ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆ ನೀಡಿದ ವೈದ್ಯರಿಗೆ ಸೋಂಕು: ರಾಜ್ಯದಲ್ಲಿ ಕೋವಿಡ್-19 ಬಾಧಿತರ ಸಂಖ್ಯೆ 10

Last Updated 17 ಮಾರ್ಚ್ 2020, 5:42 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟದಲ್ಲಿ ಕೋವಿಡ್-19 ಸೋಂಕು ತಗಲಿರುವ ಎರಡು ಪ್ರಕರಣಗಳು ಮಂಗಳವಾರ ಪತ್ತೆಯಾಗಿದ್ದು, ರೋಗಿಗಳ ಸಂಖ್ಯೆ 10ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ 39ಕ್ಕೆ ಏರಿಕೆಯಾಗಿದ್ದು ದೇಶದಲ್ಲಿ ಕೋವಿಡ್-19 ಸೋಂಕು ಪ್ರಕರಣ ಸಂಖ್ಯೆ 127 ಆಗಿದೆ. ಏತನ್ಮಧ್ಯೆ, ಉತ್ತರಾಖಂಡ್‌ನಲ್ಲಿ ಮೊದಲ ಕೋವಿಡ್- 19 ಪ್ರಕರಣ ವರದಿಯಾಗಿದೆ. ಮಂಗಳವಾರ ಉತ್ತರ ಪ್ರದೇಶದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾ ವೈರಸ್ ಸೋಂಕಿನಿಂದ ಕಲಬುರ್ಗಿಯಲ್ಲಿ 76ರ ಹರೆಯದ ವೃದ್ಧೆ ಸಾವಿಗೀಡಾಗಿದ್ದರು.ಈಕೆಗೆ ಚಿಕಿತ್ಸೆ ನೀಡಿದ 63ರ ಹರೆಯದ ವೈದ್ಯರಿಗೆ ಕೊರೊನಾ ಸೋಂಕು ಇರುವುದಾಗಿ ದೃಢಪಟ್ಟಿದೆ. ವೈದ್ಯ ಮತ್ತು ಅವರ ಕುಟುಂಬವನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ ನಿಗಾ ಇಡಲಾಗಿದೆ. ಇವತ್ತು ಅವರನ್ನು ಐಸೋಲೇಷನ್ ವಾರ್ಡ್‌ಗೆ ಕಳುಹಿಸಲಾಗುವುದು ಎಂದುಕಲಬುರ್ಗಿ ಉಪ ಆಯುಕ್ತ ಶರತ್.ಬಿ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ಟ್ವೀಟಿಸಿದೆ.

ವಿದೇಶಿಯರಿಗೆ ಪ್ರವೇಶ ನಿಷೇಧಿಸಿದ ಚೀನಾ

ಕೊರೊನಾ ವೈರಸ್ ಭೀತಿಯಿಂದ ರಷ್ಯಾ ತಮ್ಮ ಎಲ್ಲ ಗಡಿಭಾಗಗಳನ್ನು ಮುಚ್ಚಿದ್ದು, ವಿದೇಶಿಯರ ಪ್ರವೇಶಕ್ಕೆ ನಿಷೇಧ ವಿಧಿಸಿರುವುದಾಗಿ ಪ್ರಧಾನಿ ಮಿಖೈಲ್ ಮಿಷುಸ್ಟಿನ್ ಹೇಳಿದ್ದಾರೆ.ಸೋಮವಾರ ಮಧ್ಯರಾತ್ರಿಯಿಂದಲೇ ಈ ಆದೇಶ ಜಾರಿಯಾಗಿದ್ದು ಮೇ.1ರ ತನಕ ಈ ನಿಷೇಧ ಇರಲಿದೆ.

ಕೊರೊನಾ ವೈರಸ್ ಸೋಂಕು ವಿರುದ್ಧ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಭಾರತಕ್ಕಿರುವವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಹೆಂಕ್ ಬೆಕೆಡಮ್ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT