಳಿಸಲು ಅನೇಕ‌‌ ನಿಯಮಗಳೂ, ಕಾರಣಗಳೂ ಇವೆ. ಆದರೆ, ನಿಯಮವನ್ನೇ ಉಲ್ಲಂಘಿಸಿ ಅನರ್ಹಗೊಳಿಸಿದರೆ ಹೇಗೆ? ರಾಜೀನಾಮೆ‌ ನೀಡುವವರು ಪೂರ್ವಾಪರ ಆಲೋಚಿಸಿ‌ ನೀಡುತ್ತಾರೆ. ಆದರೂ ಬೇರೆ ಕಾರಣ‌ ನೀಡಿ‌‌ ರಾಜೀನಾಮೆ‌‌ ತಿರಸ್ಕರಿಸಿ ಅನರ್ಹಗೊಳಿಸಿರುವುದು ಸರಿಯಲ್ಲ. ರಾಜೀನಾಮೆ ತಿರಸ್ಕರಿಸಲೂ ಸಮರ್ಪಕ ಉತ್ತರ ನೀಡಲಾಗಿಲ್ಲ. ಚುನಾವಣೆಗೆ ಸ್ಪರ್ಧಿಸದಂತೆ ಸೂಚಿಸಿರುವುದೂ ಸರಿಯಲ್ಲ. ಕೂಡಲೇ ಚುನಾವಣೆ ಪ್ರಕ್ರಿಯೆಯನ್ನು ಎರಡರಿಂದ ಮೂರು ತಿಂಗಳು ಮುಂದೂಡಬೇಕು.ಇಲ್ಲವೇ ತಡೆ ನೀಡಬೇಕು. ಅಥವಾ ಸ್ಪರ್ಧೆಗೆ ಅವಕಾಶ‌ ನೀಡಬೇಕು.–ಮುಕುಲ್‌ ರೋಹಟಗಿ.

11:28–ರಾಜೀನಾಮೆಯನ್ನು ಸ್ವೀಕರಿಸದೆ, ರಾಜೀನಾಮೆಸ್ವಯಂಪ್ರೇರಿತ‌ ಅಲ್ಲ. ಇತರರ ಪ್ರಭಾವಕ್ಕೆ‌ ಒಳಗಾಗಿದ್ದಾರೆ ಎಂದು ಸ್ಪೀಕರ್‌ ಯಾಕೆ‌ ಹೇಳುತ್ತಾರೆ? ರಾಜೀನಾಮೆ‌ ನೀಡುವಂತೆ ಯಾರೂ ಶಾಸಕರನ್ನು ಬೆದರಿಸಿಲ್ಲ. ಅಲ್ಲದೆ, ರಾಜೀನಾಮೆ‌ ನೀಡುವುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ. ಅವರು ಈಗಿರುವ ‌ಪಕ್ಷದಿಂದ ಬೇಸತ್ತಿರಬಹುದು, ಬೇರೆ ಪಕ್ಷ‌‌ಸೇರಲು ಅಣಿಯಾಗಿರಬಹುದು ಅಥವಾ ತಾವೇ ಒಂದು ಪಕ್ಷ‌‌ ಸ್ಥಾಪಿಸಲೂಬಹುದು ಅಲ್ಲವೇ? ಆದರೂ ರಾಜೀನಾಮೆ ಸ್ವೀಕರಿಸದೆ ಅನರ್ಹಗೊಳಿಸಿದ್ದು ಸರಿಯಲ್ಲ.–ಮುಕುಲ್ ರೋಹಟಗಿ

11:25–ಶಾಸಕರು ಮುಂಬೈಗೆ ಹೋಗಿದ್ದಾರೆ. ವಿಶೇಷ ವಿಮಾನದಲ್ಲಿ ತೆರಳಿದ್ದಾರೆ ಎಂಬ ಸಬೂಬು ನೀಡಿದರು. ವಿಶ್ವಾಸಮತದಲ್ಲಿ ವಿಪ್ ಉಲ್ಲಂಘಿಸುವ ಆರೋಪ ಮಾಡಬಹುದು ಎಂದೇ ಸುಪ್ರೀಂ ಕೋರ್ಟ್ ಸಹ ರಾಜೀನಾಮೆ ನೀಡಿದ ಶಾಸಕರನ್ನು ವಿಧಾನಸಭೆಗೆ ‌ಹಾಜರಾಗುವಂತೆ ಒತ್ತಡ ಹೇರುವಂತಿಲ್ಲ ಎಂದು ಆದೇಶಿಸಿತ್ತು.–ಮುಕುಲ್ ರೋಹಟಗಿ

11:22–ರೋಷನ್‌ ಬೇಗ್ ಪ್ರಕರಣದಲ್ಲೂ ಹೀಗೇ ಮಾಡಲಾಗಿದೆ. ಎಲ್ಲರೂ ಸ್ವಯಂ ಪ್ರೇರಣೆಯಿಂದ‌ ರಾಜೀನಾಮೆ ಸಲ್ಲಿಸಿಲ್ಲ. ಬೇರೆಯವರಿಂದ ಪ್ರಭಾವಕ್ಕೆ‌ ಒಳಗಾಗಿ ಸಲ್ಲಿಸಲಾಗಿದೆ‌‌‌ ಎಂದು ಸ್ಪೀಕರ್‌ ಹೇಳಿದರಲ್ಲದೆ, ನನಗೆ ಖುದ್ದಾಗಿ ಸಲ್ಲಿಸಲಾಗಿಲ್ಲ ಎಂದೂ ರಾಗ ತೆಗೆದಿದ್ದರು.–ಮುಕುಲ್ ರೋಹಟಗಿ

  • 11:19 – ಅನರ್ಹರ ಪರ‌ ‌ವಕೀಲ‌ ಮುಕುಲ್‌ ರೋಹಟಗಿ ವಾದ ಆರಂಭಿಸಿದ್ದು, ಪ್ರತಾಪಗೌಡ ಪಾಟೀಲ 6ನೇ ಜುಲೈ‌ಗೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಸ್ವೀಕರಿಸುವಂತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆನಂದ್ ಸಿಂಗ್ ಇದಕ್ಕೂ ಐದು ದಿನ ಮೊದಲೇ ರಾಜೀನಾಮೆ ನೀಡಿದ್ದರು. ಆದರೂ‌ ಅದನ್ನು ಸ್ವೀಕರಿಸದೆ ಅನರ್ಹಗೊಳಿಸಲಾಗಿದೆ ಎಂದು ತಿಳಿಸಿದರು.
  • 11:15 – ನವದೆಹಲಿ: ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಬುಧವಾರ ಬೆಳಿಗ್ಗೆ 11ಕ್ಕೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT