ಕರುಣಾನಿಧಿ ಆರೋಗ್ಯ ಸುಧಾರಣೆ, 2–3 ದಿನಗಳಲ್ಲಿ ಮನಗೆ ವಾಪಸ್‌: ಡಿಎಂಕೆ

7

ಕರುಣಾನಿಧಿ ಆರೋಗ್ಯ ಸುಧಾರಣೆ, 2–3 ದಿನಗಳಲ್ಲಿ ಮನಗೆ ವಾಪಸ್‌: ಡಿಎಂಕೆ

Published:
Updated:

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರು ಚೇತರಿಸಿಕೊಂಡಿಗಿದ್ದು, ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ದೊರೈಮುರುಗನ್‌ ಶನಿವಾರ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕಳೆದ ವಾರಕ್ಕೆ ಹೋಲಿಸಿದರೆ ಕರುಣಾನಿಧಿ ಅವರ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ನಾವು ಹೇಳುವುದನ್ನು ಕೇಳಿಸಿಕೊಳ್ಳುವಷ್ಟು ಸಮರ್ಥರಾಗಿದ್ದಾರೆ. ಅವರು ತಮ್ಮ ಸಂಕಷ್ಟದ ದಿನಗಳನ್ನು ಜಯಿಸಿದ್ದಾರೆ. ಆರೋಗ್ಯದ ಏರಿಳಿತಗಳಲ್ಲಿ ಚೇತರಿಕೆಯಾಗಿದೆ. ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ಮನೆಗೆ ಮರಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

94 ವಯಸ್ಸಿನ ಕರುಣಾನಿಧಿ ಅವರನ್ನು ಅನಾರೋಗ್ಯದ ಕಾರಣ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ಅವರು ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !